ಐಎಎಸ್ ಅಧಿಕಾರಿ ಟಿವಿ ಸೋಮನಾಥನ್ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ನರೇಂದ್ರ ಮೋದಿ ಸರ್ಕಾರ ನೇಮಿಸಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಾಜೀವ್ ಗೌಬಾ ಅವರಿಗೆ ಸಂಪುಟ ಕಾರ್ಯದರ್ಶಿಯಾಗಿ ಎರಡನೇ ಬಾರಿ ವಿಸ್ತರಣೆ ಮಾಡಲಾಗಿಲ್ಲ.
ಸ್ವಾಮಿನಾಥನ್ ತಮಿಳುನಾಡು ಕೇಡರ್ನ 1987 ಬ್ಯಾಚ್ನ ಐಎಎಸ್ ಅಧಿಕಾರಿ. 2021ರಿಂದ ಸ್ವಾಮಿನಾಥನ್ ಅವರು ಹಣಕಾಸು ಕಾರ್ಯದರ್ಶಿ ಹುದ್ದೆಯನ್ನು ನೋಡಿಕೊಳ್ಳುತ್ತಿದ್ದರು. ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳಲ್ಲಿ ಅವರು ಅತ್ಯಂತ ಹಿರಿಯರಾಗಿದ್ದರು.
ಟಿವಿ ಸೋಮನಾಥನ್ ಅವರು ಆಡಳಿತಾತ್ಮಕ ಸೇವೆಗಳಲ್ಲಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಣಕಾಸು ಸಚಿವಾಲಯಕ್ಕೆ ಸೇರುವ ಮೊದಲು ಅವರು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಇದಲ್ಲದೇ ಬಜೆಟ್ ಮೇಕಿಂಗ್ ತಂಡದಲ್ಲೂ ಅವರಿದ್ದರು.