- ಕೋವ್ಯಾಕ್ಸಿನ್ ಲಸಿಕೆಯಲ್ಲೂ ಸೈಡ್ ಎಫೆಕ್ಟ್
- ಪಾರ್ಶ್ವವಾಯು , ಚರ್ಮ ಸಮಸ್ಯೆ, ನರ ಸಂಬಂಧಿ ಸಮಸ್ಯೆ ಕಂಡುಬಂದಿವೆ
ಕೊರೊನಾ ಮಹಾಮಾರಿಯಿಂದ ಬಚಾವಾಗಿದ್ದ ಜನರಲ್ಲಿ ಕೋವಿಶೀಲ್ಡ್ ಲಸಿಕೆ ಸೈಡ್ ಎಫೆಕ್ಟ್ ಸುದ್ದಿಯಿಂದ ಭಯದ ವಾತಾವರಣ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಈಗ ಕೋವ್ಯಾಕ್ಸಿನ್ ಲಸಿಕೆಯಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ. ಭಾರತ್ ಬಯೋಟೆಕ್ ಕಂಪನಿಯ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಆಗಿರುವ ಅಂಶ ಬಯಲಾಗಿದೆ. ಕೋವ್ಯಾಕ್ಸಿನ್ ಪಡೆದ ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮವಾಗಿ ಪಾರ್ಶ್ವವಾಯು , ಚರ್ಮ ಸಮಸ್ಯೆ, ನರ ಸಂಬಂಧಿ ಸಮಸ್ಯೆ, ಸಾಮಾನ್ಯ ಅಸ್ವಸ್ಥತೆ ಕಂಡುಬಂದಿವೆ.