ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:46 ಗಂಟೆ, ರಾಹು ಕಾಲ 15:40 ರಿಂದ 17:13, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ ಸಂಜೆ 14:07ರ ವರೆಗೆ.
ಮೇಷ ರಾಶಿ : ಇಂದು ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ವಾದ ಮಾಡಿ ಗೆಲ್ಲುವುದಕ್ಕಿಂತ ವಾಸ್ತವವನ್ನು ಅರಿತು ಸುಮ್ಮನಾಗುವುದು ಉತ್ತಮ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳುವುದು ಉತ್ತಮ. ಎಂದಿನಂತೆ ನಿಮ್ಮ ನಿರೀಕ್ಷೆಯು ಸತ್ಯವಾಗಬಹುದು. ಹಗುರಾದ ಮನಸ್ಸಿನಿಂದ ಉತ್ಸಾಹವು ಅಧಿಕವಾಗುವುದು. ಇಂದು ನೀವು ನಿಯಮಗಳನ್ನು ಪಾಲಿಸಲು ಕಷ್ಟಪಡಬೇಕಾದಿಕತು. ಆರ್ಥಿಕ ಹಿಂಜರಿಕೆಯು ನಿಮಗೆ ಅರಗಿಸಿಕೊಳ್ಳದ ತುತ್ತಾಗಬಹುದು. ನಿಮ್ಮಿಂದಾಗದ ಕಾರ್ಯವನ್ನು ಯಾರಿಂದಲಾದರೂ ಮಾಡಿಸುವಿರಿ. ವ್ಯಕ್ತಿಗಳ ಮೇಲೆನಂಬಿಕೆಯನ್ನು ನೀವು ಕಳೆದುಕೊಳ್ಳುವಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಸಹೋದರನಿಂದ ನಿಮಗೆ ಸಲಹೆಗಳು ಸಿಗಬಹುದು. ಕಛೇರಿಯಲ್ಲಿ ಇಂದು ಕೆಲಸ ಮಾಡಲು ಆಸಕ್ತಿ ಕಡಿಮೆ ಇರಲಿದೆ. ನೀರಿನಿಂದ ಭಯವು ಹೆಚ್ಚಾಗುವುದು.
ವೃಷಭ ರಾಶಿ : ಇಂದು ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ದುಡುಕಿನ ನಿರ್ಧಾರದಿಂದ ಬೇಸರಪಡಬೇಕಾದೀತು. ಆಕಸ್ಮಿಕ ಪ್ರಯಾಣವು ಬಂದಿದ್ದು, ಇದರಿಂದ ನಿಮಗೆ ಉದ್ಯೋಗದಲ್ಲಿ ತೊಂದರೆಯಾಗಬಹುದು. ಎಲ್ಲಿಗಾದರೂ ಪ್ರಯಾಣ ಮಾಡುವ ಉತ್ಸಾಹವಿರುವುದು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರಿಸರವನ್ನು ಬದಲಿಸುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರವಿಲ್ಲದೇ ಇಂದು ನಿಮ್ಮ ಕೆಲಸವು ಆಗಲಿದೆ. ದೂರುಗಳು ನಿಮ್ಮನ್ನು ಜಾಗರೂಕಮಾಡಬಹುದು. ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ಕಾಲವನ್ನು ಕಳೆಯುವಿರಿ. ನಿಮ್ಮ ಮಾನಸಿಕತೆಯನ್ನು ತಿಳಿಯಲು ಕಷ್ಟಪಡುವರು. ನಿಮ್ಮದಲ್ಲದ್ದನ್ನು ಇಷ್ಟಪಡುವುದು ಬೇಡ. ಪರರ ಭಾವನೆಗೆ ಅನಾದರ ತೋರುವುದು ಬೇಡ. ತೆರೆಯಲ್ಲಿರುವುದನ್ನು ಕಾಣಲು ಪರದೆ ಸರಿಯಬೇಕು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.
ಮಿಥುನ ರಾಶಿ :ಇಂದು ತಂದೆಯು ಯಾವುದೋ ಕಾರ್ಯಕ್ಕೆ ನಿಮ್ಮಿಂದ ಧನವನ್ನು ನಿರೀಕ್ಷಿಸಬಹುದು. ಲೆಕ್ಕ ಶೋಧಕರಿಗೆ ಒತ್ತಡ ಹೆಚ್ಚು. ನಿಮ್ಮ ಪ್ರಯಾಣದಲ್ಲಿ ಕೆಲವು ತೊಂದರೆಗಳು ಆಗಬಹುದು. ನಿಮ್ಮವರ ಅನಾರೋಗ್ಯವನ್ನು ಸರಿಮಾಡಿಕೊಳ್ಳಲು ಓಡಾಟ ಮಾಡಬೇಕಾದೀತು. ಮಿತಿಯರಿತು ನೀವು ವ್ಯವಹರಿಸುವುದು ಮುಖ್ಯ. ಸಾಲ ಮಾಡವ ಸ್ಥಿತಿಯೂ ಬರಬಹುದು. ಶಿಸ್ತಿನ ಕೆಲಸಕ್ಕೆ ನಿಮ್ಮನ್ನು ಪ್ರಶಂಸಿಸಬಹುದು. ಅಧಿಕವೇತನವು ಸಿಗುವ ಕೆಲಸವನ್ನು ಅನ್ವೇಷಿಸುವಿರಿ. ಹಣದ ಹಿಂದೆ ಬಿದ್ದು, ನೀವು ಮಾಡಬಾರದ ಕೆಲಸಕ್ಕೆ ಕೈ ಹಾಕಬೇಕಾದೀತು. ಎಂದೋ ಆಡಿದ ಮಾತಿಗೆ ಇಂದು ಅನುಭವಿಸುವ ಸ್ಥಿತಿ ಬರಬಹುದು. ನಿಮ್ಮವರು ನಿಮ್ಮನ್ನು ನಿರ್ಲಕ್ಷಿಸಬಹುದು. ಯಾವುದೋ ಯೋಚನೆಯಲ್ಲಿ ನೀವು ಮಗ್ನರಾಗಿ ಚಿಂತೆಪಡುವ ಸಾಧ್ಯತೆ ಇದೆ. ಕೊಟ್ಟ ಹಣವನ್ನು ಹೊಂಪಡೆಯುವುದು ಕಷ್ಟ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು. ಕಷ್ಟಕ್ಕೆ ಸ್ಪಂದಿಸುವ ಮನೋಭಾವವಿರಲಿ. ಸಂಗಾತಿಯ ಖರ್ಚನ್ನು ನಿಭಾಯಿಸಬೇಕಾಗುವುದು.
ಕರ್ಕಾಟಕ ರಾಶಿ :ಇಂದು ನೀವು ಉದ್ಯೋಗದ ಕಾರಣಕ್ಕೆ ಬೇರೆ ಕಡೆಗೆ ಹೋಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಸಂಪೂರ್ಣ ವಿಶ್ವಾಸ ಬರಬಹುದು. ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ತಪ್ಪಿಗೆ ಪಶ್ಚಾತ್ತಾಪವು ಸಣ್ಣ ಪ್ರಾಯಶ್ಚಿತ್ತವಾಗುವುದು. ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ. ನಿಮಗೆ ಕಷ್ಟವಾದ ವಿಚಾರಗಳನ್ನು ನೀವು ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮನ್ನು ನೀವು ಅಲ್ಪರೆಂದು ಭಾವಿಸುವಿರಿ. ಮನಸ್ಸು ಭಾರವಾಗಿದ್ದು ಎಲ್ಲದರಿಂದ ದೂರವಿರಲು ಇಚ್ಛಿಸುವಿರಿ. ನಿಮ್ಮ ಮಾತುಗಳಿಗೆ ಅಪಾರ್ಥವು ಬಂದು ಅಪವಾದವೂ ಕೇಳಿ ಬರಬಲಿದೆ. ಅನಿರೀಕ್ಷಿತ ವಾರ್ತೆಯನ್ನು ನೀವು ಕೇಳುವಿರಿ. ನಿಮ್ಮ ಆತಂಕವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಕಾರ್ಯದ ಒತ್ತಡದಿಂದ ಮನಸ್ಸು ಭಾರವಾಗಲಿದೆ. ಸ್ಥಾನವನ್ನು ಬಯಸಿ ನೀವು ಇಂದು ಕೆಲಸವನ್ನು ಮಾಡುವಿರಿ. ಸಮಾರಂಭಗಳು ಇಂದು ನಿಮಗೆ ಸಪ್ಪೆ ಅನ್ನಿಸಬಹುದು. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವಾದೀತು.
ಸಿಂಹ ರಾಶಿ :ಇಂದು ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎಂದು ಎನಿಸುವುದು. ದೊಡ್ಡ ಸ್ಥಾನದಲ್ಲಿದ್ದು ಸಣ್ಣ ಮನಸ್ಸು ಮಾಡುವುದು ಬೇಡ. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸ್ವಲ್ಪ ಹಿನ್ನಡೆ ಎನಿಸಬಹುದು. ಸಂಗಾತಿಯನ್ನು ಮಾತನಾಡಿಸಲು ಹೋಗಿ ಅವರ ಜೊತೆ ಕಲಹವಾಡಿ ಬರುವಿರಿ. ನೀವು ಇಷ್ಟ ಬಂದಕಡೆ ತೆರಳುವಿರಿ. ದೇವಾಲಯದಲ್ಲಿ ಸ್ವಲ್ಪ ಕಾಲ ಕಳೆದು ಬರುವ ಮನಸ್ಸಾಗಲಿದೆ. ವಿದ್ಯಾರ್ಥಿಗಳು ಒಮ್ಮನಸ್ಸಿನಿಂದ ಓದಲು ಕುಳಿತುಕೊಳ್ಳುವುದು ಅವಶ್ಯಕ. ಹಳೆಯ ಸ್ನೇಹಿತರು ಅಕಸ್ಮಾತ್ ಸಿಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಯಾವುದನ್ನೂ ಪೂರ್ಣವಾಗಿ ಒಪ್ಪಲಾರಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು. ಲೆಕ್ಕಪತ್ರದ ವ್ಯವಹಾರದಲ್ಲಿ ಕಲಹವಾಗವುದು.
ಕನ್ಯಾ ರಾಶಿ :ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಗ್ರಾಹಕರ ಬೇಡಿಕೆಯನ್ನು ಈಡೇರಿಸುವಿರಿ. ನಿಮ್ಮ ಪ್ರಯತ್ನಕ್ಕೆ ಪ್ರತಿಫಲವು ಸಿಗಬೇಕೆಂದು ನೀವು ಅಂದುಕೊಳ್ಳುವುದು ಸರಿಯಾಗದು. ನಿಮ್ಮವರಲ್ಲದವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳುವುದು ಬೇಡ. ಯಾರಿಂದಲಾದರೂ ನಿಮಗೆ ಜಡಕು ಸಮಸ್ಯೆಗೆ ಪರಿಹಾರ ಲಭ್ಯವಾಗುವುದು. ನಿಮ್ಮ ಇಂದಿನ ಮಾತಿನಿಂದ ಕುಟುಂಬದಲ್ಲಿ ಉಂಟಾಗುವ ಕಲಹವನ್ನು ತಪ್ಪಿಸಬಹುದು. ಆಪ್ತರನ್ನು ಕಳೆದುಕೊಂಡ ಸುದ್ದಿಯು ನಿಮಗೆ ದುಃಖವನ್ನು ತರಬಹುದು. ಗೌರವವನ್ನು ಪಡೆಯುವುದಕ್ಕಿಂತ ಉಳಿಸಿಕೊಳ್ಳುವುದು ಕಷ್ಟ. ಹಳೆಯ ವಿದ್ಯಮಾನಗಳನ್ನು ನೀವು ಮರೆತು ಮುನ್ನಡೆಯುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ. ನಿಮ್ಮ ಉನ್ನತ ಶಿಕ್ಷಣದ ಆಸೆಯು ಭಗ್ನವಾಗಬಹುದು.
ತುಲಾ ರಾಶಿ :ಇಂದು ಕುರುಡ ಕತ್ತವನ್ನು ಹೊಸೆದಂತೆ ಆಗಬಹುದು. ಬಂಧುಗಳ ಮನೆಗೆ ಹೋಗಿ ಬರಲಿದ್ದೀರಿ. ಯಥೇಚ್ಛ ಸುತ್ತಾಟವು ನಿಮಗೆ ಆಯಾಸವನ್ನು ತಂದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟ. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು ಅಲ್ಪ ಮೌಲ್ಯಕ್ಕೆ ಮಾರಾಟ ಮಾಡುವಿರಿ. ಇಂದು ಗುಂಪಿನಲ್ಲಿ ಕೆಲಸ ಮಾಡುವುದು ನಿಮಗೆ ಕಿರಿಕಿರಿಯಾದೀತು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸೂಚನೆ ಸಿಗುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ತಲೆಹಾಕುವುದನ್ನು ನಿಲ್ಲಿಸಿ. ನಿಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನೂತನವಾಗಿ ಖರೀದಿಸಿದ ಯಂತ್ರವು ಕೈ ಕೊಡಬಹುದು. ನಿಮ್ಮ ಮನಸ್ಸನ್ನು ಬದಲಿಸಲು ಬಹಳ ಪ್ರಯತ್ನ ನಡೆಯುವುದು. ಹಿಂದಿನ ಘಟನೆಯೇ ಪುನರಾವರ್ತನೆ ಆಗುವುದು. ನಿಮ್ಮನ್ನು ದ್ವೇಷಿಸುವ ಜನರನ್ನು ನೀವು ನಿರ್ಲಕ್ಷಿಸಿ ಮುನ್ನಡೆದರೆ ಉತ್ತಮ. ನಿಮಗೆ ಏನಾದರೂ ಉಪಯೋಗವಿದ್ದರೆ ಮಾತ್ರ ಇಂದು ಬರುವ ಕಾರ್ಯವನ್ನು ಮಾಡಿ.
ವೃಶ್ಚಿಕ ರಾಶಿ :ಇಂದು ನೀವು ಮುಂದೆ ಮಾಡಬೇಕಾದ ಕೆಲವು ಕಾರ್ಯಗಳ ನಿರ್ಧಾರವನ್ನು ಮಾಡಿ ಮುಂದುವರಿಯುವಿರಿ. ಬೇಡದ ಸಲಹೆಗಳು ನಿಮ್ಮ ಮನಸ್ಸನ್ನು ಹಾಳುಮಾಡುವುದು. ಇಂದು ನೀವು ಅಧಿಕವಾಗಿ ಮಾತನಾಡದೇ ಸುಮ್ಮನಿರುವುದು ಉತ್ತಮ. ಕಾಲಹರಣಕ್ಕೆ ನಿಮಗೆ ಇನ್ನೊಬ್ಬರ ವಿಚಾರವನ್ನು ಆಡಿಕೊಳ್ಳುವಿರಿ. ಕಛೇರಿಯಲ್ಲಿ ನೀವು ಪಕ್ಷಪಾತ ಮಾಡುವಂತೆ ಕೋರುವುದು. ಸಂಗಾತಿಯ ಮನಸ್ಸನ್ನು ನೋಯಿಸಿ ಅದನ್ನು ಸರಿಪಡಿಸುವಿರಿ. ಹಳೆಯ ಸ್ನೇಹಿತರ ಜೊತೆ ದೂರಪ್ರಯಾಣವನ್ನು ಮಾಡುವಿರಿ. ತಂದೆಯನ್ನು ನೋಡುವ ಹಂಬಲ ಅಧಿಕವಾಗುದು. ನಿಮ್ಮ ಲೆಕ್ಕಾಚಾರವು ಬುಡಮೇಲಾದೀತು. ಭೂವ್ಯವಹಾರವು ಸುಖಾಂತ್ಯವಾಗಲಿದೆ. ನಿಮ್ಮ ಒಳ್ಳೆಯ ಸ್ವಭಾವದ ಬಗ್ಗೆ ಮಾತನಾಡುವರು. ಸಹೋದ್ಯೋಗಿಗಳ ಮಾತನ್ನು ಸಹಿಸಿಕೊಳ್ಳಲು ಕಷ್ಟವಾಗದು. ವೇಗದಲ್ಲಿ ಸಿಗುವ ಯಶಸ್ಸೇ ನಿಮಗೆ ತೊಂದರೆ ಕೊಡುವುದು. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ.
ಧನು ರಾಶಿ :ಯಾವುದಾದರೂ ಹಣಕಾಸಿನ ಒಪ್ಪಂದವನ್ನು ಮಾಡುವಾಗ ಎಚ್ಚರಿಕೆ ಇರಲಿ. ಅಮೂಲ್ಯ ವಸ್ತುಗಳು ಹಾಳಾದೀತು. ನಿಮ್ಮ ಅಪೂರ್ಣ ಕಾರ್ಯಗಳಿಗೆ ಅಂತ್ಯವನ್ನು ಕಾಣಿಸುವಿರಿ. ಇಂದು ನಿಮಗೆ ಸ್ಥಿರವಾದ ಬುದ್ಧಿಯನ್ನು ಇಟ್ಟುಕೊಳ್ಳಲು ಕಷ್ಟವಾದೀತು. ಏನೇನೋ ಯೋಚನೆಗಳು ಬರಬಹುದು. ಮನೆಯಿಂದ ದೂರದಲ್ಲಿ ನೀವು ವಾಸಮಾಡುವ ಸಂದರ್ಭವು ಬರಬಹುದು. ಇಂದಿನ ಕೆಲಸವನ್ನು ಸರಿಯಾಗಿ ಮಾಡಲು ಕಷ್ಟಪಡುವಿರಿ. ತಾಯಿಯ ಮಾತನ್ನೂ ನೀವು ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ಸಾಹಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ಅದೃಷ್ಟದಿಂದ ನಿಮ್ಮ ಕಾರ್ಯ ಸಾಧ್ಯ. ದೇಹಕ್ಕೆ ಪೆಟ್ಟುಮಾಡಿಕೊಳ್ಳಲು ನೀವು ಹೋಗುವುದು ಬೇಡ. ನಿಮಗೆ ಸಿಗಬೇಕಾದ ಹಣವು ವಿಳಂಬವಾಗಿದ್ದಕ್ಕೆ ಬೇಸರಗೊಳ್ಳಬಹುದು. ನಿಮ್ಮ ನೈಪುಣ್ಯತೆಯನ್ನು ಕೆಲಸದಲ್ಲಿ ತೋರಿಸಿ. ಉತ್ತಮ ಕಾರ್ಯಕ್ಕೆ ಶ್ಲಾಘನೆ ಸಿಗಲಿದೆ. ವಾಗ್ವಾದಕ್ಕೆ ಹೋಗಿ ಮನಸ್ಸನ್ನು ಹಾಳುಮಾಡಿಕೊಳ್ಳುವುದು ಬೇಡ. ಇನ್ನೊಬ್ಬರಿಗಾಗಿ ಕಾಯುವುದು ನಿಮಗೆ ಕಷ್ಟವಸದೀತು.
ಮಕರ ರಾಶಿ :ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗುತ್ತಾರೆ ಎನ್ನಲಾಗದು. ಕಾನೂನಾತ್ಮಕ ವಿಚಾರದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ ಇದೆ. ನಿಮಗೆ ಬೇಕಾದುದನ್ನೇ ಮಾಡಿಕೊಳ್ಳುವ ಛಾತಿಯು ಇಂದು ಇರಲಿದೆ. ನಿಮ್ಮ ಆಸ್ತಿಯ ಬಗ್ಗೆ ನಿಮಗೇ ಸಂಪೂರ್ಣವಾದ ಮಾಹಿತಿ ಕೊರತೆಯಾಗುವುದು. ಅಧಿಕಾರದಿಂದ ನಿಮ್ಮ ಆಸೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಮನಸ್ಸಿನಲ್ಲಿ ಇರುವುದನ್ನು ಯಾರ ಜೊತೆಗಾದರೂ ಹೇಳಿಕೊಳ್ಳುವಿರಿ. ನಿಮ್ಮ ನೋವಿಗೆ ಸ್ಪಂದಿಸಲು ಯಾರಾದರೂ ಸಿಕ್ಕಾರು. ನಿಮ್ಮ ಒಳ್ಳೆಯ ಚಿಂತನೆಗೆ ಪ್ರಶಂಸೆ ಸಿಗಲಿದೆ. ಎಷ್ಟೋ ವಿಚಾರಗಳನ್ನು ನೀವು ನಿಮ್ಮಲ್ಲಿಯೇ ಇಟ್ಟಕೊಂಡು ಅನುಭವಿಸುವಿರಿ. ನಿಮಗೆ ಇಷ್ಟವಾದುದನ್ನು ನೀವು ಪಡೆಯುವಿರಿ. ಸ್ವಾಭಿಮಾನವು ನಿಮ್ಮನ್ನು ಕಟ್ಟಿಹಾಕಬಹುದು. ಇಂದಿನ ವಾಯು ವಿಹಾರವು ನಿಮಗೆ ಹಿತವೆನಿಸುವುದು. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಅನ್ನಿಸಿದ್ದನ್ನು ಹೇಳಿ ಕೆಲವರಿಂದ ದೂರವಾಗುವಿರಿ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ. ಹೊಸಬರ ಪರಿಚಯವಾಗಲಿದೆ.
ಕುಂಭ ರಾಶಿ :ಇಂದು ನೀವು ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ತೊಂದರೆ ಮಾಡಿಕೊಳ್ಳುವಿರಿ. ವ್ಯಾಪಾರದ ಸಂಚು ನಿಮಗೆ ಗೊತ್ತಾಗದೇ ಹೋಗಬಹುದು. ಇಂದಿನ ನಿಮ್ಮ ಆರಂಭವು ಬಹಳ ಸಂತೋಷದಿಂದ ಇರಲಿದೆ. ಸ್ವಾಭಿಮಾನವನ್ನು ಬಿಟ್ಟು ಯಾವುದನ್ನೂ ಮಾಡಲಾರಿರಿ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಇಂದಿನ ತುರ್ತು ಕಾರ್ಯಗಳ ನಡುವೆ ನಿಮಗೆ ಸಮಯ ಹೊಂದಾಣಿಕೆ ಕಷ್ಟವಾಗಬಹುದು. ನಿಮ್ಮ ಅಮೂಲ್ಯ ವಸ್ತುಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಔಷಧವಾಗಲಿದೆ. ಸಂಗಾತಿಯನ್ನು ನೀವು ಕೆಲವು ವಿಚಾರಗಳಿಗೆ ಬೇಸರಿಸುವಿರಿ. ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಇರುವುದು. ನೀವು ಯತ್ನಿಸಿದ ಕೆಲಸವು ಪೂರ್ಣಫಲಪ್ರದವಾಗದು. ಸಾಗಿದ ದಾರಿಯನ್ನು ನೀವು ನೆನಪಿಸಿಕೊಳ್ಳುವಿರಿ. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ.
ಮೀನ ರಾಶಿ :ಇಂದು ನೀವು ಯಾವುದೇ ಉದ್ವೇಗಕ್ಕೆ ಒಳಗಾಗದೇ ಶಾಂತವಾಗಿ ಇರಬೇಕು ಎನ್ನುವುದನ್ನು ನಿರ್ಧರಿಸುವಿರಿ. ನಿಮ್ಮ ಉತ್ಸಾಹಕ್ಕೆ ದೃಷ್ಟಿ ಬೀಳಬಹುದು. ನೀವು ಇಟ್ಟ ನಂಬಿಕೆಗೆ ಮೋಸವಾಗುವ ಸಾಧ್ಯತೆ ಇದೆ. ಹಣಕಾಸಿನ ಮೌಲ್ಯವನ್ನು ನೀವು ಇಂದು ತಿಳಿದುಕೊಳ್ಳುವಿರಿ. ಇಂದು ನಿಮ್ಮ ಮನಸ್ಸು ಬಹಳ ಡೋಲಾಯಮಾನವಾಗಿ ಇರಲಿದೆ. ನಿಮಗೆ ಆಗದ ವಿಚಾರವನ್ನು ಮತ್ತೆ ಮತ್ತೆ ಸಹೋದ್ಯೋಗಿಗಳು ನೆನಪಿಸುವರು. ನಿಮಗೆ ನೀವೇ ಹಾಕಿಕೊಂಡ ಮಾರ್ಗವು ಪ್ರಶಸ್ತವೆನಿಸಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ಮನೆಯ ಹೆಚ್ಚಿನ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ನಿಮ್ಮ ಖರ್ಚಿನಿಂದ ಸ್ನೇಹಿತರಿಗೆ ಭೋಜನ ಹಾಕಿಸುವಿರಿ. ಸ್ನೇಹಿತರ ಸಂತೋಷದಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ.