ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ ಇಂದೇ ನಿರ್ಣಾಯಕ ದಿನ. ಇಂದು ನಿರ್ಧಾರವಾಗಲಿದೆ ದರ್ಶನ್ ಬೇಲ್ ಭವಿಷ್ಯ. ಇಂದು ದರ್ಶನ್ ರೆಗ್ಯೂಲರ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೈಕೋರ್ಟ್ ನಲ್ಲಿ ನಡೆಯಲಿರೋ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ರೆಗ್ಯೂಲರ್ ಬೇಲ್ ಗಾಗಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ದರ್ಶನ್ ಪರ ಸಿವಿ ನಾಗೇಶ್ ವಾದ ಪೂರ್ಣಗೊಳಿಸಿದ್ದಾರೆ. ಇಂದು SPP ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಲಿದ್ದು, ರೆಗ್ಯೂಲರ್ ಜಾಮೀನಿಗೆ SPP ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸಿವಿ ನಾಗೇಶ್ ವಾದಕ್ಕೆ SPP ಕೌಂಟರ್ ಕೊಡಲಿದ್ದಾರೆ. SPP ವಾದದ ಮೇಲೆ ದರ್ಶನ್ ರೆಗ್ಯೂಲರ್ ಭವಿಷ್ಯ ನಿಂತಿದೆ. ನಟ ದರ್ಶನ್ ಗೆ ರೆಗ್ಯೂಲರ್ ಜಾಮೀನು ಸಿಕ್ಕಿದ್ರೆ ಬಿಗ್ ರಿಲೀಫ್ ಸಿಕ್ಕಿದಂತಾಗುತ್ತದೆ.