ಮೇಷ : ಈ ರಾಶಿಯವರಿಗೆ ಬಹು ದಿನಗಳಿಂದ ಬರಬೇಕಿದ್ದ ಬಾಕಿ ಹಣ ಇಂದು ವಾಪಾಸ್ ಬರಲಿದೆ. ಹಿತೈಷಿಗಳ ಸಹಾಯವು ನಿಮಗೆ ಭರವಸೆಯ ಕಿರಣವನ್ನು ತರುತ್ತದೆ. ಹಳೆಯ ಸ್ನೇಹಿತರ ಭೇಟಿಯಾಗಬಹುದು. ಯುವಕರು ತಮ್ಮ ಭವಿಷ್ಯದಲ್ಲಿ ಕ್ರಿಯಾಶೀಲರಾಗಬೇಕು. ಆತುರ ಮತ್ತು ಭಾವೋದ್ವೇಗದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಪ್ರೀತಿಪಾತ್ರರಿಂದ ಕೆಟ್ಟ ಸುದ್ದಿಯನ್ನು ಸ್ವೀಕರಿಸುವುದರಿಂದ ನೀವು ಹತಾಶರಾಗುತ್ತೀರಿ. ವಿದ್ಯಾರ್ಥಿಗಳಿಗೆ ಇಂದು ಶುಭದಿನ.
ವೃಷಭ : ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಕೆಲಸದ ಹೊರೆ ಹೆಚ್ಚಾಗಲಿದೆ. ಇಂದಿನ ಸಮಯ ಮಿಶ್ರ ಫಲದಾಯಕವಾಗಿರುತ್ತದೆ. ಇದು ದಿನದ ಉತ್ತಮ ಆರಂಭವಾಗಿರುತ್ತದೆ. ವ್ಯಾವಹಾರಿಕ ಲಾಭ ಹೆಚ್ಚಾಗಲಿದೆ. ಸಮಾನ ಮನಸ್ಕರೊಂದಿಗೆ ವಿಶ್ರಾಂತಿ ಇರುತ್ತದೆ. ಇದರಿಂದ ಹೊಸ ಶಕ್ತಿ ಹರಿಯಬಹುದು. ಕ್ರೀಡೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಅನುಕೂಲಕರ ಅವಕಾಶಗಳಿವೆ. ದಾಂಪತ್ಯದಲ್ಲಿ ತಪ್ಪು ತಿಳುವಳಿಕೆಯಿಂದಾಗಿ ವಿವಾದಗಳು ಉಂಟಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮ್ಮ ಸಮಸ್ಯೆ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ.
ಮಿಥುನ : ಇಂದು ಈ ರಾಶಿಯವರು ಒಳ್ಳೆಯ ಸುದ್ಧಿಒಗಳನ್ನು ಕೇಳುವಿರಿ. ಸಮಯವು ಶಾಂತಿಯುತವಾಗಿ ಮತ್ತು ಧನಾತ್ಮಕವಾಗಿ ಸಾಗುತ್ತದೆ. ವೈವಾಹಿಕ ಜೀವನ ಸಂತಸ ತರಲಿದೆ. ಮನೆಯಲ್ಲಿ ಸರಿಯಾದ ಕ್ರಮವನ್ನು ಕಾಯ್ದುಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಆತ್ಮವಿಶ್ವಾಸವು ಹೊಸ ಶಕ್ತಿ ಮತ್ತು ಭರವಸೆಯನ್ನು ಜಾಗೃತಗೊಳಿಸುತ್ತದೆ. ನೀವು ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ, ಇತರ ಜನರ ವ್ಯವಹಾರಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕಟಕ : ಮೇಲಾಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಇಂದು ಆಹ್ಲಾದಕರ ಘಟನೆಯೊಂದಿಗೆ ಪ್ರಾರಂಭವಾಗುತ್ತದೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ. ಆರ್ಥಿಕವಾಗಿ ಯಶಸ್ವಿಯಾಗಲು ಪ್ರಯತ್ನಿಸುತ್ತಿರಿ. ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಫೋನ್ ಮೂಲಕ ಪ್ರಮುಖ ಸೂಚನೆಗಳನ್ನು ಸ್ವೀಕರಿಸಬಹುದು. ಆದಾಯದ ಮೂಲವು ಹೆಚ್ಚಾಗುತ್ತದೆ, ಆದರೆ ಅದೇ ಸಮಯದಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ. ಇಂದು ಮಾನಸಿಕ ಸಮಾಧಾನ ಕಡಿಮೆ.
ಸಿಂಹ : ಇಂದು ಬಹಳ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿ ಸಣ್ಣ ಸವಾಲುಗಳನ್ನು ಎದುರಿಸಬೇಕಾಗಬಹುದು ಜೀವನ ಮಟ್ಟವನ್ನು ಸುಧಾರಿಸುವ ಪ್ರಯತ್ನಗಳು ಬಹಳ ಯಶಸ್ವಿಯಾಗುತ್ತವೆ. ನೀವು ಧನಾತ್ಮಕ ಮತ್ತು ಆಶಾವಾದವನ್ನು ಅನುಭವಿಸುವಿರಿ. ನಿಮ್ಮ ಸೃಜನಾತ್ಮಕ ಮತ್ತು ಆಸಕ್ತಿಗೆ ಸಂಬಂಧಿಸಿದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಹೊರೆ ನಿಮಗೆ ತುಂಬಾ ಹೆಚ್ಚಿರಬಹುದು. ಹಠ ಬಿಟ್ಟು ತಾಳ್ಮೆಯಿಂದ ಇರುವುದು ಒಳ್ಳೆಯದು.
ಕನ್ಯಾ : ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಸಣ್ಣ ಧನಾತ್ಮಕ ಬದಲಾವಣೆಯನ್ನು ಮಾಡಲು, ನೀವು ಧ್ಯಾನದ ಮೊರೆ ಹೋಗುವ ಅಗತ್ಯವಿದೆ. ಮಾನಸಿಕವಾಗಿ ಸಮಾಧಾನವಿರಲಿದೆ. ಈ ಸಮಯದಲ್ಲಿ ಗ್ರಹಗಳ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗುವ ಕೆಲವು ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರಿ. ಆರೋಗ್ಯದ ಹೆಚ್ಚು ಗಮಮನ ಕೊಡುವುದು ಉತ್ತಮ.
ತುಲಾ : ಅನೇಕ ಅವಕಾಶಗಳನ್ನು ಪಡೆಯುವಿರಿ. ಸುತ್ತಮುತ್ತಲಿನ ಪರಿಸರ ಹಿತಕರವಾಗಿರುತ್ತದೆ. ಹೊಸ ಯೋಜನೆಗಳು ಮನಸ್ಸಿಗೆ ಬರುತ್ತವೆ ಮತ್ತು ನಿಕಟ ಸಂಬಂಧಿಗಳ ಸಹಾಯದಿಂದ ಆ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ಯಶಸ್ಸನ್ನು ಸಹ ಕಾಣಬಹುದು. ಹಣದ ಅಂಶವು ವೃದ್ದಿಯಾಗಲಿದೆ. ಕುಟುಂಬದಲ್ಲಿ ಯಾರಾದೋ ಮದುವೆಗಾಗಿ ಶಾಪಿಂಗ್ ಸಹ ಸಾಧ್ಯವಿದೆ. ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಹಿರಿಯರಿಂದ ಸಲಹೆ ಪಡೆಯಿರಿ. ದಿನನಿತ್ಯದ ಖರ್ಚಿನ ಬಗ್ಗೆ ಗಮನ ಕೊಡಿ.
ವೃಶ್ಚಿಕ : ಬರುವ ಹೊಸ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ನಿಮ್ಮ ಸಂಪೂರ್ಣ ಗಮನವು ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸುವುದರ ಮೇಲೆ ಇರುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಯೋಜನೆಗಳನ್ನು ರೂಪಿಸುತ್ತದೆ. ಹಣವನ್ನು ಗಳಿಸುವ ಸಾಧ್ಯತೆ ಇದೆ. ಧಾರ್ಮಿಕ ಅಥವಾ ಸಾಮಾಜಿಕ ಯೋಜನೆಗೆ ನೀವು ಜವಾಬ್ದಾರರಾಗಿರುತ್ತೀರಿ. ಕುಟುಂಬ ಸದಸ್ಯರಿಗಾಗಿಯೂ ಸ್ವಲ್ಪ ಸಮಯವನ್ನು ಕಳೆಯಿರಿ, ಇಲ್ಲದಿದ್ದರೆ ಅವರ ನಿರಾಶೆಯನ್ನು ಸಹಿಸಬೇಕಾಗಬಹುದು. ಇತರರನ್ನು ಆಕರ್ಷಿಸುವಲ್ಲಿ ವಿಫಲರಾಗುತ್ತೀರಿ.
ಧನುಸ್ಸು : ಸಾಲದಿಂದ ವ್ಯಾವಹಾರಿಕ ಸಮಸ್ಯೆ ದೂರವಾಗಲಿದೆ. ಸಂಬಂಧಿಕರಿಗೆ ಸಹಾಯ ಮಾಡುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದು ನಿಮ್ಮ ವಿಶೇಷ ಕೊಡುಗೆಯಾಗಿದೆ. ಸಾಮಾಜಿಕ ಪ್ರತಿಷ್ಠೆಯೂ ಹೆಚ್ಚಲಿದೆ. ಧಾರ್ಮಿಕ ಸಮಾರಂಭಕ್ಕೆ ಹೋಗುವುದರಿಂದ ಜನರನ್ನು ಭೇಟಿಯಾಗಿ ಮನಸ್ಸಿಗೆ ಸಂತೋಷವಾಗುತ್ತದೆ. ಅತಿಯಾದ ಒತ್ತಡ ಮತ್ತು ಕಠಿಣ ಪರಿಶ್ರಮವು ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸಬಹುದು. ಯಾವ ವ್ಯಕಿಯ ಜೊತೆಗೂ ನಿಷ್ಠೂರ ಮಾಡಿಕೊಳ್ಳಬೇಡಿ.
ಮಕರ : ವ್ಯಾವಹಾರಿಕ ಜೀವನದ ಮೇಲೆ ನಿಗ ಇರಲಿ. ಆದಾಯ ಮತ್ತು ವೆಚ್ಚದಲ್ಲಿ ಸಮಾನತೆ ಇರುತ್ತದೆ. ನೀವು ಮನೆ ದುರಸ್ತಿ ಅಥವಾ ಸುಧಾರಣೆಯನ್ನು ಯೋಜಿಸುತ್ತಿದ್ದರೆ ವಾಸ್ತು ನಿಯಮಗಳನ್ನು ಅನುಸರಿಸಿ. ಏಕಾಂತ ಅಥವಾ ಆಧ್ಯಾತ್ಮಿಕತೆಯಲ್ಲಿ ಸ್ವಲ್ಪ ಸಮಯ ಕಳೆಯುವುದು ನಿಮ್ಮ ವ್ಯಕ್ತಿತ್ವದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ಅದನ್ನು ಕತ್ತರಿಸುವುದು ಅವಶ್ಯಕ. ಅನಗತ್ಯವಾದ ಸೋಲನ್ನು ಅನುಭವಿಸಲಿದ್ದೀರಿ.
ಕುಂಭ : ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾದ್ಯತೆ ಇದೆ. ದಿನದ ಹೆಚ್ಚಿನ ಸಮಯವನ್ನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಕಳೆಯುವಿರಿ. ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಯೋಜನಕಾರಿ ಸಂಪರ್ಕವಿರುತ್ತದೆ. ನಿಮ್ಮ ಸ್ವಭಾವವು ಮನೆಯ ವಾತಾವರಣವನ್ನು ಆಹ್ಲಾದಕರಗೊಳಿಸುತ್ತದೆ. ಯುವಕರು ನಕಾರಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಬಹುದು. ಅದರಿಂದ ದೂರವಿರುವುದು ಉತ್ತಮ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಮೀನ : ಸರ್ಕಾರಿ ಉದ್ಯೋಗಿಗಳಿಗೆ ಇಂದು ವಿಶೇಷ ದಿನ. ಬೇರೆಯವರ ವಿಚಾರದಿಂದ ಖುಷಿ ಇರಲಿದೆ .ಕಳೆದ ಕೆಲವು ದಿನಗಳಿಂದ ಇದ್ದ ಒತ್ತಡ ಇಂದು ನಿವಾರಣೆಯಾಗಬಹುದು. ನಿಮ್ಮೊಳಗೆ ಆತ್ಮವಿಶ್ವಾಸ ಮತ್ತು ಶಕ್ತಿ ತುಂಬಿರುವುದನ್ನು ನೀವು ಅನುಭವಿಸಬಹುದು. ನಿಮ್ಮ ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡುವುದು ಧನಾತ್ಮಕವಾಗಿರುತ್ತದೆ. ನಿಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ನೀವು ವೈಯಕ್ತಿಕ ಕಾರ್ಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಜೀವ ಭಯ ಕಾಡಬಹುದು ಜಾಗ್ರತೆವಹಿಸುವುದು ಒಳ್ಳೆಯದು.