ಬಾಲಿವುಡ್ ತಾರಾ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಸಂಬಂಧ ಹಳಸಿರೋ ಬಗ್ಗೆ, ಇಬ್ಬರು ಬೇರ್ಪಡುವ ಬಗ್ಗೆ ಕಳೆದ ಎರಡು ದಿನಗಳಿಂದ ಸುದ್ದಿಯಾಗ್ತಿತ್ತು. ಡಿಪ್ಪಿ ಪತಿ ರಣವೀರ್ ತಮ್ಮ ಸೋಷಿಯಲ್ ಪುಟದಲ್ಲಿದ್ದ ಮದುವೆ ಫೋಟೋಗಳನ್ನ ಡಿಲೀಟ್ ಮಾಡಿದ್ದು, ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿ ಹಬ್ಬಲಿಕ್ಕೆ ಕಾರಣವಾಗಿತ್ತು. ಪತ್ನಿ ದೀಪಿಕಾರಿಂದ ರಣವೀರ್ ಡಿವೋರ್ಸ್ ಪಡೀತಾರೆ ಅಂತೆಲ್ಲ ಸುದ್ದಿ ಮಾಡಲಾಗಿತ್ತು. ಆದ್ರೀಗ ಖುದ್ದು ರಣವೀರ್ ಸಿಂಗ್ ಪತ್ನಿ ಡಿಪ್ಪಿ ಜೊತೆಗಿನ ಡಿವೋರ್ಸ್ ಮ್ಯಾಟರ್ ಗೆ ಬ್ರೇಕ್ ಹಾಕಿದ್ದಾರೆ.
ಯಸ್, ನಿನ್ನೆಯಷ್ಟೆ ಆಭರಣ ಮಳಿಗೆಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ರಣವೀರ್ ಸಿಂಗ್, ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮಗೆ ಇಷ್ಟವಾದ ಆಭರಣಗಳ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಪತ್ನಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿ, ‘ದೀಪಿಕಾ ನನಗೆ ಮದುವೆ ಹಾಗೂ ನಿಶ್ಚಿತಾರ್ಥದಲ್ಲಿ ಕೊಟ್ಟ ಉಂಗುರ ನನ್ನ ಪಾಲಿನ ಅತ್ಯಂತ ಅಮೂಲ್ಯವಾದ ಆಭರಣ’ಎಂದು ಹೇಳಿಕೊಂಡರು. ಇದೇ ವೇಳೆ ತಾವು ಮದುವೆಯ ಉಂಗುರವನ್ನು ಸದಾ ಧರಿಸುವುದಾಗಿ ಹೇಳಿ ಉಂಗುರವನ್ನು ತೋರಿಸಿದರು.
ಡಿಪ್ಪಿ ಕೊಟ್ಟಿರೋ ಉಂಗುರದ ಮೇಲೆ ಪ್ರಾಣಾನೇ ಇಟ್ಕೊಂಡಿರೋ ಸಿಂಗ್, ಪ್ರೀತ್ಸಿ ಕೈ ಹಿಡಿದವಳನ್ನ ಅರ್ಧಕ್ಕೆ ಕೈಬಿಡ್ತಾರಾ? ಅದರಲ್ಲೂ ಡಿಪ್ಪಿ ಈಗ ಪ್ರಗ್ನೆಂಟ್. ತಮ್ಮ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಮೊದಲ ಮಗು ಮಡಿಲು ತುಂಬುತ್ತಿರುವ ಹೊತ್ತಲ್ಲಿ ಡಿವೋರ್ಸ್ ಪಡೀತಾರಾ? ಚಾನ್ಸೇ ಇಲ್ಲ… ಅನ್ನೋದಕ್ಕೆ ರಣವೀರ್ ಸಿಂಗ್ ಉಂಗುರದ ಬಗ್ಗೆ ಕೊಟ್ಟಿರೋ ಸ್ಟೇಟ್ ಮೆಂಟೇ ಸಾಕು ಅನಿಸುತ್ತೆ.
ನಿಮಗೆಲ್ಲ ಗೊತ್ತಿರೋ ಹಾಗೇ ರಣವೀರ್ – ಡಿಪ್ಪಿ, ರಾಮ್ಲೀಲಾ, ಬಾಜೀರಾವ್ ಮಸ್ತಾನಿ, ಪದ್ಮಾವತ್ ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ದಿ ಬೆಸ್ಟ್ ಪೇರ್ ಎನಿಸಿಕೊಂಡು ರಿಯಲ್ ಲೈಫ್ನಲ್ಲೂ ಜೋಡಿಯಾದರು. 2018ರಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಮುದ್ದು ಕಂದಮ್ಮನ ಆಗಮನಕ್ಕಾಗಿ ಆಸೆಯ ಕಣ್ಗಳಿಂದ ಎದುರುನೋಡ್ತಿದೆ. ಅಂದ್ಹಾಗೇ, ಇಬ್ಬರ ಮನೆಯಲ್ಲೂ ಸಂತಸ-ಸಂಭ್ರಮ ಮನೆಮಾಡಿದ್ದು, ರಾಮ್-ಲೀಲಾ ಮಗುನಾ ಬಾಚಿ ತಬ್ಬಿಕೊಳ್ಳುವುದಕ್ಕೆ, ತೊಟ್ಟಿಲು ಕಟ್ಟಿ ತೂಗೋದಕ್ಕೆ, ಜೋಗುಳ ಹಾಡೋದಕ್ಕೆ ಕಾತುರವಾಗಿದೆ. ಸೆಪ್ಟೆಂಬರ್ ನಲ್ಲಿ ರಾಮ್ ಲೀಲಾ ಮನೆಗೆ ಮೊದಲ ಮಗುವಿನ ಆಗಮನವಾಗ್ತಿದೆ.