ನವದೆಹಲಿ: ದೀಪಾವಳಿ ಹಬ್ಬ, ಛತ್ ಪೂಜೆಯ ಹಿನ್ನೆಲೆಯಲ್ಲಿ ಬಸ್, ರೈಲುಗಳಲ್ಲಿ ಪ್ರಯಾಣಿಕರ ದಂಡೇ ತುಂಬಲಿದ್ದು, ಅದಕ್ಕಾಗಿ ಯಾವುದೇ ದಟ್ಟಣೆಗೆ ಅವಕಾಶವಾಗದಿರಲು ಭಾರತೀಯ ರೈಲ್ವೆ ಹಬ್ಬಕ್ಕಾಗಿ 250ಕ್ಕೂ ಅಧಿಕ ವಿಶೇಷ ರೈಲುಗಳು ಸಂಚರಿಸಲಿದೆ ಎಂದು ಘೋಷಿಸಿದೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳ ಮತ್ತು ಒಡಿಶಾ ಸೇರಿದಂತೆ ಪ್ರಸಿದ್ಧ ಸ್ಥಳಗಳಲ್ಲಿ ಹೆಚ್ಚುವರಿ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಇದನ್ನು ಓದಿ : ಮುಡಾ ಮಾಜಿ ಆಯುಕ್ತ ನಟೇಶ್ ED ವಶಕ್ಕೆ!
ಪ್ರತೀ ವರ್ಷ ದೀಪಾವಳಿ, ಛತ್ ಪೂಜೆಯ ಸಂದರ್ಭದಲ್ಲಿ ಭಾರತೀಯ ರೈಲ್ವೆ ಹೆಚ್ಚಿನ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ತಮ್ಮ ಊರಿನಿಂದ ದೂರ ಇದ್ದು ಬೇರೆ, ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹಬ್ಬದ ಸಂದರ್ಭದಲ್ಲಿ ಊರಿಗೆ ಮರಳುವವರ ಸಂಖ್ಯೆ ಹೆಚ್ಚಿರುತ್ತದೆ.
ಇದನ್ನು ಓದಿ: 3ನೇ ಟೆಸ್ಟ್ ಪಂದ್ಯದಿಂದಲೂ ಸ್ಟಾರ್ ಪ್ಲೇಯರ್ ವಿಲಿಯಮ್ಸನ್ ಔಟ್!
ಹೀಗೆ ಪ್ರಸ್ತುತ ಸಂಚರಿಸುತ್ತಿರುವ ರೈಲುಗಳಲ್ಲಿ ಸೀಟು ಸಿಗದೆ ಪ್ರಯಾಣಿಕರು ಸಾಕಷ್ಟು ಕಷ್ಟ ಅನುಭವಿಸುವ ಸ್ಥಿತಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಾರಿಯೂ 250ಕ್ಕೂ ಅಧಿಕ ವಿಶೇಷ ರೈಲುಗಳನ್ನು ಹಲವು ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ವರದಿ ತಿಳಿಸಿದೆ.