ಸಿಟಿ ರವಿಯ ಕೇಸ್ ಬೆಳಗಾವಿ ಜೆಎಂಎಫ್ಸಿ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನ ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಿಂದಿಸಿದ ಕೇಸಲ್ಲಿ ಸಿಟಿ ರವಿಗೆ ಬೇಲ್ ಅರ್ಜಿ ವಿಚಾರಣೆಯನ್ನ ಮುಂದೂಡಿಕೆ ಮಾಡಿದೆ. ಸಿಟಿ ರವಿ ಪರ ವಾದ ಮಂಡಿಸಿದ ವಕೀಲ ಜಿರಲಿ ಪ್ರಬಲ ವಾದ ಮಂಡಿಸಿದ್ದರು. ನಿನ್ನೆ ರಾತ್ರಿ ಸಿಟಿ ರವಿಯನ್ನ ಅರೆಸ್ಟ್ ಮಾಡಿದ್ದರು ಬೆಳಗಾವಿ ಪೊಲೀಸರು. ವಾದ ಆಲಿಸಿದ ನ್ಯಾಯಾಲಯದಿಂದ ಸಿಟಿ ರವಿಗೆ ಜಾಮೀನು ವಿಚಾರಣೆಯನ್ನ ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನಅವಾಚ್ಯ ಪದಗಳಿಂದ ನಿಂದಿಸಿದ್ದರು ಬಿಜೆಪಿ ಪರಿಷತ್ ಸದಸ್ಯ ಸಿ.ಟಿ ರವಿ. ನಿನ್ನೆ ಸಂಜೆ ಸುವರ್ಣಸೌಧ ಆವರಣದಲ್ಲಿ ಸಿಟಿ ರವಿ ಬಂಧನವಾಗಿತ್ತು. ಬೆಳಗಾವಿ ಪೊಲೀಸರು ಸಿಟಿ ರವಿಯನ್ನ ಬಂಧಿಸಿದ್ದರು. ರಾತ್ರಿ ಇಡೀ ಸುತ್ತಾಡಿಸಿ ಬೆಳಗ್ಗೆ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಇದೀಗ ಜೆಎಂಎಫ್ಸಿ ಕೋರ್ಟ್ನಿಂದ ಸಿಟಿ ರವಿ ಗೆ ಬೇಲ್ ಅರ್ಜಿ ವಿಚಾರಣೆ ಮುಂಡೂಡಿಕೆಯಾಗಿದೆ.