- ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆ
- ಅರ್ಜಿ ಸಲ್ಲಿಸಿದ ಮೋದಿ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಅಮಿತ್ ಶಾ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಯಾರು ಸೂಕ್ತ ಎಂದು ಚಿಂತಿಸುತ್ತಿರುವ ಮಧ್ಯೆ ಬಿಸಿಸಿಐಗೆ ಅಚ್ಚರಿಯೊಂದು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಅಮಿತ್ ಶಾ ಸೇರಿ ಹಲವು ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. ಅಸಲಿಗೆ ಇವರ್ಯಾರು ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಬದಲಾಗಿ ನೆಟ್ಟಿಗರು ಇವರ ಹೆಸರಿನಲ್ಲಿ ನಕಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿ ಸಲ್ಲಿಸಲು ಮೇ 27 ಅಂತಿಮ ಗಡುವಾಗಿತ್ತು. ಹೀಗಾಗಿ ಕೆಲ ನೆಟ್ಟಿಗರು ಮೋದಿ, ಸಚಿನ್, ಅಮಿತ್ ಶಾ ಹೆಸರಿನಲ್ಲಿ ನಕಲಿ ಅರ್ಜಿಯನ್ನು ಸಲ್ಲಿಸಿ ಬಿಸಿಸಿಐಗೆ ಚಕಮ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಅನೇಕ ಕ್ರಿಕೆಟ್ ಅಭಿಮಾನಿಗಳು ಗೂಗಲ್ ಅರ್ಜಿ ಪಡೆದುಕೊಂಡು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಟ್ವೀಟ್ಗಳು ವೈರಲ್ ಆಗಿತ್ತು. ಮೂಲಗಳ ಪ್ರಕಾರ ಈಗಾಗಲೇ 3,000 ಅರ್ಜಿಗಳು ಬಂದಿದೆ ಎಂದು ಎಂದು ಹೇಳಲಾಗಿದೆ.