ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪುತ್ರಿ, ಬಿಆರ್ ಎಸ್ ನಾಯಕಿ ಕೆ ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ನಿಂದ ಮಂಗಳವಾರ ಜಾಮೀನು ಸಿಕ್ಕಿದೆ. ದೆಹಲಿ ಲಿಕ್ಕರ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೇಸಿಗೆ ಸಂಬಂಧಪಟ್ಟಂತೆ ಕವಿತಾಗೆ ಜಾಮೀನು ಸಿಕ್ಕಿದೆ. ದೆಹಲಿ ಅಕ್ರಮ ಲಿಕ್ಕರ್ ಹಗರಣದಲ್ಲಿ ಕಳೆದ ಮಾರ್ಚ್ 15ರಂದು ವಿಧಾನ ಪರಿಷತ್ ಸದಸ್ಯೆ ಕೆ ಕವಿತಾ ಬಂಧಿಸಲ್ಪಟ್ಟಿದ್ದರು.
ಇಡಿ ಮತ್ತು ಸಿಬಿಐ ಎರಡೂ ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ. ಎರಡೂ ಪ್ರಕರಣಗಳಲ್ಲಿ ತಲಾ 10 ಲಕ್ಷ ಜಾಮೀನು ಬಾಂಡ್ ಇರಿಸುವಂತೆ ಹಾಗೂ ಪಾಸ್ಪೋರ್ಟ್ ನ್ನು ಒಪ್ಪಿಸುವಂತೆ ಷರತ್ತುಗಳನ್ನು ವಿಧಿಸಲಾಗಿದೆ. ಕೋರ್ಟ್ ಪ್ರಕ್ರಿಯೆಗಳ ನಂತರ ಕವಿತಾ ಬಿಡುಗಡೆಯಾಗಲಿದ್ದಾರೆ. ಸುಮಾರು 5 ತಿಂಗಳು ಜೈಲಿನಲ್ಲಿ ಕಳೆದ ಬಳಿಕ ಅವರಿಗೆ ಜಾಮೀನು ಮಂಜೂರಾಗಿದೆ.