- ಖ್ಯಾತ ಕ್ರಿಕೇಟರ್ ಕಟ್ಟಡದಿಂದ ಬಿದ್ದು ಆತ್ಮಹತ್ಯೆ
- ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
- 1996 ರಲ್ಲಿ ಭಾರತ ಪರವಾಗಿ ಟೆಸ್ಟ್ ಮ್ಯಾಚ್ ಆಡಿದ್ದ ಕ್ರಿಕೇಟರ್
ಟೀಂ ಇಂಡಿಯಾದ ಮಾಜಿ ಆಟಗಾರ ಡೇವಿಡ್ ಜಾನ್ಸನ್ (53) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ 4ನೇ ಫ್ಲೋರ್ನಿಂದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ. ಕರ್ನಾಟಕದ ಹಾಸನದ ಅರಸೀಕೆರೆ ಮೂಲದವರಾದ ಡೇವಿಡ್ ಜಾನ್ಸನ್.
ಹಾಸನ ಮೂಲದ ಅರಸೀಕೆರೆಯ ಈ ಪ್ರತಿಭೆ ಟೀಂ ಇಂಡಿಯಾ ತಂಡದಲ್ಲಿ ಗುರುತಿಸಿಕೊಂಡಿದ್ದರು. ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದ ಕೀರ್ತಿ ಇವರಿಗಿದೆ. ಅಕ್ಟೋಬರ್ 16, 1971ರಲ್ಲಿ ಜನಿಸಿದ ಡೇವಿಡ್, ವೇಗದ-ಮಧ್ಯಮ ಬೌಲರ್ ಆಗಿ ಗುರುತಿಸಿಕೊಂಡಿದ್ದು, ಜೊತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದರು. 1996ರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಲ್ಲದೆ, 3 ವಿಕೆಟ್ಗಳನ್ನು ಪಡೆದ ಕನ್ನಡಿಗ. ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದ ಕನ್ನಡಿಗನ ಸಾವು ಕ್ರಿಕೆಟ್ ಪ್ರಿಯರಿಗೆ ನೋವು ನೀಡಿದೆ.