ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು ವ್ಯಕ್ತಿಯೊಬ್ಬ ಸ್ನೇಹಿತನಿಗೆ ಹಣಕೊಟ್ಟು ಆಕೆಯನ್ನು ಕೊಲ್ಲಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಹೇಮಂತ್ ಶರ್ಮಾ ಎಂಬಾತ ತನ್ನ ಸ್ನೇಹಿತನ ಸಹಾಯ ಪಡೆದು ಹತ್ಯೆ ಮಾಡಲು ಆತನಿಗೆ 2.5 ಲಕ್ಷ ರೂ. ನೀಡಿದ್ದ, ಆರಂಭದಲ್ಲಿ ರಸ್ತೆ ಅಪಘಾತದಂತೆ ಕಂಡುಬಂದ ಈ ಘಟನೆಯು ಆಗಸ್ಟ್ 13ರಂದು ನಡೆದಿತ್ತು. ಹತ್ತು ದಿನಗಳ ಬಳಿಕ ಪೊಲೀಸ್ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ ಶರ್ಮಾ, ಪತ್ನಿ ಕೊಲೆಯನ್ನು ರಸ್ತೆ ಅಪಘಾತದಂತೆ ಕಾಣುವಂತೆ ರೂಪಿಸಿದ್ದ. ಘಟನೆ ದಿನದಂದು ಪತ್ನಿಯನ್ನು ಆಕೆಯ ಸಹೋದರ ಸಂದೇಶ್ ದೇವಸ್ಥಾನಕ್ಕೆ ಕರೆದೊಯ್ದಿದ್ದರು. ಹಿಂದಿರುಗುವಾಗ ಶರ್ಮಾ ಸ್ನೇಹಿತನಿದ್ದ ಇಕೋಸ್ಪೋರ್ಟ್ಸ್ ಕಾರು ಈ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಮಹಿಳೆ ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಸಂದೇಶ್ಗೆ ಗಾಯಗಳಾಗಿವೆ. ಶರ್ಮಾ ಇದನ್ನು ಹಿಟ್ ಆ್ಯಂಡ್ ರನ್ ಎಂದು ಹೇಳಿದ್ದ, ಬಳಿಕ ಆ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಶರ್ಮಾ ಹೇಳಿರುವ ರೀತಿಯ ವಾಹನ ಕಾಣಿಸದೇ ಇರುವುದು ಅನುಮಾನಗಳನ್ನು ಹುಟ್ಟುಹಾಕಿತ್ತು. ಘರ್ಷಣೆಗೆ ಸ್ವಲ್ಪ ಮೊದಲು ಮೋಟಾರ್ ಸೈಕಲ್ನ ಹಿಂದೆ ಇಕೋಸ್ಪೋರ್ಟ್ ಕಾರು ಇರುವುದು ಕಂಡುಬಂದಿತ್ತು. ಹೇಮಂತ್ ಶರ್ಮಾರ ಎರಡನೇ ಪತ್ನಿ ಈ ದುರ್ಗಾವತಿ, ಅವರು 2022ರಲ್ಲಿ ವಿವಾಹವಾಗಿದ್ದರು.
ಶರ್ಮಾಳ ಮದುವೆಯಾದ ಕೆಲವೇ ದಿನಗಳಲ್ಲಿ ದುರ್ಗಾವತಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಮನೆಗೆ ಮರಳಿದ್ದಳು. ನಂತರ, ದುರ್ಗಾವತಿ ಶರ್ಮಾಳೊಂದಿಗೆ ಮತ್ತೆ ಒಂದಾದರು ಮತ್ತು ಇಬ್ಬರೂ 2023 ರಲ್ಲಿ ನ್ಯಾಯಾಲಯದಲ್ಲಿ ವಿವಾಹವಾದರು. ಆಕೆ ವಿಪರೀತ ಖರ್ಚು ಮಾಡುತ್ತಿದ್ದ ಕಾರಣ ಶರ್ಮಾಗೆ ಕೋಪ ತರಿಸುತ್ತಿತ್ತು. ಬಳಿಕ ಆಕೆಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದ. ಸಂಚಿನಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ.