ಹಾಸನದ ಜನ ಕಲ್ಯಾಣ ಸಮಾವೇಶ ಸಕ್ಸಸ್ ಆದ ಬೆನ್ನಲ್ಲೇ ಮತ್ತೊಂದು ಸಮಾವೇಶಕ್ಕೆ ಮುಂದಾಗಿದೆ ಕಾಂಗ್ರೆಸ್ ಪಕ್ಷ. ಹೌದು.. ಹಳೇ ಮೈಸೂರು ಭಾಗದ ಹಾಸನದಲ್ಲಿ ಸರ್ಕಾರಕ್ಕೆ ಜನರ ಬೆಂಬಲಕ್ಕೆ ಮಾರು ಹೋಗಿದೆ ರಾಜ್ಯ ಸರ್ಕಾರ. ಈಗ ಉತ್ತರ ಕರ್ನಾಟಕ ಭಾಗದಲ್ಲೂ ಹಾಸನ ಮಾದರಿಯ ಸಮಾವೇಶ ಮಾಡಲು ಮುಂದಾಗಿದೆ. ಆ ಭಾಗದಲ್ಲಿಯೂ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ನಡೆಸಲು ಪ್ಲಾನ್ ಮಾಡಿದೆ ಕೈ ಪಡೆ. ಸಮಾವೇಶದ ಮೂಲಕ ವಿರೋಧ ಪಕ್ಷಕ್ಕೆ ತಿರುಗೇಟು ಕೊಡಲು ಕೈಪಡೆ ತಂತ್ರ ರೂಪಿಸುತ್ತಿದೆ. ಈಗಾಗಲೇ ವಕ್ಫ್ ವಿಚಾರವಾಗಿ ಬಿಜೆಪಿ ನಾಯಕರು 3 ಟೀಂಗಳಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉತ್ತರ ಕರ್ನಾಟಕ ಭಾಗದಲ್ಲಿಯೇ ಹಾಸನ ಮಾದರಿಯಲ್ಲಿ ಸಮಾವೇಶ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ಹಳೇ ಮೈಸೂರು ನಂತರ ಉತ್ತರ ಕರ್ನಾಟಕದತ್ತ ಸರ್ಕಾರದ ಕೈ ನಾಯಕರ ಚಿತ್ತ ಹರಿದಿದೆ. ಜನವರಿಯಲ್ಲಿ ಜನ ಕಲ್ಯಾಣ ಸಮಾವೇಶ ನಡೆಸಲು ಪ್ಲಾನ್ ಮಾಡಿದ್ದಾರೆ.
ಸಮಾವೇಶದ ಉದ್ದೇಶವೇನು..?
- ಸರ್ಕಾರದ ಪಾರದರ್ಶಕ ಆಡಳಿತದ ಬಗ್ಗೆ ಪ್ರಚಾರ
- ಸಿಎಂ ಸಿದ್ದರಾಮಯ್ಯ ಮೇಲೆ ಆರೋಪಕ್ಕೆ ತಿರುಗೇಟು
- ವಿರೋಧ ಪಕ್ಷಗಳಿಂದ ಸರ್ಕಾರ ಹಾಗೂ ಸಚಿವರ ಟಾರ್ಗೆಟ್
- ಸರ್ಕಾರದ ಮೇಲಿನ ಆರೋಪಗಳ ನಡುವೆಯೂ ಮೂರು ಉಪ ಚುನಾವಣೆ ಗೆಲುವು
- ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಸಹಕಾರ
- ನೀರಾವರಿ ಯೋಜನೆಗಳಿಗೆ ಸಿಗದ ಕೇಂದ್ರದ ಬೆಂಬಲ