ಮೇಷ ರಾಶಿ: ಸಹೋದರಿಯ ವಿಧ್ಯಾಭ್ಯಾಸದಲ್ಲಿ ಪ್ರಗತಿ. ದವಸ ಧಾನ್ಯಗಳ ವ್ಯಾಪಾರಿಗಳಿಗೆ ಉತ್ತಮ ಕಾಲ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ:2.
ವೃಷಭ ರಾಶಿ: ನೀರಿಗೆ ಸಂಬಂಧಿಸಿದ ಕೆಲಸದಲ್ಲಿ ಲಾಭ. ವಾಹನ ವ್ಯಾಪಾರದಲ್ಲಿ ನಷ್ಟ ಆಗಬಹುದು. ಹಾಲು ಉತ್ಪಾದಕರಿಗೆ ಇಂದು ಆರ್ಥಿಕ ಸಹಾಯ ಸಿಗಲಿದೆ. ಶುಭಸಂಖ್ಯೆ: 6
ಮಿಥುನ ರಾಶಿ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು. ವಸ್ತ್ರ ವಿನ್ಯಾಸಕರಿಗೆ ಹೆಚ್ಚುವ ಬೇಡಿಕೆ. ಕಾನೂನು ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಹುದು. ಶುಭಸಂಖ್ಯೆ: 8
ಕಟಕ ರಾಶಿ: ತರಕಾರಿ ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ. ಹಣ್ಣಿನ ವ್ಯಾಪಾರದಲ್ಲಿ ಲಾಭವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಶುಭಸಂಖ್ಯೆ:1
ಸಿಂಹ ರಾಶಿ: ಕಣ್ಣಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ವಿದೇಶ ಪ್ರವಾಸದ ಯೋಜನೆ ಬರಬಹುದು. ಉದ್ಯೋಗ ಬದಲಿಸುವ ಸಾಧ್ಯತೆ ದಟ್ಟವಾಗಿದೆ. ಶುಭಸಂಖ್ಯೆ:9
ಕನ್ಯಾ ರಾಶಿ: ದಿನಸಿ ವ್ಯಾಪಾರಸ್ಥರಿಗೆ ಹೆಚ್ಚು ಲಾಭ. ಮೂಳೆಗಳ ಸಮಸ್ಯೆ ಬಾಧಿಸುತ್ತದೆ. ಅಲಂಕಾರಿಕ ವಸ್ತುಗಳ ಖರೀದಿ ಮಾಡುವಿರಿ. ಮಾನಸಿಕ ಕಿರಿಕಿರಿಯಾಗಬಹುದು. ಶುಭಸಂಖ್ಯೆ:2