250ಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿನಿಯರನ್ನು ಬ್ಲಾಕ್ಮೇಲ್ ಮಾಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 6 ಜನರನ್ನು ದೋಷಿಗಳು ಎಂದು ತೀರ್ಪು ನೀಡಿರುವ ಸ್ಥಳೀಯ ಪೋಕ್ಸ್ ನ್ಯಾಯಾಲಯ, ದೋಷಿಗಳಿಗೆ ಜೀವಾ ವಧಿ ಶಿಕ್ಷೆ ವಿಧಿಸಿದೆ. ನಫೀಸ್ ಚಿಸ್ತಿ, ನಸೀಂ, ಸಲೀಂ ಚಿಸ್ತಿ, ಇಟ್ಬಾಲ್ ಭಾಟಿ, ಸೋಹೇಲ್ ಗನಿ, ಸಯೀದ್ ಜಮೀರ್ ಹುಸ್ಸೇನ್ ಶಿಕ್ಷೆಗೊಳಗಾದವರು. ಇದರೊಂದಿಗೆ 32 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತೆ ಆಗಿದೆ.
ಇದೇ ಪ್ರಕರಣಲ್ಲಿ ಇನ್ನಿತರೆ ಕೆಲವರು ಈಗಾಗಲೇ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರೆ, ಕೆಲವರು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರೆ. ಪ್ರಕರಣದ ದೋಷಿಗಳ ಪೈಕಿ ಬಹುತೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಸಂತ್ರಸ್ತ ವಿದ್ಯಾರ್ಥಿಗಳು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದ ಕಾರಣ ಘಟನೆ ನಡೆದ ಅವಧಿಯಲ್ಲಿ ರಾಜಸ್ಥಾನದಲ್ಲಿ ಭಾರೀ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಓಮೇಂದರ್ ಭಾರದ್ವಾಜ್ ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.