ಮೇಷ ರಾಶಿ
ಮೇಷ ರಾಶಿಯವರ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರಲಿವೆ ಹಾಗೂ ಸುಖದಿಂದ ಕೂಡಿದ್ದ ಜೀವನದಲ್ಲಿ ಸಂಪೂರ್ಣ ಸಮಸ್ಯೆಗಳ ಸಾಗರ ಕಂಡುಬರಲಿದೆ. ಇಂದು ನಿಮಗೆ ಶುಭದಾಯಕವಾಗಲಿದೆ. ಕರಿಯರ್ ನಲ್ಲಿ ಕೂಡ ಸಾಕಷ್ಟು ಉಪದ್ರವಗಳು ಕಂಡು ಬರಲಿವೆ. ಆರೋಗ್ಯದ ದೃಷ್ಟಿಯಲ್ಲಿ ಕೂಡ ನಿಮಗೆ ನೆಗೆಟಿವ್ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರ ಜೊತೆಗೆ ಕೂಡ ನಿಮ್ಮ ಭಿನ್ನಾಭಿಪ್ರಾಯಗಳು ಹೆಚ್ಚಾಗಲಿವೆ. ಹೊಟ್ಟೆ ಹಾಗೂ ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಆರೋಗ್ಯ ಸಮಸ್ಯೆಗಳು ನಿರ್ದಿಷ್ಟವಾಗಿ ನಿಮ್ಮನ್ನು ಕಾಡುವಂತಹ ಸಾಧ್ಯತೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೆಚ್ಚಾಗಿದೆ. ಶನಿವಾರದ ದಿನದಂದು ಶನಿ ದೇವನ ಪೂಜೆ ಮಾಡುವ ಮೂಲಕ ನೀವು ನಿಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.
ವೃಷಭ ರಾಶಿ
ಈ ಭಾನುವಾರ ನಿಮಗೆ ಸಂತಸ ತರಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ವೃಷಭ ರಾಶಿಯ ಜಾತಕದವರು ಮಾಡುವಂತಹ ಪ್ರಯಾಣಗಳು ಅವರಿಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ತರಬಹುದಾಗಿದೆ. ಆತ್ಮವಿಶ್ವಾಸದಲ್ಲಿ ಕಂಡುಬರುವಂತಹ ಕೊರತೆಯಿಂದಾಗಿ ಕೆಲಸದಲ್ಲಿ ಕೂಡ ನಿರೀಕ್ಷಿತ ಫಲಿತಾಂಶಗಳು ಸಿಗೋದಿಲ್ಲ. ಕುಟುಂಬದವರ ಜೊತೆಗೆ ನಿಮ್ಮ ಭಿನ್ನಾಭಿಪ್ರಾಯಗಳು ಹೆಚ್ಚಾಗಲಿವೆ. ಕೆಲಸದಲ್ಲಿ ಟ್ರಾನ್ಸ್ಫರ್ ಆಗುವಂತಹ ಸೂಚನೆಗಳು ಕೂಡ ಕಂಡುಬರುತ್ತಿವೆ. ಪ್ರಯಾಣ ಮಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಿ ಇಲ್ಲವಾದಲ್ಲಿ ದೊಡ್ಡ ಮಟ್ಟದ ನಷ್ಟವನ್ನು ಎದುರಿಸಬೇಕಾಗಿ ಬರುತ್ತೆ. ಈ ಸಮಯದಲ್ಲಿ ನೀವು ಜ್ವರವನ್ನು ಕೂಡ ಕಾಣಬೇಕಾಗಿ ಬರುತ್ತೆ ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ. ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಲು ದಿನಕ್ಕೆ 21 ಬಾರಿ ಓಂ ಭೋಮಾಯ ನಮಃ ಎಂಬ ಮಂತ್ರವನ್ನು ಜಪ ಮಾಡಬೇಕು.
ಮಿಥುನ ರಾಶಿ
ಮನೆಯ ಸದಸ್ಯರೊಂದಿಗೆ ಉತ್ತಮ ಭಾಂದವ್ಯ ಬೆಳಯಲಿದೆ. ಮಿಥುನ ರಾಶಿಯವರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಕೊರತೆಯನ್ನು ಕಾಣಲಿದೆ ಹಾಗೂ ಸಾಲಗಳೂ ಹೆಚ್ಚಾಗೋದು ಖಚಿತವಾಗಿದೆ. ಕುಟುಂಬದಲ್ಲಿ ಕುಟುಂಬ ಸದಸ್ಯರ ನಡುವೆ ಜಗಳಗಳು ಹೆಚ್ಚಾಗಲಿವೆ. ಕೆಲಸದಲ್ಲಿಯೂ ಸಮಸ್ಯೆ ಹೆಚ್ಚಾಗಲಿದೆ ಹಾಗೂ ವ್ಯಾಪಾರಸ್ಥರಿಗೆ ವ್ಯಾಪಾರಿಗಳಿಗೂ ಕೂಡ ಅಂದುಕೊಂಡ ರೀತಿಯಲ್ಲಿ ಲಾಭ ಸಿಗುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಜಾರಿಗೆ ತರುವಂತಹ ಪ್ರತಿಯೊಂದು ಯೋಜನೆಗಳು ಕೂಡ ಫೇಲ್ ಆಗಲಿವೆ. ಜೀವನ ಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಕೂಡ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿದೆ. ಕಣ್ಣು ಹಾಗೂ ಹಲ್ಲಿನ ಸಮಸ್ಯೆ ಈ ಸಂದರ್ಭದಲ್ಲಿ ಕಂಡು ಬರಬಹುದಾಗಿದ್ದು ಆರೋಗ್ಯದ ಬಗ್ಗೆ ಗಮನ ಇರಲಿ. ಈ ರೀತಿಯ ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ನೀವು ನಿಯಮಿತವಾಗಿ ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಜಪಿಸಬೇಕಾಗಿರುತ್ತದೆ.
ಸಿಂಹ ರಾಶಿ
ಮ್ಮ ಹಳೆಯ ಹೂಡಿಕೆಯಿಂದ ಉತ್ತಮ ಲಾಭ ಉಂಟಾಗುತ್ತದೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮಂಗಳನ ವಕ್ರಿಯ ಚಲನೆಯ ಪರಿಣಾಮ ಸಿಂಹ ರಾಶಿಯವರಿಗೆ ಕೆಲಸದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿ ಬರಬಹುದಾದಂತಹ ಪರಿಸ್ಥಿತಿಯನ್ನ ನಿರ್ಮಾಣ ಮಾಡಲಿದೆ. ಅದೃಷ್ಟದ ಸಹಾಯ ಇಲ್ಲದೆ ಇರೋ ಕಾರಣದಿಂದಾಗಿ ವಿಶೇಷವಾಗಿ ಸಿಂಹ ರಾಶಿಯ ಜಾತಕದ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರದಲ್ಲಿ ದೊಡ್ಡ ಮಟ್ಟದ ನಷ್ಟವನ್ನು ಎದುರಿಸಬೇಕಾಗಿ ಬರುತ್ತೆ. ಇದರಿಂದಾಗಿ ನಿಮ್ಮ ಮಾನಸಿಕ ಆರೋಗ್ಯದಲ್ಲಿ ಕೂಡ ಸಾಕಷ್ಟು ನೆಗೆಟಿವ್ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕಾಲಿನ ಭಾಗದಲ್ಲಿ ನೋವಿನ ಕಾರಣದಿಂದಾಗಿ ನೀವು ಸಾಕಷ್ಟು ಕಷ್ಟಗಳನ್ನ ಎದುರಿಸಬೇಕಾಗಿ ಬರಬಹುದಾಗಿದ್ದು ಇದರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ. ಪ್ರತಿದಿನ 21 ಬಾರಿ ಓಂ ಆದಿತ್ಯಾಯ ನಮಃ ಎನ್ನುವಂತಹ ಮಂತ್ರವನ್ನು ಜಪಿಸುವ ಮೂಲಕ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟವನ್ನು ದೂರ ಮಾಡಿಕೊಳ್ಳಬಹುದಾಗಿದೆ.
ಕುಂಭ ರಾಶಿ
ಹಣವನ್ನು ಹೆಚ್ಚು ಖರ್ಚು ಮಾಡಬೇಡಿ. ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಕುಂಭ ರಾಶಿಯ ಜಾತಕದವರು ತಾವು ಅಂದುಕೊಂಡ ಪಲಿತಾಂಶವನ್ನು ತಮ್ಮ ಕೆಲಸದಲ್ಲಿ ಪಡೆದುಕೊಳ್ಳಬಹುದಾಗಿದೆ ಆದರೆ ಇದು ನಿಮ್ಮ ಮನಸ್ಸಿಗೆ ತೃಪ್ತಿ ನೀಡೋದಿಲ್ಲ. ಪಾರ್ಟ್ನರ್ಶಿಪ್ ವ್ಯವಹಾರವನ್ನು ಮಾಡ್ತಾ ಇದ್ರೆ ಈ ಸಂದರ್ಭದಲ್ಲಿ ನಿಮ್ಮ ಪಾರ್ಟ್ನರ್ ಜೊತೆಗೆ ಆಗುವಂತಹ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಪಾರ್ಟ್ನರ್ಶಿಪ್ ಮುರಿಯುವ ಸಾಧ್ಯತೆ ಹೆಚ್ಚಾಗಿದೆ. ಕೆಲಸವನ್ನ ಬದಲಾಯಿಸುವಂತಹ ಯೋಜನೆಗಳು ಕೂಡ ನಿಮಗೆ ಬರೋದಕ್ಕೆ ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ ಆದಾಯ ಹೆಚ್ಚಾಗಿ ಸಿಕ್ತ ಇಲ್ಲ ಅಂದ್ರು ಕೂಡ ಖರ್ಚು ಮಾತ್ರ ಹೆಚ್ಚಾಗಲಿದೆ ಹಾಗೂ ಅದೇ ರೀತಿಯಲ್ಲಿ ಸಾಲ ಕೂಡ ಹೆಚ್ಚಾಗುತ್ತೆ. ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯ ಕೂಡ ಹಳಸುವಂತಹ ಸನ್ನಿವೇಶಗಳು ಕಂಡುಬರಲಿ ಹಾಗೂ ಆರೋಗ್ಯವು ಕೂಡ ಹದಗೆಡಲಿದೆ. ಈ ಎಲ್ಲ ರೀತಿಯ ಸಮಸ್ಯೆಗಳಿಂದ ಹೊರಬರುವುದಕ್ಕಾಗಿ ನೀವು ಶನಿವಾರದ ದಿನದಂದು ಅಗತ್ಯ ಇರುವವರಿಗೆ ಊಟವನ್ನು ದಾನ ಮಾಡಿ ಖಂಡಿತವಾಗಿ ನಿಮಗೆ ಒಳ್ಳೆದಾಗುತ್ತೆ.