ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿದ್ದ ಉಚಿತಪಡಿತರವನ್ನು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅದನ್ನು ದ್ವಿಗುಣಗೊಳಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈಗಾಗಲೇ ಕರ್ನಾಟಕ ತೆಲಂಗಾಣ ರಾಜ್ಯದಲ್ಲಿ ನಾವಿದ್ದಾಗ ಜಾರಿಗೆ ತಂದಿದ್ದೇವೆ. ನೀವು (ಮೋದಿ) 5 ಕೆ.ಜಿ ಪಡಿತರ ನೀಡುತ್ತಿದ್ದೀರಿ. ನಾವು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಯಾದರೆ ನೀಡುತ್ತೇವೆ ಎಂದು ಖರ್ಗೆ ಭರವಸೆ ನೀಡಿದ್ದಾರೆ. ಬಡವರಿಗಾಗಿ ನೀವು ಏನು ಮಾಡಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ಕಾಂಗ್ರೆಸ್ ಜಾರಿಗೆ ತಂದಿತ್ತು ಎಂದು ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.