ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 9 ಭಾನುವಾರದಂದು ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಜೊತೆಗೆ ಸಂಪುಟ ರಚನೆಯೂ ಸಹ ಆಗಲಿದೆ. ಕರ್ತವ್ಯಪಥದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಲಿದೆ.. ಈ ಕಾರ್ಯಕ್ರಮಕ್ಕೆ ನೆರೆ ಹೊರೆಯ 8-10 ದೇಶಗಳ ಮುಖ್ಯಸ್ಥರಿಗೂ ಆಹ್ವಾನ ನೀಡಲಾಗಿದೆ. ಬಾಂಗ್ಲಾ ಪ್ರಧಾನಿ ಶೇಕ್ ಹಸೀನ ಆಗಮನ ನಿಶ್ಚಯವಾಗಿದೆ. ಅಚ್ಚರಿ ಎಂಬಂತೆ ಮಾಲ್ಡೀವ್ಸ್ ಅಧ್ಯಕ್ಷರಿಗೂ ಆಮಂತ್ರಣ ನೀಡಲಾಗಿದೆ.
ದೆಹಲಿಯಲ್ಲಿ ಇವತ್ತು ಹೈವೋಲ್ಟೇಜ್ ಮೀಟಿಂಗ್ಗಳು ನಡೆಯುತ್ತಿದೆ. ಬಿಜೆಪಿಯ ಸಂಸದೀಯ ಸಭೆ ಆಯೋಜನೆ ಆಗಿದ್ದು, ಸಂಸದೀಯ ನಾಯಕರಾಗಿ ಮೋದಿ ಆಯ್ಕೆ ಆಗಲಿದ್ದಾರೆ. ಸಂಜೆ ಎನ್ಡಿಎ ಕೂಟ ಪ್ರಮುಖರ ಸಭೆ ನಡೆಯಲಿದೆ. ಇದೇ ಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ ಅನ್ನೋದು ನಿರ್ಧಾರ ಆಗಲಿದೆ. ಸಂಪುಟ ರಚನೆಗಾಗಿ ಬಿಜೆಪಿ ಮುಂದೆ ಟಿಡಿಪಿ ಹೊಸ ಸೂತ್ರ ಮುಂದಿಟ್ಟಿದೆ.
ಸ್ಥಾನಮಾನಕ್ಕೆ ಡಿಮ್ಯಾಂಡ್
4 ಸಂಸದ ಸ್ಥಾನಕ್ಕೆ ಒಂದು ಮಂತ್ರಿ ಸ್ಥಾನ ಎಂಬ ಫಾರ್ಮೂಲ
ಫಾರ್ಮೂಲಗೆ ಬಿಜೆಪಿ ಒಪ್ಪಿದ್ರೆ ಟಿಡಿಪಿಗೆ 4, ಜೆಡಿಯುಗೆ 3 ಸ್ಥಾನ
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ 2, LJPಗೆ ಒಂದು
ಸಚಿವ ಸ್ಥಾನದ ಜೊತೆ ಇನ್ನೂ 2 ಬೇಡಿಕೆ ಮಂಡಿಸಿರುವ ಟಿಡಿಪಿ
ಸ್ಪೀಕರ್ಗೆ ಟಿಡಿಪಿ ಬೇಡಿಕೆ, ಡೆಪ್ಯೂಟಿ ನೀಡಲು ಬಿಜೆಪಿ ಸರ್ಕಸ್
ರಾಜಧಾನಿ ಹೈದರಾಬಾದ್ ಕಳೆದುಕೊಂಡಿರುವ ಆಂಧ್ರಪ್ರದೇಶ
ಕನಸಿನ ಅಮರಾವತಿಗೆ ವಿಶೇಷ ಪ್ಯಾಕೇಜ್ ಕೇಳ್ತಿರುವ ನಾಯ್ಡು