ಮೇಷ ರಾಶಿ: ಹೊಸ ಶೈಲಿಗೆ ಹೊಂದಿಕೊಳ್ಳಲು ತುಸು ಕಷ್ಟವೇ ಆಗಬಹುದು, ಕೆಲಸದಲ್ಲಿ ಶ್ರದ್ದೆ ಹೆಚ್ಚಾಗಲಿದೆ. ಪ್ರಾತಿನಿಧ್ಯ ಸಿಗುವ ತನಕ ಏನಾದರೂ ಮಾಡುತ್ತಿರಬೇಕಲ್ಲ. ಶುಭ ದಿನ ಗುರು ರಾಯರ ಸ್ಮರಣೆ ಮಾಡಿ.
ವೃಷಭ ರಾಶಿ: ಜನ್ಮ ಗುರು, ಸಪ್ತಮ ಬುಧ. ಎರಡು ಸಮಸ್ಯೆಗಳು ಬೇಗ ಬಗೆಹರಿಸಬೇಕಾದ ಕಾಲ. ಪುನರ್ ಪ್ರಯತ್ನ ಆಗಬೇಕಲ್ಲ. ಸಮಾಧಾನಕರ ಬೆಳವಣಿಗೆ ಕಾಣಲು ಹಿಂದಿನ ಶೈಲಿಯಲ್ಲೇ ಸಾಗಬೇಕಲ್ಲ. ಪರಮೇಶ್ವರನ ಧ್ಯಾನ ಮಾಡಿ.
ಮಿಥುನ ರಾಶಿ: ಕೌಟುಂಬಿಕ ಮತ್ತು ತಾಂತ್ರಿಕ ನಿರ್ಧಾರಗಳು ಹೇಗೆ ಎನ್ನೋದು ಇದೀಗ ಅರ್ಥವಾಗಿದೆಯಷ್ಟೆ. ಯಾವುದು ಸರಿ ಎನ್ನೋದು ಮುಖ್ಯವಲ್ಲ. ಪ್ರಬುದ್ದ ಚಿಂತನೆ ಇದ್ದಾಗ ಯಾವುದೂ ಕಷ್ಟವಾಗದು ಅಂತ ಗೊತ್ತಾಗಬೇಕಲ್ಲ!
ಕಟಕ ರಾಶಿ: ಭಾಗ್ಯದಲ್ಲಿ ರಾಹು, ಎಲ್ಲಾ ಹಂತದಲ್ಲೂ ಮಾತುಕತೆ ನಡೆಸಿ ಮುಂದುವರಿಯುವ ಪ್ರಯತ್ನ ಮಾಡಿ ವಾಸ್ತವ ಸಂದೇಶ ಬೇರೆ ಇದೆಯಲ್ಲ. ಸಕಾಲಿಕವಾಗಿ ಕೆಲವು ನಿರ್ಧಾರ ಕೈಗೊಳ್ಳಬೇಕು, ಅಷ್ಟೆ. ಸಾಯಿ ಬಾಬಾ ಅವರ ದರ್ಶನ ಪಡೆಯಿರಿ.
ಸಿಂಹ ರಾಶಿ: ಸಪ್ತಮ ಶುಕ್ರ ವಾರಾಂತ್ಯ ಬುಧ ರಾಶಿ ಬದಲಿಸುತ್ತಾನೆ. ನೆಮ್ಮದಿಯ ಹಾದಿ ತೆರೆದುಕೊಳ್ಳುವ ಸಾಧ್ಯತೆ ಕಂಡಿದೆ. ಕೆಲವೊಂದು ಭೇಟಿಗಳು ಹೊಸ ರಹಸ್ಯವನ್ನು ಬಹಿರಂಗಪಡಿಸಲಿವೆ. ರಾಯರ ಮಠಕ್ಕೆ ಹೋಗಿ ಬನ್ನಿ.
ಕನ್ಯಾ ರಾಶಿ: ವೇಗವಾಗಿ, ಇನ್ನಷ್ಟು ವೇಗವಾಗಿ ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕಾಲ.” ಸುಮ್ಮನೆ ಕೂತರೆ ಯಾವುದೂ ಆಗದು. ವಿಶ್ವಾಸವಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತದೆ ಭಾಗ್ಯದಲ್ಲಿರುವ ಗುರು. ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ.
ತುಲಾ ರಾಶಿ: ಬುಧನ ಚಲನೆ ತುಸು ಆಶಾದಾಯಕ, ಎರಡು ವಿಚಾರದಲ್ಲಿ ಇರುವ ಗೊಂದಲ ನಿವಾರಣೆ ಆಗಿದೆ ವಾಸ್ತವ ಸಂಗತಿ ಬೇರೆ ಇರುವಾಗ ಸುಮ್ಮನೆ ಕಷ್ಟಪಡುವ ಅಗತ್ಯವಿಲ್ಲ. ಗುರುಗಳ ಸ್ಮರಣೆ ಮಾಡಿ.
ವೃಶ್ಚಿಕ ರಾಶಿ: ಗುರುವಿನ ಅನುಗ್ರಹ ನಿಮಗುಂಟು. ಶುಕ್ರನ ಚಲನೆ ಭರವಸೆದಾಯಕ. ಎಷ್ಟು ದಿನ ಅಂತ ಹೀಗೆ ಒದ್ದಾಡೋದು ಎನ್ನುತ್ತದೆ ರಾಹು. ಪುರಸ್ಕಾರ ಪುನರ್ ಆರಂಭ ಮತ್ತು ಪೂರ್ಣ ಸಹಾಯ -ಎಲ್ಲವೂ ಆಗಲಿದೆ. ಸಾಯಿ ಬಾಬಾ ದರ್ಶನ ಮಾಡಿ.
ಧನಸ್ಸು ರಾಶಿ: ಸಂತೃಪ್ತಿದಾಯಕ ಅಲೆ ಬಂದಿದೆ. ಎರಡೂ ರೀತಿಯಲ್ಲೂ ಸಮಧಾನಕರ ಫಲಿತಾಂಶ ದೊರಕಬೇಕಲ್ಲ. ಆರಂಭದಲ್ಲಿ ಇದ್ದ ಅನುಮಾನವಿಲ್ಲವಲ್ಲ, ವಾರಾಂತ್ಯ ಸಹನದ ವಾತಾವರಣವುಂಟು. ಗುರು ರಾಯರ ಆಶ್ಇರ್ವಾದ ಪಡೆಯಿರಿ.
ಮಕರ ರಾಶಿ: ಭಾಗ್ಯದಲ್ಲಿ ಕೇತು, ಸಪ್ತಮ ಕುಜ. ಒಂದು ಕಡೆಯಿಂದ ಎಲ್ಲವನ್ನೂ ಪರಿಶೀಲಿಸಿ ಆ ಮೇಲೆ ಒಂದು ನಿರ್ಧಾರಕ್ಕೆ ಬನ್ನಿ. ಕಾರ್ಯತಂತ್ರ ನೀವಂದುಕೊಂಡಷ್ಟು ಸಲೀಸಲ್ಲವಲ್ಲ! ಗುರು ರಾಘವೇಂದ್ರ ಸ್ವಾಮಿಯ ಮಠಕ್ಕೆ ಬೇಟಿ ನೀಡಿ.
ಕುಂಭ ರಾಶಿ: ಜನ್ಮದಲ್ಲಿ ಶುಕ್ರನಿದ್ದಾನೆ. ಕುಜ ಬಲಿಷ್ಠ ಸ್ಥಾನ ಪಡೆದಿದ್ದಾನೆ. ಆಹ್ಲಾದಕರ ವಾತಾವರಣ ಮೂಡುವ ಸಮಯವಿದು. ಹಿತೈಷಿಗಳು ಹಲವು ರೀತಿಯಲ್ಲಿ ಸಹಾಯ ಮಾಡಿಯಾರು. ಶಿವನಾಮ ಜಪ ಮಾಡಿ.
ಮೀನ ರಾಶಿ: ಜನ್ಮ ರಾಹು ಪಂಚಮಿ ಕುಜ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಪ್ರಯತ್ನ ಆಗಲಿ ಮನವರಿಕೆ ಆಗುವ ಸಾಧ್ಯತೆ ಇದೆ. ಇಂದು ವೇಳೆ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ. ಗುರು ರಾಘವೇಂದ್ರ ಸ್ವಾಮಿಯ ದರ್ಶನ ಮಾಡಿ.