ದರ್ಶನ್ ಬೆನ್ನು ನೋವು, ಕಾಲು ಸೆಳೆತಕ್ಕೆ ಅಸಲಿ ಕಾರಣ ಇದೇ ನೋಡಿ. ದಿಢೀರ್ ತೂಕ ಇಳಿದಿದ್ದೇ ನಟ ದರ್ಶನ್ಗೆ ಮುಳುವಾಯ್ತಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಕೊಲೇ ಕೇಸಲ್ಲಿ ಜೈಲಿಗೆ ಹೋದ ನಂತರ ನಟ ದರ್ಶನ್ ತೂಕ ಇಳಿಕೆಯಾಗಿದೆ. ಜೈಲಿನಲ್ಲಿ ಊಟ ಸೆಟ್ ಆಗ್ತಿಲ್ಲ, ಸಣ್ಣ ಆಗಿದ್ದೇನೆ ಎಂದಿದ್ದರು ದರ್ಶನ್.
10 ಕೆಜಿ ತೂಕ ಇಳಿದಿದೆ ಅಂತ ಕೋರ್ಟ್ಗೆ ದರ್ಶನ್ ಪರ ವಕೀಲರು ತಿಳಿಸಿದ್ದರು. ದರ್ಶನ್ ದೇಹದ ತೂಕ ಇಳಿದಿದ್ದರಿಂದಲೇ ಬೆನ್ನು ನೋವು ಹೆಚ್ಚಾಗಿದೆ. ದರ್ಶನ್ ದೇಹದಲ್ಲಿ ಮಸಲ್ ಕಮ್ಮಿಯಾಗಿದ್ದೇ ನೋವು ಹೆಚ್ಚಾಗಲು ಕಾರಣ ಎಂದು ತಿಳಿದುಬಂದಿದೆ.
ಜೈಲಿಗೆ ಹೋಗೋಕು ಮೊದಲು 100 ಕೆಜಿ ತೂಕವಿದ್ದರು, ಆದ್ರೆ ಜೈಲಿಗೆ ಹೋದ ಕೆಲವೇ ದಿನಗಳಲ್ಲಿ ನಟ ದರ್ಶನ್ ತೂಕ ಇಳಿಕೆಯಾಗಿದೆ. ಹೊರಗಡೆ ಇದ್ದಾಗ ಸಿನಿಮಾಗಾಗಿ ಜಿಮ್, ಸರಿಯಾದ ಊಟದ ಮೂಲಕ ಮಸಲ್ಸ್ ಬಿಲ್ಡ್ ಮಾಡಿದ್ದರು ದರ್ಶನ್. ಆದ್ರೆ ಕೊಲೆ ಆರೋಪದ ಮೇಲೆ ಜೈಲು ಸೇರಿದ ಮೇಲೆ ದರ್ಶನ್ ತೂಕ ಇಳಿಕೆಯಾಗಿದೆ.
ಇದನ್ನೂ ಓದಿ: ಶತಕದಂಚಿನಲ್ಲಿ ಎಡವಿದ ಗಿಲ್: ಟೀಮ್ ಇಂಡಿಯಾ ಆಲೌಟ್!
ಇದ್ದಕ್ಕಿದ್ದಂತೆ ದೇಹದ ತೂಕ ಇಳಿಕೆ ಆಗುತ್ತಿದ್ದಂತೆ ಬೆನ್ನು ನೋವು ಹೆಚ್ಚಾಗಿದೆ. ಈ ಹಿಂದೆಯೂ ಬೆನ್ನು ನೋವಿನಿಂದ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು ದರ್ಶನ್, ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು ದರ್ಶನ್. ಸದ್ಯ ಮತ್ತೆ ಮಸಲ್ಸ್ ಕಡಿಮೆ ಆಗುತ್ತಿದ್ದಂತೆ ಬೆನ್ನು ನೋವು ಹೆಚ್ಚಾಗಿದೆ.