ಕೆಪಿಸಿಸಿ, ಸಿಎಂ ಕುರ್ಚಿ ಫೈಟ್ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಬದಲಾವಣೆ ಕೂಗು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ. ಹೌದು.. ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ರಣದೀಪದದ ಸಿಂಗ್ ಸುರ್ಜೇವಾಲ ಅವರ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಸಿದ್ದು ಬಣದ ಸಚಿವರು ಹಾಗೂ ನಾಯಕರು ಆರೋಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾರನ್ನು ವಾಪಸ್ ಪಡೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಮೂಲಕ ಹೈಕಮಾಂಡ್ ಗೆ ರಾಜ್ಯ ಸಚಿವರ ದೂರು ನೀಡಲು ಮುಂದಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಗೆ ಸುರ್ಜೇವಾಲ್ ಬೆಂಬಲ ನೀಡುತ್ತಿದ್ದಾರೆ. ಏಕಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಮಾತನ್ನ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದುಯ ಸಿದ್ದು ಬಣದ ಸಚಿವರು ಆರೋಪಿಸಿದ್ದಾರೆ. ರಾಜ್ಯ ಉಸ್ತುವಾರಿ ವಿರುದ್ಧ ಸಿಎಂ ಬಣದ ನಾಯಕರ ಅಸಮಾಧಾನ ಹೊರಹಾಕಿದ್ದಾರೆ.
ಸುರ್ಜೇವಾಲಾ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವಂತೆ ಸಿಎಂಗೆ ಸಚಿವರು ಆಗ್ರಹಿಸಿದ್ದಾರೆ. ರಾಜ್ಯ ಉಸ್ತುವಾರಿಯಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿಲ್ಲ.. ಕೇವಲ ಒಂದು ಬಣದ ಪರ ಕೆಲಸ ಮಾಡ್ತಾರೆ.. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.. ಹಾಸನದ ಸಮಾವೇಶ ಹೆಸರು ಬದಲಾವಣೆ.. ದಲಿತರ ಸಚಿವರು, ಶಾಸಕರ ಔತಣಕೂಟಕ್ಕೆ ಬ್ರೇಕ್.. ಹಾಕಿದ್ದಾರೆ. ಸುರ್ಜೇವಾಲಾ ಪಕ್ಷಪಾತ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿ.. ಎಂದು ಸಿಎಂಗೆ ಡಿಕೆ ಶಿವಕುಮಾರ್ ವಿರೋಧಿ ಬಣದ ಸಚಿವರು, ಶಾಸಕರಿಂದ ದೂರು ಸಲ್ಲಿಕೆಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕೂಗಿನ ಜೊತೆಗೆ ಸಿಎಂ ಬದಲಾವಣೆ ಕೂಗು ಕೇಳಿಬಂದಿತ್ತು. ಈಗ ರಾಜ್ಯ ಕಾಂಗ್ರೆಸ್ ನ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರ ಬುಡಕ್ಕೆ ಸಿಎಂ ಸಿದ್ದರಾಮಯ್ಯ ಬಣದ ನಾಯಕರು ಬಾಂಬ್ ಇಟ್ಟಿದ್ದಾರೆ. ಅಂದರೆ ಉಸ್ತುವಾರಿಯನ್ನೇ ಬದಲಾಯಿಸಿ ಎಂದು ಸಿಎಂ ಗೆ ಒತ್ತಡ ಹೇರಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಬದಲಾವಣೆಗೆ ಸಿಎಂ ಮೂಲಕ ರಾಹುಲ್ ಗಾಂಧಿ ಗೆ ದೂರನ್ನ ನೀಡಲು ಕೈ ಪಡೆ ಅದರಲ್ಲೂ ಸಿದ್ದು ಆಪ್ತ ಬಣ ಸಜ್ಜಾಗಿದೆ.
ಸಚಿವರ ಆಕ್ಷೇಪ ಏನು?
- ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಿಗೆ ಆಗ್ರಹಗಳ ಬೆನ್ನಲ್ಲೇ ಇದೀಗ ರಾಜ್ಯ ‘ಕೈ’ ಉಸ್ತುವಾರಿ ಬಗ್ಗೆಯೇ ದೂರು.
- ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಒಂದು ಬಣದ ಪರ ಪಕ್ಷಪಾತಿ ಎಂದು ಸ್ವತಃ ಸಿಎಂಗೆ ದೂರು.
- ಹಾಸನದಲ್ಲಿ ಹಮ್ಮಿಕೊಂಡಿದ್ದ ಸ್ವಾಭಿಮಾನ ಸಮಾವೇಶದ ಹೆಸರನ್ನು ರಣದೀಪ್ ಸುರ್ಜೇವಾಲಾ ಬದಲಾಯಿಸಿದರು.
- ದಲಿತ ಸಚಿವರು, ಶಾಸಕರ ಔತಣಕೂಟಕ್ಕೂ ಬ್ರೇಕ್ ಹಾಕಿದರು. ಉಸ್ತುವಾರಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಪ್ರಯತ್ನವನ್ನು ಅವರು ಮಾಡುತ್ತಿಲ್ಲ.
- ಈ ವಿಷಯ ರಾಹುಲ್ ಗಮನಕ್ಕೆ ತರುವಂತೆ ಕೋರಿ ಕೆಲವು ಸಚಿವರು, ಶಾಸಕರಿಂದ ಸಿಎಂ ಸಿದ್ದರಾಮಯ್ಯಗೆ ಮನವಿ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: