ನಟ ದರ್ಶನ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. 131 ದಿನಗಳ ಬಳಿಕ ಜೈಲಿನಿಂದ ಹೊರಬಂದಿದ್ದಾರೆ ನಟ ದರ್ಶನ್. ಜೈಲಿನ ಹೊರಗಡೆ ಗೇಟ್ ಆಚೆ ದರ್ಶನ್ ಕಾಲಿಡುತ್ತಿದ್ದಂತೆ ದರ್ಶನ್ ಅವರ ಅಭಿಮಾನಿ ನಟ ದರ್ಶನ್ಗೆ ದೃಷ್ಟಿ ತೆಗೆದಿದ್ದಾರೆ. ತೆಂಗಿನಕಾಯಿ ನಿವಾರಿಸಿ ದೃಷ್ಟಿ ತೆಗೆದಿದ್ದಾರೆ. ಇದನ್ನು ನೋಡಿದ ಅಲ್ಲಿ ನೆರೆದಿದ್ದ ಅಭಿಮಾನಿಗಳು ಡಿ ಬಾಸ್ ಅಂತ ಜೈಕಾರ ಹಾಕಿದ್ದಾರೆ. ಇನ್ನೂ ದರ್ಶನ್ ದೃಷ್ಟಿ ತೆಗೆಸಿಕೊಂಡ ಬಳಿಕ ಪತ್ನಿ ವಿಜಯ ಲಕ್ಷ್ಮೀ ಕುಳಿತಿದ್ದ ಕಾರಿನಲ್ಲಿ ಹೋಗಿ ಕೂತರು. ದರ್ಶನ್ ಕಾರಿನಲ್ಲಿ ಕೂರುತ್ತಿದ್ದಂತೆ ಅಲ್ಲಿಂದ ಕಾರು ಹೊರಟಿದೆ.