ವೃಷಭ ರಾಶಿ
ಮೇಲಧಿಕಾರಿಯ ಬೆಂಬಲ ಪಡೆಯುತ್ತೀರಿ. ನೀವು ಮಾಡುವ ಕೆಲಸಕ್ಕೆ ಬೆಂಬಲ ಸಿಗಲಿದೆ. ಶುಕ್ರ ಗ್ರಹದ ರಾಶಿ ಬದಲಾವಣೆಯಿಂದಾಗಿ ವೃಷಭ ರಾಶಿಗೆ ಸೇರಿದ ಜನರು ವ್ಯಾಪಾರವನ್ನು ಮಾಡುವುದರಿಂದ ಅತ್ಯಂತ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಉತ್ತಮ ಅವಕಾಶಗಳ ಪ್ರಾಪ್ತಿಯಾಗುವುದು. ವೃಷಭ ರಾಶಿಗೆ ಸೇರಿದ ಜನರಿಗೆ ಈ ಅವಧಿಯಲ್ಲಿ ಕೆಲಸ ಲಭಿಸುವ ಉತ್ತಮವಾದ ಯೋಗಗಳು ಸೃಷ್ಟಿಯಾಗಲಿದೆ. ಜೊತೆಗೆ ಈ ರಾಶಿಗೆ ಸೇರಿದ ಜನರು ಕೆಲಸವನ್ನು ಬದಲಾಯಿಸಬೇಕೆಂದು ಯೋಚಿಸುತ್ತಿದ್ದರೆ, ನಿಮ್ಮ ಆಸೆ ಈ ಅವಧಿಯಲ್ಲಿ ಈಡೇರುವ ಸಂಭವ ಸಾಕಷ್ಟಿದೆ. ಈ ರಾಶಿಗೆ ಸೇರಿದ ಜನರು ನಮ್ಮ ಸಂಗಾತಿಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಹೊಂದುವುದು ಖಂಡಿತ. ಶುಕ್ರನ ಕೃಪೆಯಿಂದ, ವೃಷಭ ರಾಶಿಯವರ ಪ್ರಗತಿಯನ್ನು ಡಿಸೆಂಬರ್ 28 ಮತ್ತು ಜನವರಿ 28 ರ ನಡುವೆ ನಿರೀಕ್ಷಿಸಬಹುದಾಗಿದೆ. ಇದು ನಿಮ್ಮ ವೃತ್ತಿಜೀವನಕ್ಕೆ ಉತ್ತಮ ಸಮಯವಾಗಿರುತ್ತದೆ. ನೀವು ಅನೇಕ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಇದು ನಿಮ್ಮ ಸ್ಥಾನ ಮತ್ತು ಪ್ರತಿಷ್ಠೆಯ ಅಂಶವಾಗಿರಬಹುದು.
ಮೇಷ ರಾಶಿ
ಹೊಸ ಲಾಭವನ್ನು ಪ್ರಾರಂಭ ಮಾಡುವವರು ಹೆಚ್ಚು ಲಾಭವನ್ನು ಪಡೆಯುವರು. ಕಷ್ಟ ಪಟ್ಟು ಕೆಲಸ ಮಾಡಿದರೆ ಯಶಸ್ವಿಯಾಗುತ್ತಾರೆ. ಶುಕ್ರ ಗ್ರಹದ ಸಂಚಾರದ ಪ್ರಭಾವದಿಂದಾಗಿ ಮೇಷ ರಾಶಿಗೆ ಸೇರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಅತ್ಯುತ್ತಮವಾದ ಪ್ರದರ್ಶನವನ್ನು ನೀಡುವುದರಲ್ಲಿ ಯಶಸ್ಸು ಗಳಿಸುವರು. ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವನ್ನು ಹೊಂದುವರು. ಹಾಗಾಗಿ ಮೇಷ ರಾಶಿಗೆ ಸೇರಿದ ಜನರಿಗೆ ಶುಕ್ರನ ಈ ಸಂಚಾರದಿಂದಾಗಿ ಅತ್ಯುತ್ತಮ ಜವಾಬ್ದಾರಿ ದೊರಕುವ ಸಂಭವ ಹೆಚ್ಚಾಗಿರಲಿದೆ. ಹಳೆಯ ಹೂಡಿಕೆಗಳಿಂದ ಮೇಷ ರಾಶಿಗೆ ಸೇರಿದ ಜನರಿಗೆ ಆಕಸ್ಮಿಕವಾಗಿ ಧನ ಲಾಭವಾಗುವ ಅತ್ಯುತ್ತಮವಾದ ಅವಕಾಶಗಳ ಪ್ರಾಪ್ತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಪಟ್ಟ ಯಾವುದಾದರ ವಿಚಾರ ನಡೆಯುತ್ತಿದ್ದರೆ, ಅದರಲ್ಲಿ ತೀರ್ಪು ನಿಮ್ಮ ಪರವಾಗಿ ಬರುವುದರೊಂದಿಗೆ ಯಶಸ್ಸು ಗಳಿಸುವ ಸಂಭವ ಸಾಕಷ್ಟು ಹೆಚ್ಚಾಗಿರುವುದು. ಕುಂಭ ರಾಶಿಯಲ್ಲಿ ಶುಕ್ರನ ಸಂಚಾರವು ಮೇಷ ರಾಶಿಯ ಜನರಿಗೆ ಶುಭ ಫಲಿತಾಂಶಗಳನ್ನು ತರುತ್ತದೆ. ಹೊಸ ವರ್ಷದಲ್ಲಿ, ನೀವು ಹಣವನ್ನು ಗಳಿಸುತ್ತೀರಿ, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ತುಂಬಾ ಬಲವಾಗಿರಿಸುತ್ತದೆ.
ಮಿಥುನ ರಾಶಿ
ಮಿಥುನ ರಾಶಿಗೆ ಸೇರಿದ ಜನರಿಗೆ ಶುಕ್ರನ ಈ ಸಂಚಾರದಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ದೊರಕುವುದು. ಈ ಅವಧಿಯಲ್ಲಿ ನಿಮಗೆ ಸಾಮಾಜಿಕ ಕಾರ್ಯಗಳಲ್ಲಿ ಸಾಕಷ್ಟು ಆಸಕ್ತಿ ಹೆಚ್ಚಾಗುವುದು. ಜೊತೆಗೆ ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿಯೂ ಸಹ ನಿಮ್ಮ ಆಸಕ್ತಿ ಸಾಕಷ್ಟು ಹೆಚ್ಚಾಗಲಿದೆ. ಶುಕ್ರನ ಈ ಚಲನೆಯಿಂದಾಗಿ ನೀವು ಅಗತ್ಯವಿರುವ ಜನರಿಗೆ ದಾನವನ್ನು ಮಾಡುವುದರಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಇದರಿಂದಾಗಿ ಅವರಿಗೆ ಸಹಾಯ ಮಾಡುವುದರಲ್ಲಿ ಯಶಸ್ಸು ಗಳಿಸುವಿರಿ. ಈ ಅವಧಿಯಲ್ಲಿ ಮಿಥುನ ರಾಶಿಗೆ ಸೇರಿದ ಜನರು ತಮ್ಮ ಮನೆಯವರೊಂದಿಗೆ ಯಾವುದಾದರೂ ತೀರ್ಥಕ್ಷೇತ್ರಕ್ಕೆ ತೆರಳುವ ಯೋಗ ಕೂಡಿ ಬರುವುದು.