‘ನಿಮ್ಮ ವಸ್ತುವಿಗೆ ನೀವೆ ಜವಾಬ್ದಾರರು’ ಇದನ್ನು ನಾವು ಸಾಮಾನ್ಯವಾಗಿ ಬಸ್, ರೈಲು ಅಥವಾ ಜನ ಸಾಮಾನ್ಯರು ಓಡಾಡುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕಳ್ಳರಿದ್ದಾರೆ ಎಚ್ಚರಿಕೆ ಎನ್ನುವುದನ್ನು ನೋಡುತ್ತಿರುತೇವೆ. ನಾವು ಎಷ್ಟೇ ಜವಾಬ್ದಾರಿ ಇಂದ ಇದ್ದರು ಸಹ ಕಳ್ಳರು ಬುದ್ದಿವಂತರು ಅವರ ಕೈಚಳಕದಿಂದ ತಪ್ಪಿಸಿಕೊಳ್ಳಲಾಗದು.
ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿ ಹೆಚ್ಚು ಜಾಗ್ರತರಾಗಿ ಇದನ್ನು ತಡೆಯಲು ಏನೆ ಮಾಡಿದ್ರು ಕೆಲವೊಂದು ಬಾರಿ ಅದನ್ನು ತಪ್ಪಿಸಲು ಆಗುವುದಿಲ್ಲ. ರೈಲು ನಿಲ್ದಾಣದಿಂದ ನಿಧಾನವಾಗಿ ಚಲಿಸುತ್ತಿರುವಾಗಲೇ ಯುವಕ ರೈಲಿನ ಪಕ್ಕದ ಪ್ಲಾಟ್ಫಾರ್ಮ್ನಲ್ಲಿ ನಡೆಯುತ್ತಾ ರೈಲಿನ ವೇಗ ಹೆಚ್ಚಿದ ತಕ್ಷಣ ಕೈ ಒಳಗೆ ಹಾಕಿ ಪ್ರಯಾಣಿಕರೊಬ್ಬರ ಫೋನ್ ಕಿತ್ತುಕೊಂಡು ಓಡಿ ಹೋಗಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಜಾಗ್ರತೆಯಿಂದ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.