ರಾಕ್ಲೈನ್ ವೆಂಕಟೇಶ್ ಪ್ರೋಡ್ಯೂಸ್ ಮಾಡಿದ ಕಾಟೇರ ಸಿನಿಮಾ ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಗಳಿಕೆ ಕಂಡ ಸೂಪರ್ ಹಿಟ್ ಅನಿಸಿಕೊಂಡ ಸಿನಿಮಾ. ಡಿ ಬಾಸ್ ದರ್ಶನ್ ಕೆರಿಯರ್ನಲ್ಲೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅನ್ನೋ ಹೆಗ್ಗಳಿಕೆ ಕೂಡ ಕಾಟೇರ ಸಿನಿಮಾಕ್ಕೆ ಸಲ್ಲಲಿದೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ, ಇತ್ತೀಚೆಗಷ್ಟೇ ಶತ ದಿನೋತ್ಸವ ಆಚರಿಸಿಕೊಂಡಿತ್ತು. ಈಗ ಅದೇ ಖುಷಿಯ ನಡುವೆ ಡಿ ಬಾಸ್ ಕಾಟೇರ ಸೀಕ್ವೆಲ್ ಬಗ್ಗೆ ಸ್ವತಃ ದರ್ಶನ್ ತಮ್ಮ ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟಿದ್ದಾರೆ.
ಹೌದು… ಕಾಟೇರ ಗೆಲವುವಿಗೆ ಪ್ರಮುಖ ಕಾರಣರಾದ ಕಾಟೇರ ಟೀಮ್ ನ ಮೂವರು ಸದಸ್ಯರಿಗೆ ಕಾರ್ ಗಿಫ್ಟ್ ಕೊಟ್ಟಿದ್ದಾರೆ!… ಕಾಟೇರ ಸಿನಿಮಾ ಗೆಲುವಿನಲ್ಲಿ ಪ್ರಮಖ ಪಾತ್ರ ವಹಿಸಿದ ಡೈಲಾಗ್ ರೈಟರ್ ಮಾಸ್ತಿ , ಚಿತ್ರದ ಕಥೆಗಾರ ಜಡೇಶ್ ಹಂಪಿ , ಮತ್ತು ಸಿನಿಮಾದ ಸೈಲೆಂಟ್ ವಿಲನ್ ಸೂರಜ್ ಅವರಿಗೆ ಕಾರ್ ಗಿಫ್ಟ್ ಕೊಟ್ಟು ಅರ್ಥಪೂರ್ಣವಾಗಿ ಶತದಿನೋತ್ಸವ ಆಚರಿಸಿದ್ದಾರೆ!…
ಇನ್ನು ಕಾಟೇರ ಸಿನಿಮಾ ಸಕ್ಸಸ್ ಬೆನ್ನಲ್ಲೇ, ಅದರ ಸೀಕ್ವೆಲ್ ಅಥ್ವಾ ಪ್ರೀಕ್ವೆಲ್ ಶುರುವಾಗಬಹುದು ಅನ್ನೋ ಗುಸು ಗುಸು ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿ ಬಂದಿದ್ವು .. ಆ ಕ್ಯೂರ್ಯಾಸಿಟಿಗೆ ಡಿ ಬಾಸ್ ಕ್ಲಾರಿಟಿ ಕೊಟ್ಟಿದ್ದಾರೆ.. ಕಾಟೇರ ಸೀಕ್ವೆಲ್ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ದರ್ಶನ್ “ಇಲ್ಲ ಆ ರೀತಿಯ ಯಾವುದೇ ಪ್ಲಾನ್ ಇಲ್ಲ. ಅಷ್ಟಕ್ಕೂ ನಾನು ಸೀಕ್ವೆಲ್ಗಳನ್ನೇ ಮಾಡಲ್ಲ. ಕಾಟೇರ ಒಂದೇ ಕಥೆ. ಅದು ಅಲ್ಲಿಗೆ ಮುಗೀತು. ನಾನು ಯಾವತ್ತೂ ಪಾರ್ಟ್ 2 ಸಿನಿಮಾ ಮಾಡಲ್ಲ. ಅದು ಮುಗಿದು ಹೋದ ಅಧ್ಯಾಯ. ನಾನು ಯಾವತ್ತೂ ಗೆದ್ದ ಎತ್ತಿನ ಬಾಲ ಹಿಡಿಯಲ್ಲ. ಅದನ್ನೇ ಇನ್ನೂ ಎಳಿತೀವಿ ಅಂದ್ರೆ, ಅದು ಆಗದ ಮಾತು” ಎಂದಿದ್ದಾರೆ….
ಒಟ್ಟಾರೆಯಾಗಿ ಕಳೆದ ವರ್ಷ ಹಿಟ್ ಆದ ಕಾಟೇರ ಸಿನಿಮಾದ ನಿರ್ಮಾಪಕ ಟೆಕ್ನಿಷಿಯನ್ಸ್ ಗೆ ಕಾರ್ ಗಿಫ್ಟ್ ಕೊಡೋ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ