ಸಂಯುಕ್ತ ರಾಷ್ಟ್ರಗಳ ಮಹಾ ಸಭೆಯು ಭಾರತದ ಸಹ ಪ್ರಾಯೋಜಕತ್ವದ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸುತ್ತಾ ಡಿಸೆಂಬರ್ 21 ಅನ್ನು ‘ವಿಶ್ವ ಧ್ಯಾನ ದಿನ’ ಎಂದು ಘೋಷಿಸಿದೆ. ಈ ನಿರ್ಣಯವು ವಿಶ್ವದಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಮನೋಭಾವವನ್ನು ಸಾಕಾರಗೊಳಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಲಿದೆ.
‘ಹಿಮಾಲಯದ ಸಮರ್ಪಣ ಧ್ಯಾನ ಯೋಗ’ದ ಪ್ರವರ್ತಕರಾದ ಸದ್ಗುರು ಶ್ರೀ ಶಿವಕೃಪಾನಂದ ಸ್ವಾಮೀಜಿಯವರು ಕಳೆದ 30 ವರ್ಷಗಳಿಂದ ಸಮರ್ಪಣ ಧ್ಯಾನ ಸಂಸ್ಕಾರದ ಮೂಲಕ ಧ್ಯಾನವನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಪೂರ್ವಜರ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯು ಬರಿಯ ಕಲ್ಪನೆಯಲ್ಲ ಎಂದು ಪೂಜ್ಯ ಸ್ವಾಮೀಜಿಯವರು ತಮ್ಮ ಪ್ರವಚನಗಳಲ್ಲಿ ಹಲವು ಬಾರಿ ಹೇಳಿದ್ದಾರೆ. ‘ವಸುಧೈವ ಕುಟುಂಬಕಂ’ ಎಂದರೆ: ಇಡೀ ಜಗತ್ತು ಒಂದು ಕುಟುಂಬ, ಎಲ್ಲರೂ ಸಮಾನರು. ‘ವಸುಧೈವ ಕುಟುಂಬಕಂ’ ಕಲ್ಪನೆಯು ಯೋಗವನ್ನು ಆಧರಿಸಿದೆ. ಜಗತ್ತಿನಲ್ಲಿ ವಿಶ್ವವು ಒಂದು ಕುಟುಂಬ ಎಂದು ಪ್ರತಿಪಾದಿಸಿ , ಆ ಮೂಲಕ ಎಲ್ಲರೂ ನಂಬುವಂತಹ ಒಂದು ಪುಸ್ತಕವಿಲ್ಲ, ಒಂದು ಭಾಷೆ ಇಲ್ಲ, ಯಾವುದೇ ಧರ್ಮವಿಲ್ಲ, ಮನುಷ್ಯ ಮನುಷ್ಯನನ್ನು ಸೇರಿಸುವ ಏಕೈಕ ಮಾಧ್ಯಮವೆಂದರೆ ಯೋಗ. ಇಂದು, 72 ದೇಶಗಳ ಜನರು ಸಮರ್ಪಣ ಧ್ಯಾನದ ಅಭ್ಯಾಸದ ಮೂಲಕ ತಮ್ಮ ಆಧ್ಯಾತ್ಮಿಕ ಮತ್ತು ಸರ್ವತೋಮುಖ ಪ್ರಗತಿಯನ್ನು ಸಾಧಿಸುತ್ತಿದ್ದಾರೆ.
ಪರಮ ಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿಯವರು ಸಂಯುಕ್ತ ರಾಷ್ಟ್ರಗಳ ಮಹಾ ಸಭೆಯ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ ಮತ್ತು ಭಾರತ ದೇಶದ ಈ ಪ್ರಯತ್ನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಸಂಯುಕ್ತ ರಾಷ್ಟ್ರಗಳ ಮಹಾ ಸಭೆಯ ಈ ನಿರ್ಣಯವು ಇಡೀ ಮನುಕುಲಕ್ಕೆ ಪ್ರಯೋಜನಕಾರಿಯಾಗಿದೆ . ನಾವು ಕಳೆದ 30 ವರ್ಷಗಳಿಂದ 72 ದೇಶಗಳಲ್ಲಿ ಧ್ಯಾನವನ್ನು ಹರಡುತ್ತಿದ್ದೇವೆ ಮತ್ತು ನಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕಂತೆ ಭಾಸವಾಗುತ್ತಿದೆ! ಇದರಲ್ಲಿ ಭಾರತದ ಪ್ರಯತ್ನವೂ ಶ್ಲಾಘನೀಯ ಎಂದು ಪರಮಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಗುರುತತ್ತ್ವ ಗ್ಲೋಬಲ್ ಫೋರಮ್ನ ವೆಬ್ಸೈಟ್ gurutattva.org ಮತ್ತು ಯೂಟ್ಯೂಬ್ ಚಾನೆಲ್ ‘gurutattva’ ದಿಂದ ನೀವು ಧ್ಯಾನದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.