ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮಗಳಿರುವ ಹಿನ್ನೆಲೆ ಅಸ್ಟ್ರಜೆನಿಕಾ ಕಂಪನಿಯು ಲಸಿಕೆಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಈಗಾಗಲೇ ಲಸಿಕೆಯು ಅಪಾಯಕಾರಿ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲಿ ಕಂಪನಿ ಒಪ್ಪಿಕೊಂಡಿದೆ. ಹಾಗಾಗಿ ಸ್ವ ಇಚ್ಛೆಯಿಂದಲೇ ಜಾಗತಿಕವಾಗಿ ಲಸಿಕೆಯನ್ನು ಹಿಂಪಡೆಯಲು ಮುಂದಾಗಿದೆ.
ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಈಗಾಗಲೇ ಜಗತ್ತಿನಾದ್ಯಂತ ಚರ್ಚೆ ಆಗುತ್ತಿದೆ. ಮೊದಲಿಗೆ ಯೂರೋಪ್ ಮಾರ್ಕೆಟಿಂಗ್ ಪರ್ಮಿಷನ್ ಹಿಂಪಡೆಯಲು ಪ್ಲಾನ್ ಮಾಡಿದೆ. ಬ್ರಿಟಿಷ್ ಹೈಕೋರ್ಟ್ನಲ್ಲಿ ಸಲ್ಲಿಸಿದ ದಾಖಲೆಗಳ ಪ್ರಕಾರ, ಲಸಿಕೆಯಲ್ಲಿ ಹೆಚ್ಚಾಗಿ ಥ್ರಂಬೋಸಿಸ್, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಇದಿದ್ದು, ಇದು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿತ್ತು.
ಅಸ್ಟ್ರಾಜೆನಿಕಾ ಸ್ಪೀಡಿಶ್ ಇಂಟರ್ ನ್ಯಾಷನಲ್ ಮೆಡಿಸಿನ್ ಮತ್ತು ಬಯೋಟೆಕ್ನಾಲಜಿ ಕಂಪನಿಯಾಗಿದೆ. ಇದರ ಪ್ರಧಾನ ಕಚೇರಿ ಕೇಂಬ್ರಿಡ್ಜ್ ಬಯೋಮೆಡಿಕಲ್ ಕ್ಯಾಂಪಸ್ನಲ್ಲಿದೆ.