- ನಿನ್ನೆ ತಿಹಾರ್ ಜೈಲಿಗೆ ಮರಳಿಸ ಅರವಿಂದ್ ಕೇಜ್ರಿವಾಲ್
- ಎಲ್ಲಾ ಎಕ್ಸಿಟ್ ಪೋಲ್ಗಳು ನಕಲಿ ಎಂದ ಕೇಜ್ರಿವಾಲ್
ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದೆ. ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಾರು ಜಾಮೀನು ಅವಧಿ ಕೂಡ ಅಂತ್ಯಗೊಂಡಿದ್ದು, ನಿನ್ನೆ ತಿಹಾರ್ ಜೈಲಿಗೆ ಮರಳಿದ್ದಾರೆ. ತಿಹಾರ್ ಜೈಲಿಗೆ ಹೋಗುವುದಕ್ಕೂ ಮುನ್ನ ಅವರು ಮಾತನಾಡಿದ್ದು, ಸುಪ್ರೀಂ ಕೋರ್ಡ್ ನನಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಈ ದಿನಗಳು ನನ್ನ ಜೀವನಸ ಆವಿಸ್ಮರಣೀಯ ಕ್ಷಣಗಳಾಗಿದ್ದು, ಒಂದು ನಿಮಿಷವನ್ನು ವ್ಯರ್ಥ ಮಾಡಿಲ್ಲ. ದೇಶವನ್ನು ಉಳಿಸಲಿಕ್ಕಾಗಿ ಪ್ರಚಾರ ಮಾಡಿದ್ದೇನೆ. ನಮಗೆ ಎಎಪಿಗಿಂತ ದೇಶವೇ ಮೊದಲು ಎಂದು ಹೇಳಿದರು.
ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆದ್ದ ಮುಖ್ಯಮಂತ್ರಿಯನನು ಸಾಕ್ಷ್ಯಾಧಾರಗಳಿಲ್ಲದೆಯೂ ಬಂಧಿಸಲಾಗಿದೆ. ಮುಂದೆ ಇತರರಿಗೂ ಇದೇ ಹಾದಿ ಕಾದಿದೆ ಎಂದು ತಿಳಿಸಿದರು.
ಮತಗಟ್ಟೆ ಸಮೀಕ್ಷೆಗಳು ನಕಲಿ ಎಂಬುದನ್ನು ನಾನು ಲಿಖಿತವಾಗಿ ಬರೆದುಕೊಡಬಲ್ಲೆ. ರಾಜಸ್ಥಾನದಲಲಿ 25 ಲೋಕಸಭಾ ಕ್ಷೇತ್ರಗಳಿವೆ. ಆದರೆ ಸಮೀಕ್ಷೆಯೊಂದು ಅವರಿಗೆ 33 ಸ್ಥಾನಗಳನನು ನೀಡಿದೆ. ಇಂಥ ನಕಲಿ ಸಮೀಕ್ಷೆಗಳ ಫಲಿತಾಂಶಗಳನನು ಪ್ರಕಟಿಸುವ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಜೂನ್ 4 ರಂದು ಬಿಜೆಪಿ ಸರ್ಕಾರ ರಚಿಸುವುದಿಲ್ಲ. ಈ ಸಮೀಕ್ಷೆಗಳ ಮೂಲಕ ನಮ್ಮ ಕಾರ್ಯಕರ್ತರನ್ನು ಖಿನ್ನರನ್ನಾಗಿಸುವ ಯತ್ನ ನಡೆದಿದೆಯಷ್ಟೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.