ಮೇಷ ರಾಶಿ: ನಿಮ್ಮ ಅತಿಯಾದ ವಿಶ್ವಾಸವೇ ಅಂತಿಮವಾಗಿ ತೊಂದರೆ ಕೊಡಬಹುದು. ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಉದ್ಯಮದಲ್ಲಿ ಬರುವ ಎಂತಹ ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. ಮಕ್ಕಳಿಂದ ಇಂದಿನ ಕೆಲಸಕ್ಕೆ ಅಡ್ಡಿಯಾಗಬಹುದು. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದದಿಂದ ಬೇಸರ ಇರಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವು ಸಂತೋಷಗೊಳ್ಳುವರು. ಅಪರಿಚಿತರನ್ನು ನಂಬಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ನಿಮ್ಮನ್ನು ಇಷ್ಟಪಡುವವರಿಗೆ ಅಲ್ಪ ಸಮಯವನ್ನಾದರೂ ಕೊಡುವುದು ಅನಿವಾರ್ಯವಾಗಲಿದೆ.
ವೃಷಭ ರಾಶಿ: ಇಂದು ಇನ್ನೊಬ್ಬರ ಇಂಗಿತವನ್ನು ಅರ್ಥಮಾಡಿಕೊಂಡು ಕಾರ್ಯವನ್ನು ನಿರ್ವಹಿಸಿ. ನೀವು ವ್ಯಾಪಾರಸ್ಥರಾಗಿದ್ದರೆ, ನೀವು ಕೆಲಸದ ನಿಮಿತ್ತ ಪ್ರಯಾಣಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಹಣದ ಪರಿಸ್ಥಿತಿ ಉತ್ತಮವಾಗಿದ್ದರೂ, ಖರ್ಚೂ ಇರಲಿದೆ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು. ಕೆಲಸವನ್ನು ಹಂಚಿಕೊಂಡು ಮಾಡಿ. ಇದು ಕಾರ್ಯಕ್ಕೆ ವೇಗವನ್ನು ಹೆಚ್ಚಿಸುವುದು. ಆಪ್ತರಿಂದ ನಡೆವಳಿಕೆಗೆ ಟೀಕೆಗಳು ಬರಬಹುದು. ಇದರಿಂದ ನಿಮ್ಮ ನಡುವಿನ ಸಂಬಂಧವು ಕೆಡಬಹುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ಕೆಲವು ವಿಚಾರಕ್ಕೆ ದಿಕ್ಕು ತೋಚದೇ ಸುಮ್ಮನಾಗುವಿರಿ.
ಮಿಥುನ ರಾಶಿ: ನೀವಾಗಿಯೇ ಕಲ್ಪಿಸಿಕೊಂಡಿದ್ದನ್ನು ಬಿಡುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ಹೊಸ ಒಪ್ಪಂದವನ್ನು ಮಾಡುವಾಗ ಹೆಚ್ಚು ಜಾಗರೂಕತೆ ಇರಲಿ. ಯಾರನ್ನೂ ಕುರುಡಾಗಿ ನಂಬವುದು ಬೇಡ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ ಇರಲಿದೆ. ಅಸ್ಥಿರವಾದ ಮನಃಸ್ಥಿತಿಯು ಕಾರ್ಯವನ್ನು ಹಾಳುಮಾಡುವುದು. ಪ್ರಯಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ನಿಮ್ಮ ಆಸೆ ನೆರವೇರುತ್ತಿಲ್ಲ ಎಂಬ ಆತಂಕವೂ ಇರಲಿದೆ. ಹಲವು ದಿನಗಳ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು.
ಕರ್ಕಾಟಕ ರಾಶಿ: ಮಾತಿನ ಹಿಂದಿರುವ ಮುಖ್ಯಂಶವು ಗೊತ್ತಾಗುವುದು. ಅಪ್ರಬುದ್ಧ ಆಲೋಚನೆಗಳಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗುವುದು. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು. ಇಂದಿನ ನಿಮ್ಮ ಉತ್ಸಾಹವು ಸಮಾರಂಭಗಳಲ್ಲಿ ಸಂತೋಷದಿಂದ ಭಾಗವಿಸುವಂತೆ ಮಾಡುವುದು. ಹೊಸ ವೃತ್ತಿಯನ್ನು ಹುಡುಕುತ್ತಿದ್ದರೆ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ಧನ ಸಂಪಾದನೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವಿರಿ. ಮನೆಯ ಬಗ್ಗೆ ಪ್ರೀತಿ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯನ್ನು ಬಲದಿಂದ ತಂದುಕೊಳ್ಳಬೇಕು. ಬಂಧುಗಳಿಂದ ಭೂಮಿಯನ್ನು ಖರೀದಿ ಮಾಡುವಿರಿ.
ಸಿಂಹ ರಾಶಿ: ಇಂದು ಪ್ರಶಂಸೆಯನ್ನೂ ಪೂರ್ಣವಾಗಿ ಒಪ್ಪಿಕೊಳ್ಳಲಾರಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿದ್ದು ಹತಾಶೆಯು ಕಾಡಬಹುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಿ. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನಬೇಕು. ವ್ಯಾಪಾರಸ್ಥರಿಗೆ ಮಿಶ್ರ ಲಾಭವಿದೆ. ನಿಮಗೆ ಇಂದು ಕಾರ್ಯದಲ್ಲಿ ಅನಿರೀಕ್ಷಿತ ಜಯವಿರಲಿದೆ. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಯುಕ್ತಿಯಿಂದ ಕೆಲಸವನ್ನು ಸಾಧಿಸಿದ ಎಲ್ಲವೂ ಕ್ಷೇಮ. ನಿಮ್ಮ ನಡವಳಿಕೆಯು ಕೆಲವರಿಗೆ ಇಷ್ಟವಾಗದೇ ಇರಬಹುದು. ಯೋಗ ಹಾಗೂ ಧ್ಯಾನವನ್ನು ಮಾಡಿ ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಿ. ಹಳೆಯದನ್ನೇ ಹೊಸತನ್ನಾಗಿಸಿಕೊಂಡು ಬಳಸುವಿರಿ.
ಕನ್ಯಾ ರಾಶಿ: ಇಂದು ನಿಮಗೆ ಯಾರ ವಿಶ್ವಾಸವನ್ನೂ ವಿಶೇಷವಾಗಿ ಗಳಿಸಲು ಇಷ್ಟವಾಗದು. ಇಂದು ಅಪರಿಚಿತರು ಮಾರಾಟದ ವಿಚಾರದಲ್ಲಿ ಮೋಸ ಮಾಡುವರು. ಇಂದಿನ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಮನೆಯಲ್ಲಿ ಸಂತೋಷದ ವಾತಾವರಣವನ್ನು ನೀವೇ ಸೃಷ್ಟಿಸುವಿರಿ. ಬಂಧುಗಳು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ವಿಳಂಬವಾದರೂ ಮಾರ್ಗ ಸರಿಯಾಗಿರಲಿದೆ. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವರು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡುವಿರಿ. ಇಂದಿನ ಕಾರ್ಯವು ಪೂರ್ಣವಾಗುವ ತನಕ ನಿಮಗೆ ಮಾನಸಿಕ ವಿಶ್ರಾಂತಿಯು ಇರದು. ನಿಮ್ಮ ಮಾತು ವಿವಾದವನ್ನು ಹುಟ್ಟುಹಾಕಬಹುದು. ನಿತ್ಯ ಬಳಕೆಯ ವಸ್ತುವಿನ ವ್ಯಾಪಾರದಿಂದ ಲಾಭ ಗಳಿಸುವಿರಿ. ಸಂಗಾತಿಯ ಬಯಕೆಯನ್ನು ಪೂರ್ಣವಾಗಿ ಈಡೇರಿಸಲಾರಿರಿ. ಕೆಲವು ಕಾರ್ಯಗಳು ಬೇಡವೆಂದರೂ ನಿಮ್ಮನ್ನು ಸುತ್ತಿಕೊಳ್ಳುವುವು.