ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಸುದ್ದಿಯಲ್ಲಿ ಇರಲಿಲ್ಲ. ಕಳೆದ ಒಂದು ವರ್ಷದಿಂದ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಸಮಾನ್ಯವಾಗಿ ರಾಜಕಾರಣಿಗಳು, ಸಿನಿಮಾ ಸ್ಟಾರ್ಗಳು, ದೊಡ್ಡ ದೊಡ್ಡ ಉದ್ಯಮಿಗಳು ಇಂತಹ ಪ್ರಕರಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಇವರ ರಾಸಲೀಲೆ ಬಯಲಾದ ತಕ್ಷಣ ಪೊಲೀಸರ ಮೊರೆ ಹೋಗುವುದು ಸಹಜ ಪ್ರಕ್ರಿಯೆ. ಪೊಲೀಸರು ಈ ಪ್ರಕರಣಗಳನ್ನ ಕಾನೂನು ರೀತಿಯಲ್ಲಿ ಇತ್ಯರ್ಥ್ಯ ಮಾಡುವುದು ಅವರ ಕರ್ತವ್ಯವಾಗಿದೆ. ಆದರೆ ಇಲ್ಲೊಂದು ಕೇಸ್ನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬನನ್ನ ಈ ಕಿಲಾಡಿ ಲೇಡಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿರುವ ಆರೋಪ ಕೇಳಿಬಂದಿದೆ.
ಕಲಬುರಗಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದವನನ್ನ ಹನಿಟ್ರ್ಯಾಪ್ಗೆ ಕೆಡುವುದರಲ್ಲಿ ಕಿಲಾಡಿ ಲೇಡಿ ಪೂಜಾ ಡೊಂಗರಗಾಂವ್ ಪ್ಲಾನ್ ಸಕ್ಸಸ್ ಆಗಿದೆ. ನಂತರ ಕಾನ್ಸ್ಟೇಬಲ್ ಪತ್ನಿಯಿಂದ ಸುಮಾರು 8 ಲಕ್ಷ ರೂಪಾಯಿ ಹಣ ಪೀಕಿದ್ದಾಳೆ ಎನ್ನುವ ಆರೋಪ ಬಂದಿದೆ.
ಹಣ ನೀಡುವಂತೆ ಪೀಡಿಸುತ್ತಿದ್ದ ಖತರ್ನಾಕ್ ಲೇಡಿಯ ಕಾಟಕ್ಕೆ ಬೇಸತ್ತು ಕಾನ್ಸ್ಸ್ಟೇಬಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿಂದೆ ಕಲುಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಪೂಜಾ ಡೊಂಗರಗಾಂವ್ ಭಾಗಿಯಾಗಿದ್ದಳು. ಅಲ್ಲಿಯೂ ಸಹ ಅಮರ್ ಸಿಂಗ್ ಎಂಬುವವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು ಅದರಲ್ಲಿ 8 ಲಕ್ಷ ರೂಪಾಯಿ ಕಿತ್ತಿದ್ದಳು. ಈ ಬಗ್ಗೆ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಕಲಬುರಗಿ ಹನಿಟ್ರ್ಯಾಪ್ನಲ್ಲೂ ಪೂಜಾ ಕೈವಾಡ
ಕಲಬುರಗಿಯಲ್ಲಿ ಪ್ರಮುಖ ಉದ್ಯಮಿಯಾದ ವಿನೋದ್ ಕುಮಾರ್ ಖೇಣಿ ಅವರನ್ನು ಹನಿಟ್ರ್ಯಾಪ್ ಕೆಡವಿದ್ದ ಪ್ರಮುಖ ಆರೋಪಿಗಳಾದ ಪ್ರಭು ಹಿರೇಮಠ ಹಾಗೂ ರಾಜು ಲೇಂಗಟಿ ಅವರೊಂದಿಗೆ ಈ ಪೂಜಾ ಕೈಜೋಡಿಸಿದ್ದಳು. ಈ ಪ್ರಕರಣದಲ್ಲಿ ಉದ್ಯಮಿ ಕಡೆಯಿಂದ ಸುಮಾರು 34 ಲಕ್ಷ ರೂಪಾಯಿಗಳನ್ನು ದೋಚಿದ್ದರು. ಇವರ ವಿರುದ್ಧ ಕಲಬುರಗಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.
ಉದ್ಯಮಿ ಹನಿಟ್ರ್ಯಾಪ್ ಹಿನ್ನೆಲೆ
ಉದ್ಯಮಿ ಹಾಗೂ ವ್ಯಾಪಾರಿಯಾಗಿದ್ದ ವಿನೋದ್ಕುಮಾರ್ ಖೇಣಿ ಅವರ ಅಂಗಡಿಗೆ ಕಾಯಂ ಗ್ರಾಹಕನಾಗಿದ್ದ ಪ್ರಭು ಹಿರೇಮಠ ಉದ್ಯಮಿ ಜೊತೆ ಸ್ನೇಹ ಬೆಳೆಸಿದ್ದರು. ಈ ಸ್ನೇಹ ಪೂಜಾಗೆ ಬಹಳ ಸಹಕಾರಿಯಾಗಿತ್ತು. ಇದರಿಂದ ಪೂಜಾ ಉದ್ಯಮಿಗೆ ವಾಟ್ಸಾಪ್ನಲ್ಲಿ ಮೇಸೆಜ್ ಕೂಡ ಮಾಡಿದ್ದಳು. ಆದರೆ ಉದ್ಯಮಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಇದರಿಂದ ಬೇಸತ್ತ ಪೂಜಾ ಉದ್ಯಮಿ ವಿನೋದ್ಕುಮಾರ್ ಅವರಿಗೆ ಮಧ್ಯರಾತ್ರಿಯಲ್ಲಿ ವಾಟ್ಸಾಪ್ ಕಾಲ್ ಮಾಡಿದ್ದಾಳೆ. ಯಾವುದೋ ತುರ್ತು ಕರೆ ಇರಬಹುದೆಂದು ಉದ್ಯಮಿ ವಿನೋದ್ಕುಮಾರ್ ಕಾಲ್ ರಿಸೀವ್ ಮಾಡಿದ್ದಾನೆ. ಆದರೆ ಆ ಕರೆಯಲ್ಲಿ ಇದ್ದಿದ್ದು, ಪಾಕ್ಲಾಡಿ ಪೂಜಾ. ಆ ಒಂದು ಕರೆಯಿಂದ ಪೂಜಾ ಹಾಗೂ ಉದ್ಯಮಿ ವಿನೋದ್ ಕುಮಾರ್ ಇಬ್ಬರ ನಡುವೆ ಸ್ನೇಹ ಬೇಸೆದಿತ್ತು. ಆ ಸ್ನೇಹ ಪ್ರತಿನಿತ್ಯ ಕಾಲ್ ಮಾಡಿ ಮಾತನಾಡುವಷ್ಟು ಗಾಢವಾಗಿ ಬೆಳೆದಿತ್ತು.
ಆಶ್ಲೀಲವಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಪೂಜಾ
ತನ್ನ ಮೋಡಿ ಮಾತಿನಿಂದ ಉದ್ಯಮಿಯನ್ನು ಸೆಳೆದಿದ್ದ ಪೂಜಾ ಒಂದು ದಿನ ಹೈದರಾಬಾದ್ನಲ್ಲಿ ಉದ್ಯಮಿ ವಿನೋದ್ಕುಮಾರ್ನನ್ನು ಭೇಟಿಯಾಗಿದ್ದಾಳೆ. ಅಲ್ಲಿ ಪರಸ್ಪರ ಕುಶಲೋಪಚಾರಿ ವಿಚಾರಿಸಿಕೊಂಡು ನಂತರ ಉದ್ಯಮಿಯನ್ನ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದಾಳೆ. ಹೈದರಾಬಾದ್ನಲ್ಲಿನ ಟೌನ್ ಹೌಸ್ ಲಾಡ್ಜ್ಗೆ ಹೋದ ಇಬ್ಬರು, ರೋಮ್ಯಾಂಟಿಕ್ ಮೂಡ್ಗೆ ಜಾರಿದ್ದಾರೆ. ಆ ವೇಳೆ ಚಾಲಕಿ ಬುದ್ದಿ ತೋರಿದ ಪೂಜಾ ಉದ್ಯಮಿಯ ಜೊತೆ ಆಶ್ಲೀಲವಾಗಿ ಫೋಟೊಗಳನ್ನತನ್ನ ಮೊಬೈಲ್ನಲ್ಲಿ ತೆಗೆದುಕೊಂಡಿದ್ದಾಳೆ. ನಂತರ ಉದ್ಯಮಿಯೂ ನನ್ನ ನಂಬರ್ ಹೇಗೆ ಸಿಕ್ಕಿತ್ತು ಎಂದು ಕೇಳಿದಾಗ ಪೂಜಾ ಪ್ರಭು ಹಿರೇಮಠ್ ನನ್ನ ದೂರದ ಸಂಬಂಧಿ ಅವರಿಂದ ನನಗೆ ನಿಮ್ಮ ನಂಬರ್ ಸಿಕ್ಕಿತ್ತು ಎಂದು ಹೇಳಿದ್ದಾಳೆ.
ಬೆಂಗಳೂರಿನಲ್ಲಿ ಭೇಟಿಯಾದ ಉದ್ಯಮಿ ಹಾಗೂ ಪೂಜಾ
ಹೈದರಾಬಾದ್ ನಂತರ ಬೆಂಗಳೂರಿನಲ್ಲಿ ಭೇಟಿಯಾದ ಈ ಜೋಡಿ ನಗರದ ಓರಿಯನ್ ಮಾಲ್ ಎದುರುಗಡೆ ಕಟ್ಟೆಯ ಮೇಲೆ ಕುಳಿತುಕೊಂಡು ಪರಸ್ಪರ ಕೈ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿದ್ದಳು. ಇಷ್ಟೇಲ್ಲಾ ಸಾಕ್ಷಿಗಳನ್ನೆಲ್ಲಾ ಇಟ್ಟು ಕೊಂಡ ಪೂಜಾ ಪ್ರಭು ಹಿರೇಮಠ್ ನನ್ನು ಸಂಪರ್ಕಿಸಿದ್ದಳು. ಅವರಿಗೆ ಉದ್ಯಮಿ ಜೊತೆಗಿನ ಆಶ್ಲೀಲ ಫೋಟೋಗಳನ್ನೆಲ್ಲಾ ಕಳುಹಿಸಿದ್ದಳು.
ಅಲ್ಲಿಂದ ಪ್ರಾರಂಭವಾಯಿತು ಉದ್ಯಮಿಗೆ ಕಿರುಕುಳ. ವಿನೋದ್ ಕುಮಾರ್ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಬೆಳೆಸಿದ್ದ. ಕಲಬುರಗಿಯಲ್ಲಿ ಉದ್ಯಮಿಗೆ ಪ್ರಭು ಹಿರೇಮಠ್ ಆಶ್ಲೀಲ ಫೋಟೋಗಳನ್ನ ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ. ಇದರಿಂದ ಹೆದರಿದ ಉದ್ಯಮಿ ವಿನೋದ್ಕುಮಾರ್ ನಿನಗೇನು ಬೇಕು ಹೇಳು ದಯವಿಟ್ಟು ಆ ಫೋಟೋಗಳನ್ನು ಡಿಲಿಟ್ ಮಾಡು ಎಂದು ಅಂಗಲಾಚಿ ಬೇಡಿಕೊಂಡಿದ್ದನು. ಹೀಗಾಗಿ ಉದ್ಯಮಿ ವಿನೋದ್ಕುಮಾರ್ನಿಂದ ಚೆಕ್, ಕ್ಯಾಶ್ ಹಾಗೂ ಫೋನ್ ಪೇ ಮೂಲಕ ಸುಮಾರು 34 ಲಕ್ಷ ರೂಪಾಯಿಯನ್ನು ಪ್ರಭು ಹಿರೇಮಠ್ ದೋಚಿದ್ದಾನೆ. ಇಷ್ಟೆಲ್ಲಾ ಕಳೆದುಕೊಂಡ ನಂತರ ಉದ್ಯಮಿ ವಿನೋದ್ ಕುಮಾರ್ ಖೇಣಿ, ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.