ಇಂದು ಬಂಗಾಳದ ಕರಾವಳಿಗೆ ರೆಮಲ್ ಚಂಡಮಾರುತ ಅಪ್ಪಳಿಸಲಿದೆ. ಭಾನುವಾರ ಮಧ್ಯರಾತ್ರಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಭುಕುಸಿತ ಉಂಟುಮಾಡುವ ನಿರೀಕ್ಷೆಯಿದೆ ಎಂದು ಭಾರತೀಯ ಹಾವಾಮಾನ ಇಲಾಖೆ ತಿಳಿಸಿದೆ.
ರೆಮೆಲ್ ಎಂಸರೆ ಅರೇಬಿಕ್ ಭಾಷೆಯಲ್ಲಿ ಮರಳು ಎಂದರ್ಥ. ಈ ಋತುವಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೊದಲ ಮುಂಗಾರು ಪೂರ್ವ ಸೈಕ್ಲೋನ್ ಇದಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 26 ಮತ್ತು 27 ಮತ್ತು 28 ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬೀಳುವ ಮುನ್ಸೂಚನೆ ಇದೆ. ಮೇ 27, 28 ರಂದು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ರೆಮಾಲ್ನ ಪ್ರಭಾವದಿಂದಾಗಿ ಅತಿ ಹೆಚ್ಚು ಮಳೆ ಬೀಳಬಹುದು.