ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಬಾರ್ಬಡೋಸ್ ಬ್ರಿಡ್ಜ್ಟೌನ್ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಿತು. ಫೈನಲ್ನಲ್ಲಿ ಗೆದ್ದು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ.
ಟೀಮ್ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್ನಲ್ಲೇ ನಿಂತು ಇನ್ನಿಂಗ್ಸ್ ಕಟ್ಟಿದ ಕ್ವಿಂಟನ್ ಡಿ ಕಾಕ್ 31 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 39 ರನ್ ಬಾರಿಸಿದ್ರು. ಬಳಿಕ ಉತ್ತಮ ಬ್ಯಾಟಿಂಗ್ ಮಾಡಿದ ಸ್ಟಬ್ಸ್ ಕೂಡ 21 ಬಾಲ್ನಲ್ಲಿ 1 ಸಿಕ್ಸ್, 3 ಫೋರ್ ಜತೆಗೆ 31 ರನ್ ಬಾರಿಸಿದ್ರು.
ಇನ್ನು, ನಂತರ ಭರ್ಜರಿ ಬ್ಯಾಟಿಂಗ್ ಮಾಡಿದ ಹೆನ್ರಿಕ್ ಕ್ಲಾಸೆನ್ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ತಾನು ಆಡಿದ 27 ಬಾಲ್ನಲ್ಲಿ 5 ಭರ್ಜರಿ ಸಿಕ್ಸರ್, 2 ಫೋರ್ನೊಂದಿಗೆ 52 ರನ್ ಸಿಡಿಸಿದ್ರು. ಡೇವಿಡ್ ಮಿಲ್ಲರ್ 21 ರನ್ ಗಳಿಸಿದ್ರು. ಸೌತ್ ಆಫ್ರಿಕಾ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ರು. ಟೀಮ್ ಇಂಡಿಯಾ ವಿರುದ್ಧ 7 ರನ್ಗಳಿಂದ ಹೀನಾಯ ಸೋಲು ಕಂಡಿದೆ.