ಮೇಷ: ಬಂಧುಗಳ ಭೇಟಿಯಿಂದ ಸಂತೋಷ. ಆಹಾರ ಪದಾರ್ಥ ಉದ್ಯಮದಲ್ಲಿ ನಷ್ಟ. ವಾಣಿಜ್ಯ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ತಿರುವು. ಪುಣ್ಯಸ್ಥಳಕ್ಕೆ ಕಾರಣಾಂತರಗಳಿಂದ ಹೋಗಲಾಗದು. ಪಾಲುದಾರಿಕೆಯಲ್ಲಿ ಅಧಿಕಾರದ ಬಗ್ಗೆ ಅಸಮಾಧಾನ ಹೆಚ್ಚಾಗುವುದು. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು. ಸಂಗಾತಿಯ ಜೊತೆ ಆಪ್ತವಾದ ಮಾತುಕತೆ ಇರಲಿದೆ. ನಿಮಗೆ ಸಾಕಷ್ಟು ಸಮಯವು ಇಂದು ಇರಲಿದ್ದು ಏನು ಮಾಡಬೇಕೆಂದು ತಿಳಿಯದೇ ಕಾಲವನ್ನು ಕಳೆಯುವಿರಿ.
ವೃಷಭ: ಪ್ರಭಾವಿಗಳ ಜತೆ ಸಂವಹನ ತೀರ್ಥಯಾತ್ರೆಗೆ ನಿರ್ಧಾರ, ತಂಪುಪಾನೀಯ ವ್ಯಾಪಾರದಲ್ಲಿ ಲಾಭ. ಗಾಯಕರಿಗೆ ವೇದಿಕೆ ಲಭ್ಯ. ಇಂದು ನಿಮ್ಮ ದೇಹವು ಆಯಾಸದಿಂದ ದುರ್ಬಲವಾಗಬಹುದು. ಹೆಚ್ಚು ವಿಶ್ರಾಂತಿಯ ಅವಶ್ಯಕತೆ ಇರುವುದು. ಇಂದು ನಿಮ್ಮ ವಾಹನದ ಬಳಕೆಯನ್ನು ಹೆಚ್ಚು ಮಾಡುವಿರಿ. ನಿಮಗಾಗಿ ಕಾಯುವವರಿಗೆ ಬೇಸರ ತರಿಸಬಹುದು. ಕಾರ್ಯದ ನಿಮಿತ್ತ ನಿಮ್ಮ ಓಡಾಟವು ವ್ಯರ್ಥವಾಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ.
ಮಿಥುನ: ದ್ವಾದಶದ ಗುರುವಿನ ಪ್ರಭಾವದಿಂದ ಹೂಡಿಕೆ ಹಣ ಕಳೆದುಕೊಳ್ಳುವಿರಿ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲವಾದೀತು. ಒಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರಿಗೆ ತೊಂದರೆ. ನೂತನ ವಾಹನದ ಖರೀದಿಯನ್ನು ಮಾಡುವ ಇಚ್ಛೆಯು ಇಂದು ಪೂರ್ಣವಾಗುವುದು. ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಕುಳಿತಿರುವರು. ವೈವಾಹಿಕ ಜೀವನ ಆರಂಭದ ದಿನಗಳಲ್ಲಿ ಸಂತೋಷವೇ ಇರುವುದು. ಪರಸ್ಪರ ದುಃಖವನ್ನು ಹಂಚಿಕೊಂಡು ದಂಪತಿಗಳು ಹಗುರಾಗುವುದು.
ಕಟಕ: ಜಿಮ್ ಮಾಲೀಕರಿಗೆ ನಿರೀಕ್ಷಿತ ಲಾಭ. ಸಿದ್ಧ ಉಡುಪುಗಳ ಅಂಗಡಿಯವರಿಗೆ ಸಮಸ್ಯೆ. ವಿದೇಶದಲ್ಲಿರುವ ಮಕ್ಕಳಿಂದ ಅಶುಭ ಸುದ್ದಿ. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ಅಶಿಸ್ತಿನಿಂದ ಇಂದಿನ ಕೆಲಸವನ್ನು ಮಾಡಿ, ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಇಂದು ನಿಮಗೆ ಅನಿರೀಕ್ಷಿತ ಆನಂದವನ್ನು ತರುವ ವಾರ್ತೆಗಳು ಬರಬಹುದು. ಬಹಳ ದಿನಗಳ ಕಳೆದ ಮೇಲೆ ತಂದೆಯ ಜೊತೆ ಮಾತನಾಡಿ ನೆಮ್ಮದಿಯು ಪಡೆಯುವಿರಿ. ನಿಮ್ಮ ದೂರ ಪ್ರಯಾಣಕ್ಕೆ ಕುಟುಂಬದಿಂದ ಒಪ್ಪಿಗೆ ಸಿಗದು.
ಸಿಂಹ: ನಂಬಿದವರಿಂದಲೇ ವಿಶ್ವಾಸ ಘಾತುಕ ಕೆಲಸ. ಅಮೂಲ್ಯ ವಸ್ತು ಖರೀದಿ. ಸ್ವಂತ ಉದ್ದಿಮೆದಾರ ಮಹಿಳೆಯರಿಗೆ ವಿಶೇಷ ದಿನ. ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಮಕ್ಕಳಿಂದ ಒಪ್ಪಿಗೆಯನ್ನು ಪಡೆಯುವಿರಿ. ಬಂಧುಗಳ ಜೊತೆ ಆಕಸ್ಮಿಕವಾಗಿ ಮನಸ್ತಾಪ ಕಾಣಿಸೀತು. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕಡಲ ಸಮಯವನ್ನು ತೆಗೆದುಕೊಂಡಿತು. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆಡುವುದಿಲ್ಲ. ಹಣದ ಉಳಿತಾಯಕ್ಕೆ ಉಪಾಯದ ಅಗತ್ಯವು ಕಾಣಿಸಿಕೊಳ್ಳುವುದು. ಅಧ್ಯಯನದಲ್ಲಿ ಚುರುಕುತನ ಬೇಕು.
ಕನ್ಯಾ: ವಿಚ್ಛೇದಿತರಿಗೆ ವಿವಾಹ ಯೋಗ ಕೂಡಿಬರಲಿದೆ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಬೆಂಕಿಯ ಸಣ್ಣ ಕಿಡಿಯಾದರೂ ಅದು ಇರುವಲ್ಲಿಯೇ ಇರಬೇಕು. ನಿಮ್ಮ ವ್ಯವಹಾರದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನೀವು ಯೋಚಿಸುತ್ತಿದ್ದರೆ ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಯಾರದೋ ಕಾರಣಕ್ಕೆ ಅತಂತ್ರ ಸ್ಥಿತಿ ಬರಬಹುದು. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮನಸ್ಸು ಸ್ವಸ್ಥವಾಗಿ ಇರದು. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಮಾತನ್ನು ಕೇಳಬೇಕಾದೀತು. ಕೌಶಲವನ್ನು ಎಲ್ಲರ ಮುಂದೂ ತೋರಿಸಲಾರಿರಿ.