ದೇಶವು 23 ವರ್ಷಗಳ ಹಿಂದೆ 2001, ಡಿಸೆಂಬರ್ 13 ರಂದು ನಡೆದ ಸಂಸತ್ ಭವನದ ದಾಳಿಯ ಮೂಲಕ ಹೆದರಿಸಿದ ಘಟನೆ ಈಗಲೂ ಅತೀ ದೊಡ್ಡ ಸವಾಲಾಗಿರುವ ಭಯೋತ್ಪಾದನೆಯ ಬಗ್ಗೆ ಹಾಗೂ ದೇಶದ ರಕ್ಷಣೆ ಮತ್ತು ಒಗ್ಗಟ್ಟಿನ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂದೇಶ ಸಾರಿದ್ದಾರೆ.
2001 ರಲ್ಲಿಈ ದಿನದಂದು ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಸಂಸತ್ತಿನ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ ಎಲ್ಲಾ ವೀರ ಹುತಾತ್ಮರಿಗೆ ರಾಷ್ಟ್ರವು ಗೌರವ ಸಲ್ಲಿಸುತ್ತದೆ. ಎಂದು ಶ್ರೀಮತಿ ದ್ರೌಪದಿ ಮುರ್ಮು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅವರ ಧೈರ್ಯ ಮತ್ತು ನಿಸ್ವಾರ್ಥ ಸೇವೆಯು ನಮಗೆ ಸ್ಫೂರ್ತಿ ನೀಡುತ್ತಿದೆ. ಅವರಿಗೆ ಮತ್ತು ಅವರ ಕುಟುಂಬಗಳಿಗೆ ರಾಷ್ಟ್ರವು ಆಳವಾದ ಕೃತಜ್ಞತೆಯನ್ನು ಹೊಂದಿದೆ. ಈ ದಿನ, ಭಯೋತ್ಪಾದನೆಯನ್ನು ಎದುರಿಸುವ ಭಾರತದ ಅಚಲ ಸಂಕಲ್ಪವನ್ನು ನಾನು ಪುನರುಚ್ಚರಿಸುತ್ತೇನೆ. ಭಯೋತ್ಪಾದಕ ಶಕ್ತಿಗಳ ವಿರುದ್ಧ ನಮ್ಮ ದೇಶ ಒಗ್ಗಟ್ಟಾಗಿ ನಿಂತಿದೆ. ಎಂದು ಆ ದಿನವನ್ನು ನೆನೆಸಿಕೊಂಡಿದ್ದಾರೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರರು 2001ರಲ್ಲಿ ಇದೇ ದಿನ ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ನಡೆಸಿ ಒಂಬತ್ತು ಜನರನ್ನು ಕೊಂದಿದ್ದರು. ನಂತರ ಎಲ್ಲಾ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು.