ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹರಿಯಾಣ, ಪಂಜಾಬ್ ಹಾಗೂ ಚಂಡೀಗಢದಲ್ಲಿ ಭಾನುವಾರ ಗಾಳಿಯ ಗುಣಮಟ್ಟ ಮತ್ತೆ ಅತ್ಯಂತ ಕಳಪೆಯಾಗಿದೆ. ಹರಿಯಾಣ ಹಾಗೂ ಪಂಜಾಬ್ನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 342 ರಷ್ಟು ದಾಖಲಾಗಿದೆ. ಇದೇ ವೇಳೆಗೆ ರಾಜಧಾನಿ ದೆಹಲಿಯಲ್ಲಿ ಎಕ್ಯೂಐ ಸೂಚ್ಯಂಲ 335 ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ದೆಹಲಿಯ ಅಕ್ಷರಧಾಮದಲ್ಲಿ 351, ಆನಂದ್ ವಿಹಾರ್ 351, ಮಥುರಾ ರಸ್ತೆ 323, ದ್ವಾರಕಾ ಸೆಕ್ಟರ್ 341, ಐಜಿಐ ವಿಮಾನ ನಿಲ್ದಾಣ 326, ಆರ್ಕೆ ಪುರಂ 368 ಮತ್ತು ವಜೀರಪುರದಲ್ಲಿ 366ರಷ್ಟು ಎಕ್ಯೂಐ ದಾಖಲಾಗಿದೆ.
ಇದನ್ನು ಓದಿ: ಬಿಎಸ್ಎನ್ಎಲ್ನಿಂದ ಕೈಗೆಟುಕುವ ದರದ ವಾರ್ಷಿಕ ಪ್ಲಾನ್!
ಹರಿಯಾಣದ ಕೈಥಲ್ನಲ್ಲಿ 284, ಬಹದ್ದೂರ್ಗಢ 278, ಪಂಚಕುಲಾ 270, ಗುರುಗ್ರಾಮ 240, ಯಮುನಾನಗರ 231, ಕುರುಕ್ಷೇತ್ರ 221 ಸೂಚ್ಯಂಕ ದಾಖಲಾಗಿದೆ. ಪಂಜಾಬ್ನ ಅಮೃತಸರದಲ್ಲಿ 246, ಲುಧಿಯಾನಾದಲ್ಲಿ 220, ಪಟಿಯಾಲಾದಲ್ಲಿ 206, ರೂಪನಗರದಲ್ಲಿ 202, ಜಲಂಧರ್ನಲ್ಲಿ 196 ಸೂಚ್ಯಂಕ ದಾಖಲಾಗಿದೆ.
ಇದನ್ನು ಓದಿ: ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಕೊನೆಯ ಎಚ್ಚರಿಕೆ!
ಎಕ್ಯೂಐ ಮಟ್ಟವು ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ’ ಎಂದು, 51ರಿಂದ 100 ರಷ್ಟಿದ್ದರೆ ‘ಸಮಾಧಾನಕರ’, 101 ರಿಂದ 200 ರಷ್ಟಿದ್ದರೆ ‘ಸಾಧಾರಣ’, 201 ರಿಂದ 300 ರಷ್ಟಿದ್ದರೆ ‘ಕಳಪೆ’ ಹಾಗೂ 301 ರಿಂದ 400 ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ಅತ್ಯಂತ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.