ಸಂಸತ್ನಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯ ಸಂಸತ್ ಆವರಣದಲ್ಲಿ ಕಾಂಗ್ರೆಸ್-ಬಿಜೆಪಿ ಹೈಡ್ರಾಮವೇ ನಡೀತಿದೆ. ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮಿತ್ ಶಾ ಹೇಳಿಕೆ ಅಂಬೇಡ್ಕರ್ಗೆ ಅಪಮಾನ ಎಂದು ಅಂಬೇಡ್ಕರ್ ಫೋಟೋ ಹಿಡಿದು ಸಂಸತ್ ಮಕರ ದ್ವಾರದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.
ಇದಕ್ಕೆ ಬಿಜೆಪಿಯಿಂದಲೂ ಕೌಂಟರ್ ಪ್ರೊಟೆಸ್ಟ್ ನೆಡೆಯುತ್ತಿದೆ. ಬಿಜೆಪಿ ಸಂಸದರೂ ಸಹ ಕಾಂಗ್ರೆಸ್ ವಿರುದ್ದ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಂಸತ್ ಆವರಣದಲ್ಲಿ ತಳ್ಳಾಟ-ನೂಕಾಟ ನಡೆದಿದೆ. ಅದರಲ್ಲಿ ಸಂಸತ್ ಮೆಟ್ಟಿಲಲ್ಲಿ ಕುಸಿದು ಬಿದ್ದಿದ್ದಾರೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ. ಬಿದ್ದ ಪರಿಣಾಮ ಸಂಸದರ ತಲೆಗೆ ಗಾಯವಾಗಿದೆ.
ರಾಹುಲ್ ಗಾಂಧಿ ನನ್ನ ತಳ್ಳಿದ್ರು ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದಾರೆ. ಆದರೆ ನಾನೇನೂ ತಳ್ಳಿಲ್ಲ.. ಅವರೇ ಬಿದ್ದಿದ್ದು ಎಂದು ರಾಹುಲ್ ಗಾಂಧಿ ಆರೋಪವನ್ನ ತಳ್ಳಿಹಾಕಿದ್ದಾರೆ. ಆ ಸಂಸದರೇ ಬಂದು ನನ್ನ ಮೇಲೆ ಬಿದ್ದರು ಎಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದ ನಾನೇನು ತಳ್ಳಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂಸತ್ ಆವರಣದಲ್ಲಿ ಕಾಂಗ್ರೆಸ್-ಬಿಜೆಪಿ ಹೈಡ್ರಾಮ ಜೋರಾಗಿದೆ.