ತೀವ್ರವಾದ ಬೆನ್ನು ನೋವಿನ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಅವರ ಮೆಡಿಕಲ್ ಟೆಸ್ಟ್ ರಿಪೋರ್ಟ್ ವೈದ್ಯರ ಕೈ ಸೇರಿದೆ. ದರ್ಶನ್ ಗೆ ಬರೋಬ್ಬರಿ 7 ಟೆಸ್ಟ್ ಗಳನ್ನ ಮಾಡಿದ್ದಾರೆ. ಆ 7 ಟೆಸ್ಟ್ಗಳ ರಿಪೋರ್ಟ್ ಡಾಕ್ಟರ್ಸ್ ಕೈ ಸೇರಿದ ಕೂಡಲೆ ಮೀಟಿಂಗ್ ಮಾಡಿ ದರ್ಶನ್ ಗೆ ಆಪರೇಷನ್ ಮಾಡಬೇಕಾ.? ಬೇಡ್ವಾ..? ಎಂಬುದರ ಬಗ್ಗೆ ಚರ್ಚಿಸಿದ್ದಾರೆ.
ದರ್ಶನ್ ಗೆ ಸ್ಕ್ಯಾನಿಂಗ್ ಇಸಿಜಿ ಹಾಗೂ ಟ್ರೆಡ್ ಮಿಲ್ ಟೆಸ್ಟ್, ಲಿವರ್ ಫಂಕ್ಷನ್ ಟೆಸ್ಟ್, ರೀನಲ್ ಫಂಕ್ಷನ್ ಟೆಸ್ಟ್, ಯೂರಿನ್ ಟೆಸ್ಟ್, ಬ್ಲಡ್ ಪ್ರೆಷರ್, ಶುಗರ್ ಟೆಸ್ಟ್ ಗಳನ್ನ ಮಾಡಿದ್ದಾರೆ. ಇದೆಲ್ಲದರ ರಿಪೋರ್ಟ್ ಆಧರಿಸಿ, ವೈದ್ಯರು ತೀರ್ಮಾನ ತಿಳಿಸಿದ ಬಳಿಕ ದರ್ಶನ್ ಪರ ವಕೀಲರು ಕೋರ್ಟ್ಗೆ ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಸಲ್ಲಿಸಲಿದ್ದಾರೆ.