KSRTC ಐರಾವತ ಬಸ್ಗೆ ತಗುಲಿದ್ದ ಬೆಂಕಿಯನ್ನು ಸ್ಥಳೀಯರು ಸೇರಿ ಹತೋಟಿಗೆ ತಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಐರಾವತ ಬಸ್ಗೆ ಬೆಂಕಿ ತಗುಲಿದ ಘಟನೆ ದಕ್ಷಿಣ ಕನ್ನಡದ ಹಳೆಗೇಟು ಸಮೀಪ ಗುರುವಾರ ಬೆಳಗ್ಗೆ ನಡೆಯಿತು. ವಿಷಯ ತಿಳಿದ ತಕ್ಷಣ ಸ್ಥಳೀಯ ಯುವಕರು ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಬಸ್ನ ಹಿಂಬದಿ ಎಸಿಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಹಳೆಗೇಟು ಬಳಿ ಬಸ್ ನಿಲ್ಲಿಸಿದ್ದಾನೆ. ಕೂಡಲೇ ಪ್ರಯಾಣಿಕರು ಬಸ್ನಿಂದ ಇಳಿದಿದ್ದು, ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರು ಎರಚಿ ಬೆಂಕಿಯನ್ನು ನಂದಿಸಿ ಹತೋಟಿಗೆ ತಂದರು. ಬಸ್ ಹಿಂಬದಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ