ಬಳ್ಳಾರಿ ಜೈಲುಪಾಲಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡಿತಾಯಿದೇ. ಇದೇ ವೇಳೆ ದರ್ಶನ್ ಪರವಾಗಿ ಸಿ.ವಿ. ನಾಗೇಶ್ ವಾದ ಮಂಡನೆ ಮಾಡುತ್ತಿದ್ದಾರೆ. ತನಿಖಾಧಿಕಾರಿಗಳು ಸಾಕ್ಷಿಗಳನ್ನ ಸೃಷ್ಟಿಸಿದ್ದಾರೆ. ಇದೊಂದು ವರ್ಸ್ಟ್ ಚಾರ್ಜ್ ಶೀಟ್ ಅಂತಾ ವಾದಿಸಿದ್ದ ಸಿವಿ ನಾಗೇಶ್ ಪೊಲೀಸರ ವಿರುದ್ಧವೇ ಕೋರ್ಟ್ ನಲ್ಲಿ ಸಿ.ವಿ. ನಾಗೇಶ್ ಆರೋಪ ಮಾಡಿದ್ದಾರೆ.
ಇನ್ನೂ ಡಿಜಿಟಲ್ ಸಾಕ್ಷ್ಯಗಳ ಬಗ್ಗೆ ಸಾಕಷ್ಟು ಅನುಮಾನಗಳನ್ನ ವ್ಯಕ್ತಪಡಿಸಿರುವ ಸಿ.ವಿ ನಾಗೇಶ್, ಶೆಡ್ ನಲ್ಲಿದ್ದ ಮರದ ಕೊಂಬೆಯಲ್ಲಿ ರಕ್ತದ ಕಲೆ ಇದೆ ಎಂದಿದ್ದಾರೆ, ‘ಆದರೆ ಆ ಮರದ ಕೊಂಬೆಯಲ್ಲಿರೋದು ರಕ್ತದ ಕಲೆಗಳೇ ಅಲ್ಲ’ ಎಂದು ವಾದ ಮಂಡಿಸಿದ್ದಾರೆ. ‘FSL ವರದಿಯಲ್ಲಿ ವಿಡಿಯೋಗಳೇ ಇಲ್ಲ ಎಂದಿದ್ದಾರೆ. ಮುಂದುವರೆದು ಪಂಚನಾಮೆಯಲ್ಲಿ ರಕ್ತದ ಕಲೆಗಳು ಇದೆ ಎಂದಿದ್ದಾರೆ, ಆದರೆ FSL ವರದಿಯಲ್ಲಿ ರಕ್ತದ ಕಲೆಗಳು ಇಲ್ಲ ಎಂದಿದೆ. ‘ಇದು ಪೊಲೀಸರ ತನಿಖೆಗೆ ಹಿಡಿದ ಕೈಗನ್ನಡಿ’ ಎಂದು ಪೊಲೀಸರ ತನಿಖೆ ಬಗ್ಗೆಯೇ ಸಿವಿ ನಾಗೇಶ್ ಪ್ರಶ್ನೆ ಮಾಡಿದ್ದಾರೆ.