ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ನೇರವಾಗಿ ಸಿಟಿ ಸಿವಿಲ್ ಕೋರ್ಟ್ಗೆ ಹೋಗಿದ್ದು ಜಾಮೀನು ಪ್ರಕ್ರಿಯೆ ಮುಗಿಸಿದ್ದಾರೆ. ಜಾಮೀನು ಸಿಕ್ಕ ಬಳಿಕ ಆರೋಪಿ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಕೋರ್ಟ್ ಗೆ ಹಾಜರಾಗಿ ಕೆಲ ಕಂಡಿಷನ್ ಗಳಿಗೆ ಸಹಿ ಮಾಡಬೇಕು. ಹೀಗಾಗಿ ಆಸ್ಪತ್ರೆಯಿಂದ ನೇರವಾಗಿ ಕೋರ್ಟ್ ಗೆ ಹಾಜರಾಗಿದ್ದರು ನಟ ದರ್ಶನ್. ಸಿಟಿ ಸಿವಿಲ್ ಕೋರ್ಟ್ ಹಾಲ್ 57ಗೆ ಆಗಮಿಸಿದ ನಟ ದರ್ಶನ್ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. 1 ಲಕ್ಷ ಬಾಂಡ್ ಹಾಗೂ ಇಬ್ಬರು ಶೂರಿಟಿ ನೀಡಿದ್ದಾರೆ. ಬಾಂಡ್ಗೆ ನಟ ದರ್ಶನ್ ಕೂಡ ಸಹಿ ಹಾಕಿದ್ದಾರೆ.