ಮೇಷ ರಾಶಿ: ನೀವು ಕಲಿತ ವಿದ್ಯೆಯು ನಿಮ್ಮ ಕೈ ಹಿಡಿಯುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳ ಸಹಕಾರವು ಸಿಕ್ಕಿ ಸಂತೋಷವಾಗುವುದು. ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪ್ರೀತಿಯಿಂದ ಹೇಳಿದರೆ ನಿಮ್ಮ ಕೆಲಸವು ಸಲೀಸಾಗಿ ಆಗುವುದು. ಅನ್ಯಾನ್ಯ ಆಲೋಚನೆಯನ್ನು ಮಾಡುವ ಮನಸ್ಸಿಗೆ ಸರಿಯಾದ ಕೆಲಸವನ್ನು ಕೊಡಿ.
ವೃಷಭ ರಾಶಿ: ಕೆಲಸ ಮಾಡುವಲ್ಲಿ ಹೆಚ್ಚು ಆಲೋಚಿಸುವುದು ಬೇಡ. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ಬಾಗುವಿಕೆಯಿಂದ ಏನಾದರೂ ನಿಮ್ಮ ಒಳಗೆ ಸೇರಬಹುದು. ಔದಾರ್ಯವು ದುರ್ಬಳಕೆ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು. ಆಸ್ತಿಯ ವಿಚಾರವಾಗಿ ವ್ಯರ್ಥ ವಾಗ್ವಾದಗಳನ್ನು ಮಾಡುವ ಬದಲು ಕಾನೂನಾತ್ಮಕ ಕ್ರಮಗಳಿಂದ ಅವುಗಳನ್ನು ಸರಿ ಮಾಡಿಕೊಳ್ಳಿ. ಔಚಿತ್ಯಯುಕ್ತವಾದ ಮಾತಿನಿಂದ ನಿಮಗೆ ಗೌರವವು ಸಿಗುವುದು.
ಮಿಥುನ ರಾಶಿ: ನಿಮಗಾದ ನೋವನ್ನು ನುಂಗುವುದು ಕಷ್ಟ ಆದರೆ ಅನಿವಾರ್ಯ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಸಮಾರಂಭದಲ್ಲಿ ನೀವು ಭಾಗವಹಿಸಲು ಉತ್ಸುಕರಾಗಿರುವಿರಿ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ದೂರ ಪ್ರಯಾಣದಿಂದ ಸುಖ ಪಡುವಿರಿ. ಮುಖಸ್ತುತಿಯನ್ನು ಯಾರಾದರೂ ಮಾಡಬಹುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುವಂತೆ ತೋರುವುದು.
ಕರ್ಕಾಟಕ ರಾಶಿ: ನಿಮ್ಮ ಸಂಗಾತಿಯ ಎಲ್ಲಾ ಮಾತುಗಳನ್ನು ಕೇಳುವಿರಿ. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಬಾರದಿರುವ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಧಿಚಿತ್ತದಂತೆ ಆಗುತ್ತದೆ ಎಂದು ಕೈ ಚೆಲ್ಲಿ ಕೂರುವಿರಿ. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು ಹೋಗದು. ಋಜುತ್ವವು ನಿಮ್ಮಿಂದ ಕಂಗೆಡಿಸುವುದು.
ಸಿಂಹ ರಾಶಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಖುಷಿಯ ಸಮಯ ಕಳೆಯುವಿರಿ. ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿ ದೈವಾನುಕೂಲದ ಬಗ್ಗೆಯೂ ಮಾತನಾಡಿ. ಔದಾರ್ಯವನ್ನು ತೆರೆದಿಡಬೇಕಾಗುವುದು. ನಿಮ್ಮ ಪೊರ್ವಯೋಜಿತ ಕಾರ್ಯಗಳನ್ನು ಕ್ರಿಯಾರೂಪಕ್ಕೆ ತರಲು ನಿಮಗೆ ಸಾಧ್ಯವಾಗದು. ಏನಾದರೂ ಅಡೆತಡೆಗಳು ಬರಬಹುದು.
ಕನ್ಯಾ ರಾಶಿ: ಬಿದ್ದು ಹೋಗುವ ಕೆಲಸವನ್ನು ಎತ್ತಿ ಹಿಡಿಯುವಿರಿ. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ನಕಾರಾತ್ಮಕ ಆಲೋಚನೆಯನ್ನು ಇಂದು ಹೆಚ್ಚು ಮಾಡುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡವು ಬರಬಹುದು. ನಿಮ್ಮ ಇಂದಿನ ವರ್ತನೆಯಿಂದ ಬಂಧುಗಳಿಗೆ ಅಸಮಾಧಾನವಾಗುವುದು. ಸರ್ಕಾರದಿಂದ ಆಗಬೇಕಾದ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ನಿಮ್ಮ ಹಣವನ್ನು ಉಚಿತ ಸ್ಥಳದಲ್ಲಿ ಹೂಡಿಕೆ ಮಾಡಿ. ಯಾವುದೇ ಸಾಹಸ ಕಾರ್ಯವನ್ನು ಮಾಡಲು ಹೋಗುವುದು ಬೇಡ.
ತುಲಾ ರಾಶಿ: ನಿಮ್ಮ ಮರೆವಿನಿಂದ ನಿಮ್ಮ ಬೆಲೆಬಾಳುವ ವಸ್ತುವನ್ನೇ ಕಳೆದುಕೊಳ್ಳುವುರಿ. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವಿರಿ. ವ್ಯಕ್ತಿಗತ ಅಭಿಪ್ರಾಯದಿಂದ ನಿಮಗೆ ಯಾವ ನಷ್ಟವೂ ಆಗದು. ಎಲ್ಲರನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವ್ಯರ್ಥ ತಿರುಗಾಟವನ್ನು ಮಾಡುವರು. ಉತ್ತಮ ಭೂಮಿಯ ಖರೀದಿಗೆ ಬಂಧುಗಳ ಸಲಹೆ ಪಡೆಯಿರಿ.
ವೃಶ್ಚಿಕ ರಾಶಿ: ಹೊಸ ಕೆಲಸಕ್ಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಜವಾಬ್ದಾರಿಗಳು ನಿಮಗೆ ಭಾರವೆನಿಸಿ ಅದನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಮಿತವಾದ ಮಾತುಗಳನ್ನು ಆಡಬೇಕಾದೀತು. ವಾಹನ ಚಾಲನೆಯನ್ನು ಸುರಕ್ಷಿತವಾಗಿ ಮಾಡಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಎಲ್ಲ ತಪ್ಪುಗಳಿಗೂ ನಿಮ್ಮನ್ನೇ ಬೆರಳು ಮಾಡಿ ತೋರಿಸಬಹುದು. ಮಾಧ್ಯಮದ ಉದ್ಯೋಗಿಗಳಿಗೆ ಹೆಚ್ಚು ಒತ್ತಡ ಇರಲಿದೆ.
ಧನು ರಾಶಿ: ನಿಮ್ಮ ದೂರ ದೃಷ್ಟಿಯಿಂದ ನಿಮಗೆ ಒಳಿತಾಗಬಹುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ನಿಮ್ಮ ಭಾವನೆಗಳನ್ನು ಯಾರ ಜೊತೆಯೂ ಪ್ರಕಟಗೊಳಿಸುವುದಿಲ್ಲ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು.
ಮಕರ ರಾಶಿ: ಯಾವುದೇ ಕಾರಣಕ್ಕೂ ನೀವು ಬೇರೆಯವರ ದೃಷ್ಟಿಯಲ್ಲಿ ಕಡಿಮೆಯಾಗುದುವುದು ಬೇಡ. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು. ಕುಟುಂಬದ ಜೊತೆ ಬಹಳ ದಿನಗಳ ಅನಂತರ ಸಂಯೋಷದ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಹೂಡಿಕೆಗೆ ಪ್ರೇರಿಸುವಿರಿ.
ಕುಂಭ ರಾಶಿ: ಆತುರದಲ್ಲಿ ನಷ್ಟ ಮಾಡಿಕೊಳ್ಳುವುದು ಬೇಡ. ನಿಮಗೆ ಇಷ್ಟವಾದ ಸ್ಥಳಕ್ಕೆ ನೀವು ಅಕಸ್ಮಾತ್ ಭೇಟಿ. ಸಮಯವನ್ನು ನೀವು ವ್ಯರ್ಥ ಮಾಡಿಕೊಳ್ಳುವಿರಿ. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ನಿಶ್ಶುಲ್ಕವಾಗಿ ಕೊಡುವಿರಿ.
ಮೀನ ರಾಶಿ: ನಿಮ್ಮ ಹೊಸ ಕೆಲಸಕ್ಕೆ ಹೊಸ ಪ್ರಯತ್ನ ಕುಟುಂಬದ ಬೆಂಬಲ ದೊರೆಯುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆದೀತು. ಮನೆಯನ್ನು ಬದಲಿಸಬೇಕಾಗುವುದು. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು. ನಿಮ್ಮದಲ್ಲದ ದ್ರವ್ಯವನ್ನು ನೀವು ಇಟ್ಟುಕೊಳ್ಳಲು ಬಯಸುವುದಿಲ್ಲ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಆಗದು. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸುವಿರಿ.