ನವದೆಹಲಿ: ಲೋಕಸಭೆ ಚುನಾವಣೆಯ ಎಲ್ಲ ಹಂತಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಆಂಧ್ರಪ್ರದೇ ಶದ ಗುಂಟೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿಡಿಪಿ ಅಭ್ಯರ್ಥಿ ಚಂದ್ರಶೇಖರ್ ಪೆಮ್ಮಸಾನಿ 5,705 ಕೋಟಿ ರೂ. ಆದಾಯದೊಂದಿಗೆ ದೇಶದ ಅತಿ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟಾರೆ 8,360 ಅಭ್ಯರ್ಥಿಗಳು 543 ಕ್ಷೇತ್ರಗಳಿಗೆ ಸರ್ಧಿಸಿದ್ದು, ಈ ಪೈಕಿ ಚಂದ್ರಶೇಖರ್ ಬಳಿಕ ತೆಲಂಗಾಣದ ಚವಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶ್ವೇಶ್ವರ ರೆಡ್ಡಿ (4.568 ಕೋಟಿ) ಎರಡನೇ, ಗೋವಾ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ (1,361 ಕೋಟಿ ರು.) 3ನೇ ಹಾಗೂ ಕುರುಕ್ಷೇತ್ರ ಬಿಜೆಪಿ ಅಭ್ಯರ್ಥಿ ನವೀನ್ ಜಿಂದಾಲ್ (1241 ಕೋಟಿ ರೂ. ) 4ನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕದ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (622 ಕೋಟಿ ರೂ. ಆಸ್ತಿ) ಹಾಗೂ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ (593 ಕೋಟಿ ರೂ.) ಕೂಡ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.
ಶ್ರೀಮಂತ ಅಭ್ಯರ್ಥಿಗಳು
ಚಂದ್ರಶೇಖರ್ – 5,705
ವಿಶ್ವೇಶ್ವರ ರೆಡ್ಡಿ – 4,568
ಪಲ್ಲವಿ ಡೆಂಪೋ – 1,361
ಸ್ಟಾರ್ ಚಂದ್ರು – 1241
ಡಿ.ಕೆ. ಸುರೇಶ್ – 593