ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ತಡವಾದಾಗ ವಿಧಿಸುತ್ತಿದ್ದ ವಾರ್ಷಿಕ ಶೇ.30ರಷ್ಟು ಬಡ್ಡಿಯ ಗರಿಷ್ಠ ಮಿತಿಯನ್ನು ಸುಪ್ರೀಂಕೋರ್ಟ್ ತೆಗೆದು ಹಾಕಿದೆ. ಈ ಮೂಲಕ ಬ್ಯಾಂಕುಗಳಿಗೆ, ನಿಗದಿತ ಸಮಯ ಮೀರಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವುದರ ಮೇಲೆ ಹೇರಲಾಗುವ ಬಡ್ಡಿ ದರವನ್ನು ನಿರ್ಧರಿಸುವ ಹಾಗೂ ನಿಗದಿಸುವ ಸ್ವಾತಂತ್ರ್ಯ ದೊರಕಿದೆ.
ಸಾಲ ನೀಡುವ ಬ್ಯಾಂಕುಗಳು ತಡವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವ ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿ ಪಡಿಸುವ ಅಧಿಕಾರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 2:20 (ಎನ್ಸಿಡಿಆರ್ಸಿ)ಕ್ಕೆ ಇದೆಯೇ ಎಂದು ಪ್ರಶ್ನಿಸಿ ಹಲವು ಬ್ಯಾಂಕ್ಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಇದರ ವಿಚಾರಣೆ ನಡೆಸಿದ ನ್ಯಾ. ಬೇಲಾತ್ರಿವೇದಿ ಹಾಗೂ ಸತೀಶ್ ಚಂದ್ರ ಶರ್ಮಾ ಅವರ ಪೀಠ ಬಡ್ಡಿ ದರ ನಿಗದಿಪಡಿಸುವ ಅಧಿಕಾರವನ್ನು ಬ್ಯಾಂಕುಗಳಿಗೆ ನೀಡುವ ಮೂಲಕ 16 ವರ್ಷದ ಪ್ರಕರಣಕ್ಕೆ ತೆರೆ ಎಳೆದಿದೆ. ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದ ಅಥವಾ ಮೊತ್ತಕ್ಕಿಂದ ಕಡಿಮೆ ಪಾವತಿಸುವವರ ಮೇಲೆ ವಾರ್ಷಿಕ ಗರಿಷ್ಠ ಶೇ.30ರಷ್ಟು ಬಡ್ಡಿ ಹಾಕಬೇಕು ಎಂದು 2008ರಲ್ಲಿ ಎನ್ ಸಿಡಿಆರ್ಸಿ ನಿರ್ಧರಿಸಿತ್ತು. ಇದನ್ನು ಬ್ಯಾಂಕುಗಳು ವಿರೋಧಿಸಿದ್ದವು.