- ಚಿಕ್ಕೋಡಿಯಲ್ಲಿ ಪಾಕ್ ಪರ ಘೋಷಣೆ
- ದೇಶದ್ರೋಹದ ಹೇಳಿಕೆ ಕೊಟ್ಟವರನ್ನು ಎನ್ಕೌಂಟರ್ ಮಾಡಬೇಕು
ನಿನ್ನೆ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ, ಅಲಿಯ ಕಾಂಗ್ರೆಸ್ ಕ್ಯಾಂಡಿಡೇಟ್ ಗೆದ್ದ ತಕ್ಷಣ, ಅಲ್ಲಿ ಕೆಲವು ಮುಸ್ಲಿಂ ಕಿಡಿಗೇಡಿಗಳು, ಪಾಕಿxx ಜಿಂದಾಬಾದ್ ಎಂಬ ಘೋಷಣೆ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಟ್ಟ ಶಬ್ದಗಳಿಂದ ಬೈದಿದ್ದು, ಇವತ್ತು ವಿಡಿಯೋ ಮೂಲಕ ವೈರಲ್ ಆಗಿದೆ. ಶ್ರೀರಾಮ ಸೇನೆ ಇದನ್ನು ಖಂಡಿಸುತ್ತಾ ಹಾಗೂ ವಿರೋಧಿಸುತ್ತಾ ಇದೆ. ಪೊಲೀಸರು ಅವನನ್ನು ಬಂಧಿಸಿದ್ದು, ಹಾಗಾಗಿ ಪೊಲೀಸರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಇದು ಕೇವಲ ಕಾಂಗ್ರೆಸ್ಸಿನ ಅವಧಿಯಲ್ಲಿ ಯಾಕೆ ಆಗುತ್ತಿದೆ. ಕಾಂಗ್ರೆಸ್ ಗೆದ್ದ ತಕ್ಷಣ ಈ ತರಹ ಘಟನೆಗಳು ಯಾಕೆ ಆಗುತ್ತಿವೆ?. ಹಿಂದೆ ವಿಧಾನಸೌಧದಲ್ಲಿ ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದಾಗ ಸಹ ಇಂತಹ ಘಟನೆ ನಡೆದಿತ್ತು. ಕಾಂಗ್ರೆಸ್ ಗೆದ್ದ ಕ್ಷಣ ಇವರಿಗೆ ಪಾಕಿಸ್ತಾನ ನೆನಪು ಆಗ್ತಾ ಇದೆಯಾ?, ಪಾಕಿಸ್ತಾನ ಎಂದರೆ ಯಾಕೆ ನಿಮಗೆ ಉತ್ಸಾಹ ಬರುತ್ತೆ. ಪಾಕಿಸ್ತಾನ ಈಗ ಭಿಕಾರಿಯಾಗಿದೆ . ಈ ದೇಶದಲ್ಲಿ ಹುಟ್ಟಿ ಇಲ್ಲಿ ಸೌಲಭ್ಯವನ್ನು ತಗೊಂಡು ಶತ್ರು ರಾಷ್ಟ್ರಗಳ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಮುತಾಲಿಕ್ ಕಿಡಿಕಾರಿದರು.
ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ನಾನು ಹೇಳುತ್ತೇನೆ ಇಂಥವರನ್ನು ಕೂಡಲೇ ಎನ್ಕೌಂಟರ್ ಮಾಡಬೇಕು. ದೇಶದ್ರೋಹದ ಹೇಳಿಕೆ ಕೊಟ್ಟು ಇಲ್ಲಿ ಇರುತ್ತಾರೆ ಎಂದರೆ ಇದು ಕ್ಯಾನ್ಸರ್. ಕ್ಯಾನ್ಸರ್ ಹೀಗೆ ಬಿಟ್ಟರೆ ಹರಡಿಕೊಂಡು ಹೋಗುತ್ತದೆ. ಇಂತಹ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು, ಇದನ್ನು ಕೂಡಲೇ ಹದ್ದು ಬಸ್ತಿನಲ್ಲಿ ಇಡುವಂತೆ ಸರ್ಕಾರ ಮತ್ತು ಪೊಲೀಸರು ಮಾಡಬೇಕು. ಇಲ್ಲವಾದರೆ ಇಂಥ ವಿಚಾರಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ತಿಳಿಸಿದರು.