ಬಿಜೆಪಿ-ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ, ಇದು ಪಾಪ ವಿಮೋಚನಾ ಪಾದಯಾತ್ರೆ. ಅವರ ಎಲ್ಲಾ ಪಾಪ ವಿಮೋಚನೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿಚಾರವಾಗಿ, ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರ ಪಾಪಗಳನ್ನ ಜನರಿಗೆ ತಿಳಿಸಲು ಪಾದಯಾತ್ರೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿಯಯವರು ಕುಮಾರಸ್ವಾಮಿಗೆ ಹಿಂದೆ ಯಾವ ಪ್ರಶ್ನೆ ಕೇಳಿದ್ದರೋ, ಅದಕ್ಕೆ ಮೊದಲು ಉತ್ತರ ಕೊಡಬೇಕು. ಶಾಸಕ ಯತ್ನಾಳ್, ಮಾಜಿ ಸಿಎಂ ಬಿಎಸ್ವೈ ಹಾಗೂ ಅವರ ಮಗ ವಿಜಯೆಂದ್ರಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಪಾಪ ವಿಮೋಚನೆ ಪಾದಯಾತ್ರೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಈ ಭಾಗದಲ್ಲಿ ಹೆಚ್ಡಿಕೆ ಆಯ್ಕೆ ಆಗಿ, ಇಲ್ಲಿ 6 ವರ್ಷ ಅಧಿಕಾರ ನಡೆಸಿದ್ದೀರಿ. ನೀವು ರೈತನ ಮಗ ಪಾಪ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ. ನಾನು ಈ ಕ್ಷೇತ್ರದಲ್ಲಿ ಬಂದು ಜನಸಂದರ್ಶನ ಸಭೆ ಮಾಡಿದ್ದೆ. 22 ಸಾವಿರ ಜನ ಬಂದು ಅರ್ಜಿ ಕೊಟ್ಟಿದ್ದಾರೆ. ಇಷ್ಟು ದಿನ ನೀವು ಇಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಬಾಲಕೃಷ್ಣ ನಿನ್ನ ಸಹೋದರ ಅಲ್ವಾ? ನಿನ್ನ ತಂದೆ, ಪತ್ನಿ, ಕುಟುಂಬ, ಸಹೋದರರು ಎಷ್ಟು ಆಸ್ತಿ ಮಾಡ್ತಿದ್ದಾರೆ. ಒಬ್ಬ ಸರ್ಕಾರಿ ನೌಕರ ಎಷ್ಟು ಆಸ್ತಿ ಮಾಡಲು ಸಾಧ್ಯ? ನಾನು ಹುಟ್ಟಿನಿಂದ ರೈತ, ನೀವು ಎಷ್ಟು ಬೆಳೆ ಬೆಳೆದಿದ್ದೀರಿ ಹೇಳಿ? ನನ್ನನ್ನ ಕಲ್ಲು ಕಳ್ಳ, ಕಲ್ಲು ಲೂಟಿ ಮಾಡಿದ್ದಾನೆ ಎಂದಿದ್ದೀರಿ. ನನ್ನ ಮೇಲೆ, ನನ್ನ ತಮ್ಮನ ಮೇಲೆ ಮತ್ತು ನನ್ನ ಪತ್ನಿ ಮೇಲೆ ಕೇಸ್ ಹಾಕಿ, ನನ್ನನ್ನ ಜೈಲಿಗೆ ಹಾಕಿದ್ದಾಗ ಬಂದು ನೀನು ನೋಡಿದ್ದೆ. ಆಗ ನನ್ನ ಆತ್ಮಸ್ಥೈರ್ಯ ಹೇಗಿತ್ತು ನೋಡಿದ್ದೆ ಅಲ್ವಾ? ನನ್ನ ಹಾಗೂ ನನ್ನ ಕುಟುಂಬ ಮೇಲೆ ಹಾಕಿದ್ದ ಕೇಸ್ ವಜಾ ಆಗಿದೆ ಗೊತ್ತಾ? ಹಾಗೆ ನಿನ್ನ ಅಕ್ರಮವನ್ನೂ ಪಟ್ಟಿ ಮಾಡಿಸುತ್ತಿದ್ದೇನೆ. ಅದರ ಬಗ್ಗೆಯೂ ತನಿಖೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.
ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು. ನೀನು ಎಲ್ಲರನ್ನೂ ಹೆದರಿಸಿದ ಹಾಗೆ ಬಿಜೆಪಿಯವ್ರನ್ನೂ ಹೆದರಿಸಲು ಹೋದೆ. ಪಾದಯಾತ್ರೆ ಬಗ್ಗೆ ನೀನೊಂದು ಮಾತು, ನಿನ್ನ ಮಗ ಒಂದು ಮಾತು, ಜಿಟಿಡಿ ಒಂದು ಮಾತು ಆಡಿದ್ದೀರಿ. ಈಗ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕ್ತಿದ್ದೀಯಾ? ನಿನಗೆ ನೈತಿಕತೆ ಇದ್ಯಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣದ ಉಪಚುನಾವಣೆ ವಿಚಾರವಾಗಿ, ಇಲ್ಲಿ ಹಸ್ತದ ಚಿಹ್ನೆಯೇ ಅಭ್ಯರ್ಥಿ. ಕುಮಾರಸ್ವಾಮಿ ನಾನು ಐದೇ ನಿಮಿಷದಲ್ಲಿ ಮೇಕೆದಾಟಿಗೆ ಅನುಮತಿ ಕೊಡಿಸ್ತೀನಿ ಎಂದಿದ್ದಾರೆ. ನಾನು ಮಂಡ್ಯದಲ್ಲಿ ಅದನ್ನ ರಿವೀಲ್ ಮಾಡ್ತೀನಿ. ಮಂಡ್ಯದ ನಾಯಕರಿಗೆ ನಾನು ಹೇಳ್ತೇನೆ. ಕುಮಾರಸ್ವಾಮಿ, ಯಡಿಯೂರಪ್ಪ ಏನು ಹೇಳಿದ್ರು ಅದನ್ನ ಡಿಸ್ಪ್ಲೈ ಮಾಡಿ. ಚುನಾವಣೆ ವೇಳೆ ಏನು ಮಾತನಾಡಿದ್ರೂ ಅದನ್ನ ಸ್ಕ್ರೀನ್ ಮೇಲೆ ತೋರಿಸಿ. ಅವರ ನವರಂಗಿ ಬಣ್ಣ ಬಯಲು ಮಾಡೋಣ ಎಂದು ಬೆಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವರಾಜು ಟ್ರಕ್ ಟರ್ಮಿನಲ್ ಹಗರಣದಲ್ಲಿ ಯಾಕೆ ನಿಮ್ಮ ಸಿಎಂ, ಮಂತ್ರಿಗಳು ರಾಜೀನಾಮೆ ಕೊಟ್ಟಿಲ್ಲ. ನಿಮ್ಮ ಪಕ್ಷದವರೇ ಏನು ಹೇಳಿದ್ರು ಅಂತಾ ಗೊತ್ತಿಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ, ಅಮಿತ್ ಶಾ, ಮೋದಿ ಬಗ್ಗೆ ಕುಮಾರಸ್ವಾಮಿ ಏನು ಮಾತಾಡಿದ್ರು ಅನ್ನೋದು ತೋರಿಸಬೇಕಾ? ಅಪ್ಪ ಮಗನ ನಂಬಬೇಡಾ ಹುಷಾರ್ ಅಂತಾ ಯಡಿಯೂರಪ್ಪ ನನಗೆ ಹೇಳಿದ್ರು. ಅಲ್ಲದೇ ಇವಾಗ ಏನು ಇಬ್ರೂ ತಬ್ಬಾಡ್ತ ಇದ್ದೀರಿ. ಪಾಪ ನಿಮ್ಮ ಕುಟುಂಬ ಬೇರೆ ರೇವಣ್ಣ ಕುಟುಂಬ ಬೇರೆ ಅಂತೀರಿ. ಭಾಗ ಆಗಿಬಿಟ್ಟಿದ್ದೀವಿ ಅಂತೀರಿ. ಇನ್ನೂ ನಾನು ಪೆನ್ಡ್ರೈವ್ ಹಂಚಿದ್ದೀನಿ ಎಂದು ಹೇಳಿದ್ದೆ. ನಾನು ಫೇಸ್ ಟು ಫೇಸ್ ಫೈಟರ್. ನನ್ನ ಮೇಲೆ ಒಂದು ಸಲ ಸೋತಿದ್ದಿ, ಮತ್ತೊಮ್ಮೆ ಬೇಕಿದ್ರೆ ಫೈಟ್ ಮಾಡೋಣ ಬಾ ಎಂದು ಹೆಚ್ಡಿಕೆಗೆ ಬಹಿರಂಗ ಸವಾಲು ಹಾಕಿದ್ದಾರೆ.