- ಲೋಕಸಭೆಯ ಸದಸ್ಯರಾಗಿ ಓವೈಸಿ ಪ್ರಮಾಣವಚನ ಸ್ವೀಕಾರ
- ‘ಜೈ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿದ ಓವೈಸಿ
AIMIM ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿದ ಓವೈಸಿ ಪ್ಯಾಲೇಸ್ತಿನ್ಗೆ ಬೆಂಬಲವಾಗಿ ‘ಜೈ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು ಓವೈಸಿ ಸೋಲಿಸಿದರು. ಪ್ರಮಾಣ ವಚನದ ಕೊನೆಯಲ್ಲಿ “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್” ಎಂದು ಹೇಳಿದ್ದಾರೆ. ಓವೈಸಿ ಹೇಳಿಕೆಗೆ ಕೂಡಲೇ ಆಡಳಿತ ಪಕ್ಷದ ಸದಸ್ಯರು ಘೋಷಣೆಯನ್ನು ದಾಖಲೆಯಿಂದ ತೆಗೆದುಹಾಕುವಂತೆ ವಿರೋಧ ವ್ಯಕ್ತಪಡಿಸಿ ಆಗ್ರಹಿಸಿದರು. 2019ರಲ್ಲಿ ಓವೈಸಿ ತಮ್ಮ ಪ್ರಮಾಣವಚನವ ಸ್ವೀಕರಿಸುವಾಗ “ಜೈ ಭೀಮ್, ಅಲ್ಲಾ-ಓ-ಅಕ್ಬರ್ ಮತ್ತು ಜೈ ಹಿಂದ್” ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದರು.