ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ಬೇಲ್ ಪಡೆದು ಹೊರ ಬರುವ ದಿನಕ್ಕಾಗಿ ಕಾಯ್ತಿದ್ದಾರೆ. ಕಳೆದ 1 ವಾರದಿಂದ ಸತತವಾಗಿ ವಾದ ವಿವಾದಗಳು ಕೋರ್ಟ್ ಅಂಗಳದಲ್ಲಿ ನಡೆಯುತ್ತಿದ್ದು, ಇಂದು ದರ್ಶನ್ ಪರ ವಕೀಲ ಸಿ.ವಿ ನಾಗೇಶ್ SPP ಪ್ರಸನ್ನ ಕುಮಾರ್ ಅವರಿಗೆ ಟಕ್ಕರ್ ಕೊಡುತ್ತಿದ್ದಾರೆ. ನಿನ್ನೆ ವಾದ ಮಂಡಿಸಿದ್ದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ದರ್ಶನ್ ಪರ ವಕೀಲರ ಅನುಮಾನಗಳಿಗೆ ಸ್ಟ್ರಾಂಗ್ ಆಗಿಯೇ ಉತ್ತರ ನೀಡಿದ್ದರು. ಇಂದು ವಕೀಲ ಸಿವಿ ನಾಗೇಶ್ ಅವರು ಮತ್ತೊಮ್ಮೆ ಪೋಲಿಸರ ತನಿಖೆಯ ವರದಿಗಳನ್ನ ಡಮ್ಮಿ ಎಂದು ಬಣ್ಣಿಸಿದ್ದಾರೆ. ನವರಾತ್ರಿಯ 8ನೇ ದಿನವಾದ ಇಂದಾದ್ರೂ ದರ್ಶನ್ ಅವರಿಗೆ ಸಿವಿ ನಾಗೇಶ್ ಬೇಲ್ ಕೊಡಿಸ್ತಾರ ಎಂಬುದು ಎಲ್ಲರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪೊಲೀಸರು ದರ್ಶನ್ ಎಡಿಟೆಡ್ ಫೋಟೋ ಬಳಸಿದ್ದಾರೆಂದು ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ಸಿವಿ ನಾಗೇಶ್ ಆರೋಪವನ್ನ ಮಾಡಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ದರ್ಶನ್ ಇದ್ದರು ಎಂದು ತೋರಿಸಲು ಫೋಟೋವನ್ನ ಪೋಲಿಸರು ಎಡಿಟ್ ಮಾಡದ್ದಾರೆ. ಪೊಲೀಸ್ ಸ್ಟೇಷನ್ ನಲ್ಲಿ ದರ್ಶನ್ ಫೋಟೋ ತೆಗೆಯಲಾಗಿದೆ, ಈ ಫೋಟೋವನ್ನ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಅಂಟಿಸಿದ್ದಾರೆ, ಇದರಲ್ಲಿ ಎಲ್ಲಾ ಆರೋಪಿಗಳ ಫೋಟೋವನ್ನ ತೋರಿಸಿದ್ದಾರೆ ಆದರೆ, ದರ್ಶನ ಫೋಟೋವನ್ನ ಪೊಲೀಸರು ತಮಗೆ ಬೇಕಾದಂತೆ ಸಿದ್ಧಪಡಿಸಿದ್ದಾರೆ. ಈ ಫೋಟೋನೇ ಫೇಕ್ ಎಂದು ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ.
ಅಲ್ಲದೇ ಡಯಾಗ್ರಾಂ ಬಳಸಿ ಇಡೀ ಚಾರ್ಜ್ ಶೀಟ್ ಸಿದ್ದಪಡಿಸಿದ್ದಾರೆ. ಪಟ್ಟಣಗೆರೆ ಶೆಡ್ ಅತೀ ಹೆಚ್ಚು ಜನಸಂದಣಿ ಇರುವ ಏರಿಯಾ, ಅಲ್ಲಿ 2 ಕಿಮೀ ವರೆಗೆ ಮಾತ್ರ ರೆಡಿಯೇಷನ್ ಸಿಗುತ್ತದೆ. ಆದರೆ ಪೊಲೀಸರು 5 ಕಿಮೀ ರೆಡಿಯೇಷನ್ ಎಂದಿದ್ದಾರೆ. ಇದನ್ನ ಟೆಕ್ನಿಕಲ್ ಎವಿಡೆನ್ಸ್ ಅಂತ ಹೇಗೆ ನಂಬೋದು.? ಇದನ್ನ ಪೊಲೀಸರೇ ಸಲ್ಲಿಸಿದ್ದಾರೆಂದು ಈ ರಿಪೋರ್ಟ್ ಹೇಳ್ತಾಯಿದೆ. ಎಂದು SPP ಟೆಕ್ನಿಕಲ್ ವಾದಕ್ಕೆ ವಕೀಲ ಸಿ.ವಿ ನಾಗೇಶ್ ತಿರುಗೇಟು ನೀಡಿದ್ದಾರೆ.