ಮೊದಲಾರ್ಧದ ಪಂದ್ಯಗಳಲ್ಲಿ ಸತತ ಸೋಲಿನಿಂದಾಗಿ ಕಂಗೆಟಿದ್ದ ಆರ್ಸಿಬಿ ತಂಡವು ಇಲ್ಲಿಯವರೆಗೆ 11 ಪಂದ್ಯಗಳನ್ನಾಡಿದೆ. ಅದರಲ್ಲಿ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 7 ಮ್ಯಾಚ್ಗಳಲ್ಲಿ ಸೋಲನ್ನ ಅನುಭವಿಸಿದೆ. ಇದೀಗ ಒಟ್ಟು 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನಕ್ಕೆರಿರುವ ಆರ್ಸಿಬಿ ಪ್ಲೇಆಫ್ ಅವಕಾಶಕ್ಕಾಗಿ ಎದುರು ನೋಡುತ್ತಿದೆ.
ಈಗಾಗಲೇ ಆರ್ಸಿಬಿಗೆ ಪ್ಲೇಆಫ್ ಹಂತ ಬಹುತೇಕ ಮುಚ್ಚಲ್ಪಟಿದ್ದು, ಇನ್ನುಳಿದ 3 ಪಂದ್ಯಗಳನ್ನು ಬಾರಿ ರನ್ರೇಟ್ನೊಂದಿಗೆ ಗೆಲ್ಲಲೇಬೇಕಾದ ಅನಿವಾರ್ಯವಿದೆ. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸುವ ತಂಡವು 14 ಪಾಯಿಂಟ್ಸ್ ಪಡೆದುಕೊಂಡರೆ, ನೆಟ್ ರನ್ ರೇಟ್ ನೆರವಿನೊಂದಿಗೆ ಆರ್ಸಿಬಿ ತಂಡವು ಪ್ಲೇಆಫ್ ಹಂತಕ್ಕೇರಬಹುದು.
ಆದರೆ ಇದು ಅಸಾಧ್ಯವಾದ ಮಾತಾಗಿದೆ. ಏಕೆಂದರೆ ಈಗಾಗಲೇ ಪ್ಲೇಆಫ್ ರೇಸ್ನಲ್ಲಿ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 3 ಮತ್ತು 4ನೇ ಸ್ಥಾನಗಳಲ್ಲಿರುವ ಎಸ್ಆರ್ಹೆಚ್ ಮತ್ತು ಎಲ್ಎಸ್ಜಿ ತಂಡಗಳು ಈಗಾಗಲೇ 12 ಅಂಕಗಳನ್ನು ಗಳಿಸಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಅಥವಾ ಸನ್ರೈಸರ್ಸ್ ಹೈದರಾಬಾದ್ ತಂಡಗಳ ಪಾಯಿಂಟ್ಸ್ 14 ಪಾಯಿಂಟ್ಸ್ ಕ್ರಾಸ್ ಆಗಬಾರದೆಂದು ಫಾನ್ಸ್ ದೇವರಲ್ಲಿ ಬೇಡಿಕೋಳ್ಳಬೇಕಾಗಿದೆ.
ಈ ಎರಡು ತಂಡಗಳು 14 ಪಾಯಿಂಟ್ಸ್ಗಳಿಂದ 4ನೇ ಸ್ಥಾನ ಅಲಂಕರಿಸಿದ್ದೇ ಆದರೆ, ಆರ್ಸಿಬಿ ತಂಡಕ್ಕೆ ನೆಟ್ ರನ್ ರೇಟ್ ನೆರವಿನೊಂದಿಗೆ ಪ್ಲೇಆಫ್ ಕಾಲಿಡುವ ಅವಕಾಶ ಸಿಗಲಿದೆ.ಈ ನಡುವೆ 10 ಪಾಯಿಂಟ್ಸ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಪಂದ್ಯಗಳನ್ನ ಗೆಲ್ಲಬಾರದು. ಹಾಗೆಯೇ ಪಂಜಾಬ್ ಕಿಂಗ್ಸ್ ಮುಂದಿನ 4 ಪಂದ್ಯಗಳಲ್ಲಿ ಎರಡಲ್ಲಿ ಸೋಲನುಭವಿಸಬೇಕು. ಒಂದು ವೇಳೆ ಅಂಕ ಪಟ್ಟಿಯಲ್ಲಿರುವ ಮೊದಲ 4 ತಂಡಗಳು 14ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೆ ಆರ್ಸಿಬಿ ಪ್ಲೇಆಫ್ ಕನಸು ಕನಸಾಗಿಯೇ ಉಳಿದು ಬಿಡುತ್ತೆ.