ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಜೀವನದಲ್ಲೂ ವಿಚ್ಛೇದನ ಬಿರುಗಾಳಿ ಎದ್ದಿದೆ. 20 ವರ್ಷಗಳ ದಾಂಪತ್ಯ ಜೀವನದ ಬಳಿಕ ಅವರು ತಮ್ಮ ಪತ್ನಿ ಆರತಿ ಅಹ್ಲಾವತ್ಗೆ ವಿಚ್ಛೇದನ ನೀಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
2004ರಲ್ಲಿ ವಿವಾಹವಾಗಿದ್ದ ಈ ಜೋಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಬ್ಬರನ್ನೊಬ್ಬರು ಈಗಾಗಲೇ ಅನ್ಫಾಲೋ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಇವರಿಬ್ಬರ ರಿಲೇಷನ್ಶಿಪ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು ಇವರ ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹಲವು ತಿಂಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಇವರಿಬ್ಬರ ವಿಚ್ಛೇದನ ಖಚಿತವಾಗಬಹುದು ಎನ್ನಲಾಗಿದೆ.
ಕ್ರಿಕೆಟ್ ವಲಯದಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದಲೇ ದೊಡ್ಡ ಹೆಸರು ಮಾಡಿದ್ದ ವೀರೇಂದ್ರ ಸೆಹ್ವಾಗ್ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಹಿರಿಯ ಪುತ್ರ ಆರ್ಯವೀರ್ ಜನಿಸಿದ್ದರೆ, 2001ರಲ್ಲಿ 2ನೇ ಪುತ್ರ ವೇದಾಂತ್ ಜನಿಸಿದ್ದರು. ಇವರಿಬ್ಬರು ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ, ಇತ್ತೀಚಿನ ಬೆಳವಣಿಗೆಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷದ ದೀಪಾವಳಿ ಸಂಭ್ರಮದಲ್ಲೂ ವೀರೇಂದ್ರ ಸೆಹ್ವಾಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಇಬ್ಬರೂ ಪುತ್ರರು ಹಾಗೂ ಸೆಹ್ವಾಗ್ ಅವರ ತಾಯಿ ಇದ್ದರು. ಆದರೆ, ಯಾವ ಫೋಟೋದಲ್ಲೂ ಅವರ ಪತ್ನಿ ಆರತಿ ಕಾಣಿಸಿಕೊಂಡಿರಲಿಲ್ಲ. ಅದಲ್ಲದೆ, ವೀರೇಂದ್ರ ಸೆಹ್ವಾಗ್, ಆರತಿ ಹೆಸರಲ್ಲೂ ಕೂಡ ಎಲ್ಲೂ ಹಾಕಿರಲಿಲ್ಲ. ಸೆಹ್ವಾಗ್ ಅವರ ಮೌನವೇ ಇಬ್ಬರ ನಡುವೆ ವಿಚ್ಚೇದನವಾಗುತ್ತಿದೆ ಎನ್ನುವ ರೂಮರ್ಗೆ ಹೆಚ್ಚಿನ ಬಲ ನೀಡಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc