- ಹೆತ್ತ ಮಗುವನ್ನೇ ನಾಲೆಗೆ ಎಸೆದ ತಾಯಿ
- ಪತಿ -ಪತ್ನಿಯ ಜಗಳಕ್ಕೆ ಮಗು ಬಲಿ
- ನಾಲೆಯ ಬಳಿ ಮಗುವಿನ ಮೃತದೇಹ ಪತ್ತೆ
ದಾಂಡೇಲಿ: ಪತಿ – ಪತ್ನಿ ಜಗಳದ ಕೋಪದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ನಾಲೆಗೆ ಎಸೆದ ಅಮಾನವೀಯ ಘಟನೆ ಹಾಲಮಡ್ಡಿಯ ಸಮೀಪ ನಡೆದಿದೆ.
ನಾಲೆಗೆ ಎಸೆದ ಮಗುವಿನ ಹೆಸರು ವಿನೋದ್ (6) ಎಂದು ತಿಳಿದು ಬಂದಿದೆ. ಗಾಂಧಿ ನಗರದಲ್ಲಿ ವಾಸವಿದ್ದ ಇವರು ಕಳೆದ ಎರಡು ತಿಂಗಳಿಂದ ಹಾಲಮಡ್ಡಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರವಿಕುಮಾರ್ ಶೆಳ್ಳೆ ಸಾವಿತ್ರಿ ದಂಪತಿ ಮಗು ಇದಾಗಿದ್ದು, ಪತಿ ಹಾಗೂ ಪತ್ನಿ ಪ್ರತಿದಿನ ಜಗಳವಾಡುತ್ತಿದ್ದರು. ತಾಯಿ ಕೋಪದ ಭರದಲ್ಲಿ ತನ್ನ ಕೈಯಾರೆ ಮಗುವನ್ನು ನಾಲೆಗೆ ಎಸೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಗುವನ್ನು ನಾಲೆಗೆ ಎಸೆಯಲು ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಇವರು ವಾಸವಿರುವ ಅಣತಿ ದೂರದಲ್ಲಿ ಕಾರ್ಖಾನೆ ತಾಜ್ಯ ಹರಿದು ಹೋಗುವ ದೊಡ್ಡ ಗಟಾರ ಇದ್ದು ಅಲ್ಲಿ ಮಗುವನ್ನು ಎಸದಿದ್ದಾಳೆ ಎನ್ನಲಾಗಿದೆ. ತೀವ್ರ ಶೋಧದ ಬಳಿಕ ನಾಲೆಯ ಬಳಿ ಮಗುವಿನ ಮೃತದೇಹ ಪತ್ತೆಯಾಗಿದೆ.